ಚಡಚಣ: ಡೆಂಗ್ಯೂ ಜ್ಷರವು ಸೋಂಕಿತ ಹೆಣ್ಣು ಸೊಳ್ಳೆಗಳ ಕಚ್ಚುವಿಕೆಯ ಮೂಲಕ ಹರಡುತ್ತದೆ. ಪ್ರಾಥಮಿಕವಾಗಿ ಈಡಿಸ್ ಮತ್ತು ಈಜಿಪ್ಟಿ ಮತ್ತು ಈಡಿಸ್ ಅಲ್ಬೋಪಿಕ್ಟಸ್. ಈ ರೋಗವು ಅಧಿಕ ಜ್ವರದಂತಹ ರೋಗಲಕ್ಷಣಗಳೊಂದಿಗೆ ಪ್ರಕಟವಾಗುತ್ತದೆ ಮತ್ತು ತೀವ್ರತರವಾದ ಪ್ರಕರಣಗಳಲ್ಲಿ ಹೆಮರಾಜಿಕ್ ಜ್ವರ, ದೀರ್ಘಕಾಲದ ತಲೆನೋವು ಮತ್ತು ಸ್ನಾಯು ಮತ್ತು ಕೀಲು ನೋವುಗಳಿಗೆ ಕಾರಣವಾಗುತ್ತದೆ. ಆರಂಬಿಕ ಪತ್ತೆ ಮತ್ತು ಚಿಕಿತ್ಸೆಗಾಗಿ ಚಿಹ್ನೆಗಳು ಮತ್ತು ರೋಗಲಕ್ಷಣಗಳನ್ನು ಗುರುತಿಸುವುದು ಅತ್ಯಗತ್ಯ. ಡೆಂಗ್ಯೂ ಜ್ವರಕ್ಕೆ ಭಯ ಬೇಡ ಮುನ್ನೆಚ್ಚೆರಿಕೆ ಬೇಕು ಎಂದು ಚಡಚಣ ಸಮುದಾಯ ಆರೋಗ್ಯ ಕೇಂದ್ರದ ಆಡಳಿತಾಧಿಕಾರಿ ಡಾ.ಜಾನ್ ಕಟವಟಿಯವರು ಹೇಳಿದರು.
ಗುರುವಾರದಂದು ಚಡಚಣ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ವತಿಯಿಂದ ಹಮ್ಮಿಕೊಂಡಿದ್ದ ‘ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ’ ಅಂಗವಾಗಿ ಹಮ್ಮಿಕೊಂಡಿದ್ದ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಈ ವೇಳೆಯಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಆರ್.ಬಿ.ಲಾಳಸಂಗಿಯವರು ಮಾತನಾಡುತ್ತ. ಸೊಳ್ಳೆಗಳ ಸಂತಾನೋತ್ಪತ್ತಿ ತಾಣಗಳನ್ನು ನಿವಾರಿಸಿ. ಮನೆ ಮತ್ತು ನೆರೆಹೊರೆಯಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುವ ಯಾವುದೇ ಪಾತ್ರೆಗಳು, ಬಕೆಟ್‌ಗಳು ಅಥವಾ ಇತರ ವಸ್ತುಗಳನ್ನು ತೆಗೆದುಹಾಕಿ. ನೀರಿನ ಶೇಖರಣೆಯನ್ನು ತಡೆಗಟ್ಟಲು ಮನೆಯ ಒಳಚರಂಡಿ ವ್ಯವಸ್ಥೆಯನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ. ಸೊಳ್ಳೆ ನಿವಾರಕಗಳನ್ನು ಬಳಸಿ. ಸೊಳ್ಳೆಗಳು ಒಳಬರುವುದನ್ನು ತಡೆಯಲು ಮನೆಯ ಕಿಟಕಿಗಳು ಮತ್ತು ಬಾಗಿಲುಗಳನ್ನು ಚೆನ್ನಾಗಿ ಸ್ಕ್ರೀನಿಂಗ್ ಮಾಡಲಾಗಿದೆ ಎಂದು ಖಚಿತಪಡಿಸಿಕೊಳ್ಳಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ರಾಘವೇಂದ್ರ ಸಾವಂತ, ಎಂ.ಬಿ.ತೇಲಿ, ಎಸ್.ಜಿ.ವಾಲಿಕಾರ, ಪಿ.ವಾಯ್.ಕುರಿ, ಬಿ.ಎ.ಮೇತ್ರಿ, ಪ್ರಕಾಶ ಅಂಬಿಗೇರ, ಪ್ರಶಾಂತ ಸಾಳುಂಕೆ, ಎನ್.ಬಿ.ಬಡಿಗೇರ, ಮಲ್ಲು ಕರ್ಜಗಿ, ಆರ್.ಡಿ.ಕುಲಕರ್ಣಿ, ಚೇತನ ಆಳೂರ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಗ್ರಾಮಸ್ಥರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
ಡೆಂಗ್ಯೂ ಜ್ವರಕ್ಕೆ ಭಯ ಬೇಡ ಮುನ್ನೆಚ್ಚೆರಿಕೆ ಬೇಕು :ಡಾ.ಜಾನ್
Related Posts
Add A Comment

