ಚಿಮ್ಮಡ: ಮಕ್ಕಳಲ್ಲಿ ಅಡಗಿರುವ ಸೂಪ್ತ ಪ್ರತಿಭೆಯನ್ನು ಜಗತ್ತಿಗೆ ಪರಿಚಯಿಸುವ ವೈಜ್ಞಾನಿಕ ಶಿಕ್ಷಣ ನೀಡುವ ಕಾರ್ಯ ಶಿಕ್ಷಣ ಸಂಸ್ಥೆಗಳಿಂದಾಗಬೇಕು ಎಂದು ಶಾಸಕ ಸಿದ್ದು ಸವದಿ ಹೇಳಿದರು.
ಗ್ರಾಮದ ಶ್ರೀ ಪ್ರಭುಲಿಂಗೇಶ್ವರ ಇಂಟರನ್ಯಾಷನಲ್ ಆಂಗ್ಲ ಮಾದ್ಯಮ ಶಾಲೆಯಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಬೇಸಿಗೆ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅಥಿತಿಗಳಾಗಿ ಆಗಮಿಸಿ ಮಾತನಾಡಿದ ಅವರು ಗುಣಮಟ್ಟದ ಶಿಕ್ಷಣ ಗ್ರಾಮೀಣ ಭಾಗದಲ್ಲಿ ನೀಡುವ ಉದ್ದೇಶದಿಂದಲೇ ಈ ಶಿಕ್ಷಣ ಸಂಸ್ಥೆ ಪ್ರಾರಂಭಿಸಲಾಗಿದ್ದು ನಮ್ಮ ಮಕ್ಕಳು ಶಿಕ್ಷಣಕ್ಕಾಗಿ ಮಂಗಳೂರು, ಬೆಂಗಳೂರು ಅಲೆಯುವ ಬದಲಾಗಿ ಅಲ್ಲಿನ ವಿದ್ಯಾರ್ಥಿಗಳೇ ಅತೀ ಕಡಿಮೆ ವ್ಯಚ್ಯದಲ್ಲಿ ನಮ್ಮ ಭಾಗಕ್ಕೆ ಬಂದು ಕಲಿಯುವಂತಹ ಶೈಕ್ಷಣಿಕ ವಾತಾವರಣ ಈ ಸಂಸ್ಥೆ ಸೃಷ್ಠಿಸಲಿದೆ ಎಂದರು.
ಸಂಸ್ಥೆಯ ಪ್ರಾಚಾರ್ಯ ಫಿಲಿಪ್ ಥಾಮಸ್ ಮಾತನಾಡಿ ಪ್ರತಿಯೊಬ್ಬ ಪಾಲಕರು ತಾವು ಎಷ್ಠೆ ತೊಂದರೆಯಲ್ಲಿದ್ದರು ತಮ್ಮ ಮಕ್ಕಳ ಶಿಕ್ಷಣ, ಭವಿಷ್ಯದ ಕುರಿತು ಯಾವುದೇ ರಾಜಿ ಮಾಡಿಕೊಳ್ಳದೆ ಶಿಕ್ಷಣ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆ ಯಾಗಿದ್ದು ಅವರ ನಿರೀಕ್ಷೆಗೆ ತಕ್ಕ ಮೌಲ್ಯಯುತ ಶಿಕ್ಷಣ ನೀಡುವ ಧೇಯ ನಮ್ಮ ಸಂಸ್ಥೆ ಹೊಂದಿದೆ ಎಂದರು.
ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ವಿದ್ಯಾಧರ ಸವದಿ ಪ್ರಾಸ್ತಾವಿಕವಾಗಿ ಮಾತನಾಡಿದರು,
ಹಿಪ್ಪೋ ಕ್ಯಾಂಪಸ್ ನಿರ್ದೆಶಕ ರಾಹುಲ್ ಉಟ್ಟೂರೆ, ಪ್ರಗತಿಪರ ರೈತ ದಾನಪ್ಪ ಆಸಂಗಿ, ರಾಜು ಬಗನಾಳ ಮಾತನಾಡಿದರು. ಸಮಾರಂಭದ ಸಾನಿಧ್ಯವನ್ನು ಸಾಧು ಮಹಾರಾಜರ ಮಠದ ಶ್ರೀ ಜನಾರ್ಧನ ಮಹಾರಾಜರು ವಹಿಸಿದ್ದರು.
ಜಿ.ಪಂ. ಮಾಜಿ ಸದಸ್ಯ ಬಾಬಾಗೌಡ ಪಾಟೀಲ, ಪುಂಡಲಿಕಪ್ಪಾ ಪೂಜಾರಿ, ಪಿಕೆಪಿಎಸ್ ಅಧ್ಯಕ್ಷ ಶಂಕರ ಬಟಕುರ್ಕಿ, ಆನಂದ ಕಂಪು, ಗ್ರಾ.ಪಂ. ಮಾಜಿ ಅಧ್ಯಕ್ಷ ಗುರಲಿಂಗಪ್ಪಾ ಪೂಜಾರಿ, ಆನಂದ ಕವಟಿ, ಪ್ರಭು ನೇಸೂರ, ಬೀರಪ್ಪಾ ಹಳೆಮನಿ, ಸತ್ಯಪ್ಪಾ ನೇಸೂರ, ರಾಚಯ್ಯ ಮಠಪತಿ ಸೇರಿದಂತೆ ಹಲವಾರು ಜನ ಪ್ರಮುಖರು ವೇದಿಕೆಯಲ್ಲಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

