ದೇವರಹಿಪ್ಪರಗಿ: ಗ್ರಾಮದ ಪಂಚಾಯಿತಿ, ದೇವಾಲಯ ಸಂಪರ್ಕ ರಸ್ತೆಯನ್ನು ಕೆಸರು ಹಾಗೂ ತ್ಯಾಜ್ಯ ನೀರಿನಿಂದ ಮುಕ್ತಗೊಳಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕೆಂದು ಗ್ರಾಮದ ಪ್ರಮುಖರು ಆಗ್ರಹಿಸಿದ್ದಾರೆ.
ತಾಲ್ಲೂಕಿನ ಯಾಳವಾರ ಗ್ರಾಮದಲ್ಲಿ ನೂತನ ಸೇತುವೆಯ ಮೂಲಕ ಗ್ರಾಮ ಪಂಚಾಯಿತಿ ಹಾಗೂ ದೇವಾಲಯವನ್ನು ಸಂಪರ್ಕಿಸುವ ಮುಖ್ಯ ರಸ್ತೆ ಸೇರಿದಂತೆ ಅಂಬಿಗರ ಚೌಡಯ್ಯ ವೃತ್ತ ಗಲೀಜು ನೀರಿನಿಂದ ಆವೃತ್ತವಾಗಿದ್ದು, ರಸ್ತೆ ನಡೆಯಲು ಬಾರದಂತಾ ಸಾರ್ವಜನಿಕರು, ಬೈಕ್ ಸವಾರರು ಪರದಾಡುವಂತಾಗಿದೆ.
ಈ ಕುರಿತು ಗ್ರಾಮದ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ನಿಂಗನಗೌಡ ಖಾನಾಪೂರ ಮಾತನಾಡಿ, ಗ್ರಾಮದ ಚರಂಡಿಗಳು ಚಿಕ್ಕದಾದ ಪರಿಣಾಮ ಮಲೀನ ಹಾಗೂ ತ್ಯಾಜ್ಯ ನೀರು ಅಲ್ಲಿಯೇ ನಿಂತು ಇಡೀ ರಸ್ತೆ ನಡೆಯಲು ಬಾರದಂತಾಗಿದೆ. ಬೇಸಿಗೆಯ ಸಮಯದಲ್ಲಿಯೇ ರಸ್ತೆ ಹಾಗೂ ಚರಂಡಿಗಳ ಸ್ಥಿತಿ ಈ ರೀತಿಯಾದರೆ ಮುಂದೆ ಬರುವ ಮಳೆಗಾಲದಲ್ಲಿ ರಸ್ತೆಯ ಪರಿಸ್ಥಿತಿ ಹೇಗಾಗುತ್ತದೆ ಎಂದು ಊಹಿಸುವುದು ಕಷ್ಟ. ಆದ್ದರಿಂದ ಮಳೆಗಾಲ ಆರಂಭಗೊಳ್ಳುವ ಮುಂಚೆ ನೀರು ಸರಾಗವಾಗಿ ಸಾಗಲು ಸ್ಥಳೀಯ ಗ್ರಾಮ ಪಂಚಾಯಿತಿ ಕೂಡಲೇ ಕ್ರಮ ವಹಿಸಬೇಕು ಎಂದರು.
ಮಳೆಗಾಲದಲ್ಲಿ ಮಳೆನೀರು, ಗಲೀಜು, ತ್ಯಾಜ್ಯದಿಂದ ಸಾಂಕ್ರಾಮಿಕ ರೋಗಗಳು ಉಲ್ಬಣಿಸಿ ಜನತೆ ನರಳುವಂತಾಗಬಾರದು, ಆದ್ದರಿಂದ ಕೂಡಲೇ ರಸ್ತೆಯಲ್ಲಿ ಯಾವುದೇ ನೀರು ನಿಲ್ಲದಂತೆ ಕ್ರಮ ಕೈಗೊಂಡು ಸ್ವಚ್ಛವಾಗಿರುವಂತೆ ಮಾಡಿದಲ್ಲಿ ಆರೋಗ್ಯ ದೃಷ್ಟಿಯಿಂದ ಒಳ್ಳೆಯದು ಹಾಗೂ ಚೌಡಯ್ಯ ವೃತ್ತಕ್ಕೂ ಮೆರಗು ಜೊತೆಗೆ ಸಾರ್ವಜನಿಕರಿಗೂ ಸಹಕಾರಿಯಾಗಲಿದೆ ಎಂದು ಗ್ರಾಮ ಪಂಚಾಯಿತಿ ಮಾಜಿಅಧ್ಯಕ್ಷ ದಂಡುಗೌಡ ನಾಗರಾಳ, ಮಾಜಿ ಸದಸ್ಯ ಸಂಗನಗೌಡ ತೆಗ್ಗಿನಮನಿ, ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ನೀಲಕಂಠ ತೋಳಬಂದಿ ಆಗ್ರಹಿಸಿದ್ದಾರೆ.
Subscribe to Updates
Get the latest creative news from FooBar about art, design and business.
ಕೆಸರುಗದ್ದೆಯಂತಾದ ಮುಖ್ಯ ರಸ್ತೆಗೆ ಮುಕ್ತಿ ನೀಡಲು ಗ್ರಾಮಸ್ಥರ ಆಗ್ರಹ
Related Posts
Add A Comment

