ಚಡಚಣ: ಪಟ್ಟಣದ ಮಹಾದೇವ ಮಠದಲ್ಲಿ ಇದೆ ರವಿವಾರದಂದು ಬಸವ ಸಂಗಮ ಪ್ರಕಾಶನದಿಂದ ಚಡಚಣ ಮಹಿಳಾ ಸಾಹಿತಿ ಹಾಗೂ ಪತ್ರಕರ್ತೆಯಾದ ವಿದ್ಯಾ ಕಲ್ಯಾಣಶೆಟ್ಟಿ ಅವರ ಕಾವ್ಯಕನ್ನಿಕೆ ಗ್ರಂಥ ಲೋಕಾರ್ಪಣೆಗೊಳ್ಳಲಿದೆ.
ಈ ಕಾರ್ಯಕ್ರಮಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತನ ಅಧ್ಯಕ್ಷ ಹಾಸಿಂಪೀರ ವಾಲೀಕಾರ ಪುಸ್ತಕ ಬಿಡುಗಡೆ ಮಾಡಲಿದ್ದು, ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಸಿದ್ದೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಬಿ ಎಂ ಕೋರೆ ಅವರು ಮಾಡಲಿದ್ದಾರೆ.
ಶ್ರೀದೇವಿ ಅಕ್ಕನವರು ಜ್ಯೋತಿ ಬೆಳಗಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಜಂಬುನಾಥ ಕಂಚ್ಯಾಣಿ. ಪುಸ್ತಕ ಪರಿಚಯವನ್ನು ಡಾ ಎಂ ಎಸ್ ಮಾಗಣಗೇರಿ ಮಾಡಲಿದ್ದಾರೆ, ಸಾನಿಧ್ಯ ಚಡಚಣ ವಿರಕ್ತಮಠದ ಪೂಜ್ಯರಾದ ಷಡಕ್ಷರಿ ಸ್ವಾಮಿಗಳು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಡಾ ಸಂಗಮೇಶ ಮೇತ್ರಿ, ಪ್ರೊ ಆರ್ ಪಿ ಬಗಲಿ, ಪ್ರೊ ಎಸ್ ಕೆ ಕುಲಕರ್ಣಿ, ಭೀಮುಗೌಡ ಬಿರಾದಾರ, ಶಂಕರ ಹಾವಿನಾಳ, ರಮೇಶ ಬಿರಾದಾರ ಸೇರಿದಂತೆ ಮುಂತಾದವರು ಭಾಗವಹಿಸಲಿದ್ದಾರೆ ಎಂದು ಬಸವ ಸಂಗಮ ಪ್ರಕಾಶನದ ಅಧ್ಯಕ್ಷ ಸಂತೋಷ ಕಲ್ಯಾಣಶೆಟ್ಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

