ತಿಕೋಟಾ: ತಾಲೂಕಿನ ರೈತರು ಸಂಕಷ್ಟದಲ್ಲಿದ್ದು ಕಬ್ಬಿನ ಬಿಲ್ ಪಾವತಿಸುವಂತೆ ತಹಸೀಲ್ದಾರ ಸುರೇಶ ಮುಂಜೆ ಅವರಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮನವಿ ಸಲ್ಲಿಸಿದರು.
ತಿಕೋಟಾ ತಾಲೂಕಾ ಅದ್ಯಕ್ಷ ಸಾತಲಿಂಗಯ್ಯಾ ಸಾಲಿಮಠ ಮಾತನಾಡಿ, ಕಬ್ಬು ಬೆಳೆಗಾರರು ಸಂಕಷ್ಟದಲ್ಲಿದ್ದು ಕಳೆದ ಆರು ತಿಂಗಳುಗಳಿಂದ ಕಾರ್ಖಾನೆ ಮಾಲಿಕರು ಹಣ ಪಾವತಿಸದೆ ಸತಾಯಿಸುತ್ತಿದ್ದು ಇದರಿಂದ ರೈತರಿಗೆ ಹಣ ಬಾರದೇ ಹಲವಾರು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಜಮಖಂಡಿ ಶುಗರ್ಸ, ಸಾಯಿಪ್ರೀಯಾ ಶುಗರ್ಸ ಅಲಬಾಳ, ಬಸವೇಶ್ವರ ಶುಗರ್ಸ ಕಾರಜೋಳ ಇನ್ನು ಹಲವು ಸಕ್ಕರೆ ಕಾರ್ಖಾನೆ ಮಾಲಿಕರು ಕಬ್ಬಿನ ಬಿಲ್ಲು ರೈತರಿಗೆ ಪಾವತಿಸಬೇಕಿದೆ, ಆದಷ್ಟು ಬೇಗನೆ ಬಿಲ್ ಪಾವತಿಸದಿದ್ದಲ್ಲಿ ಹೋರಾಟ, ರಸ್ತಾರೋಕೊ ಅನಿವಾರ್ಯವಾಗುತ್ತದೆ, ಇದಕ್ಕೆ ಆಸ್ಪದ ಕೊಡದೆ ರೈತರಿಗೆ ಅನೂಕೂಲ ಮಾಡಿಕೋಡಬೇಕೆಂದು ತಹಸೀಲ್ದಾರ ಅವರಿಗೆ ಮನವಿ ಮಾಡಲಾಯಿತು.
ತಿಕೋಟಾ ತಹಸೀಲ್ದಾರ ಸುರೇಶ ಮುಂಜೆ ಪೋನ ಮುಖಾಂತರ ಕೃಷಿ ಅಧಿಕಾರಿಗಳಾದ ಎಸ ಜಿ ಹಿರೇಂಟ ಜಮಖಂಡಿ ಶುಗರ್ಸ ಇವರ ಜೊತೆ ಮಾತನಾಡಿ, ಆದಷ್ಟು ಬೇಗನೆ ಕಬ್ಬಿನ ಬಿಲ್ಲು ಪಾವತಿಸುವುದಾಗಿ ಭರವಸೆ ನೀಡಿದ್ದಾರೆಂದು ಹೇಳಿದರು.
ಇದೆ ವೇಳೆ ರೈತ ಮುಖಂಡರಾದ ಹೊನವಾಡ ಅಧ್ಯಕ್ಷ ಹನಮಂತ ಬ್ಯಾಡಗಿ, ಜಿಲ್ಲಾ ಸಂಚಾಲಕ ನಜೀರ ನಂದರಗಿ, ಕಲ್ಲಪ್ಪ ಮುಂಜಾನ, ಧರೆಪ್ಪ ಸೋರಡಿ, ಖಾದರ ವಾಲೀಕಾರ, ಎಸ ಎಸ ಎಚ್ಚಿ, ತಿಕೋಟಾ ಉಪಾಧ್ಯಕ್ಷ ಶಾನೂರ ನಂದರಗಿ ಸೇರಿದಂತೆ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

