ದಾವಣಗೆರೆಯಲ್ಲಿ ಪುಟ್ಟರಾಜ ಗುರು ಅಭಿಮಾನಿ ಭಕ್ತರ ಸಮಾವೇಶದ ಸಮಾರೋಪ
ದಾವಣಗೆರೆ: ಗುರು ಪುಟ್ಟರಾಜರು ರಚಿಸಿದ ಸಾಹಿತ್ಯ ಅದು ಲಿಂಗ ಮೆಚ್ಚಿದ ಸಾಹಿತ್ಯ. ಅದು ಸಾವಿರದ ಸಾಹಿತ್ಯ. ಸಾವಿರದ ಸಾಹಿತ್ಯ ಸಾವಿರ ಸಾವಿರ ಮನೆಗಳಿಗೆ ತಲುಪಿಸುವ ಅಭಿಯಾನ ಯಶಸ್ವಿಯಾಗಿದ್ದು ಇದಕ್ಕೆ ಕಾರಣೀಭೂತರಾದ ಸದಸ್ಯರಿಗೆ ಅಭಿನಂದಿಸುತ್ತೇನೆ. ಗುರು ಸಾಹಿತ್ಯ ಪ್ರಚಾರ ಸೇವೆ ಮುಂದುವರಿಸಿಕೊಂಡು ಹೋಗಲು ಬಯಸಿದ್ದು, ಇದಕ್ಕೆ ತಮ್ಮೆಲ್ಲರ ತನು ಮನ ಧನದ ಸಹಕಾರ ಇರಲಿ ಎಂದು ವಿನಂತಿಸಿಕೊಳ್ಳುತ್ತೇನೆ ಎಂದು ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯ ಸಂಸ್ಥಾಪಕ ವೇ. ಚನ್ನವೀರಸ್ವಾಮಿ ಹಿರೇಮಠ ಹೇಳಿದರು.
ಅವರು ನಗರದ ಕುವೆಂಪು ಕನ್ನಡ ಭವನದಲ್ಲಿ, ಗದುಗಿನ ಡಾ. ಪಂಡಿತ ಪುಟ್ಟರಾಜ ಸೇವಾ ಸಮಿತಿಯು ಹಮ್ಮಿಕ್ಕೊಂಡಿದ್ದ, ಪುಟ್ಟರಾಜ ಗುರುವರ್ಯರ ಅಭಿಮಾನಿ ಭಕ್ತರ ಸಮಾವೇಶದ ಸಂಜೆ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿದರು. ಸಮಾರೋಪ ಸಮಾರಂಭದಲ್ಲಿ ಕದಳಿ ವೇದಿಕೆ ರಾಜ್ಯ ಉಪ ಸಂಚಾಲಕರಾದ ಶ್ರೀಮತಿ ಪ್ರಮಿಳಾ ನಟರಾಜ ದಾವಣಗೆರೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಪೂಜ್ಯಗುರು ಪುಟ್ಟರಾಜರ ಒಡನಾಟ ಅವರ ಲಿಂಗಪೂಜಾ ವೈಭವ ಕುರಿತು ಮಾತನಾಡುತ್ತಾ ಭಾವುಕರಾದರು.
ಇದೇ ಸಂದರ್ಭದಲ್ಲಿ ಸೇವಾ ಸಮಿತಿಗೆ ಚರ್ತುಮುಖ ಸೇವೆ ಸಲ್ಲಿಸಿದ ರೇವಣಸಿದ್ಧಪ್ಪ ಎಂ. ಕೆ. ದಾವಣಗೆರೆ, ಶಿವರಾಜ ಹ. ಉಜ್ಜನಿ ಹಾವೇರಿ, ಡಾ. ಗೀತಾ ಸುತ್ತಕೋಟಿ, ಹಾವೇರಿ, ಸೌಮ್ಯ ಸತೀಶ್ ಧಾರವಾಡ, ದಾವಣಗೆರೆ, ಬಸವರಾಜ ಹಡಪದ ಹಳಿಯಾಳ, ಸರೋಜಿನಿ ಕಾ ಮಾವಿನಮರ ಇಂಡಿ, ಇವರುಗಳಿಗೆ ಗುರು ಸೇವಾ ರತ್ನ ರಾಷ್ಟ್ರೀಯ ಪ್ರಶಸ್ತಿ ಮತ್ತು ಸಾವಿರದ ಸಾಹಿತ್ಯ ಸಾವಿರ ಸಾವಿರ ಮನೆ ಮನಗಳಿಗೆ ಅಭಿಯಾನದಲ್ಲಿ ಅನುಪಮ ಸೇವೆ ಸಲ್ಲಿಸಿದ ಬಸವರಾಜೇಶ್ವರಿ ಶಿರೂರ ಗಾಜರಕೋಟ ಗುರುಮಠಕಲ್, ಪ್ರಶಾಂತ ಸೊಕ್ಕೆ ಜಗಳೂರು ದಾವಣಗೆರೆ, ಅಕ್ಕಮಹಾದೇವಿ ಟಿ. ನೀರಲಗಿ ಹಾವೇರಿ ಇವರುಗಳಿಗೆ ಸಾಹಿತ್ಯ ಸೇವಾ ಶ್ರೀ ರಾಜ್ಯ ಪ್ರಶಸ್ತಿಗಳನ್ನು, ಸಂಸ್ಕೃತಿ ಚಿಂತಕರು, ಸಮಾಜ ಸೇವಕಿಯರಾದ ಗಾಯತ್ರಿ ಸಿದ್ದೇಶ್ವರ ದಾವಣಗೆರೆ ಇವರು ಪ್ರದಾನಮಾಡಿ ಸೇವಾ ಸಮಿತಿಯ ಸೇವೆಯನ್ನು ಶ್ಲಾಘಿಸಿದರು.
ರೇವಣಸಿಧ್ದಯ್ಯ ಹಿರೇಮಠ, ಶಿವಬಸಯ್ಯ ಚರಂತಿಮಠ, ರೇವಣಸಿದ್ಧಪ್ಪ ಎಂ. ಕೆ. ಸೇವಾ ಸಮಿತಿಯ ಜಿಲ್ಲಾ ಅಧ್ಯಕ್ಷ ವಿನಾಯಕ ಪಿ. ಬಿ. ವೇದಿಕೆಯಲ್ಲಿದ್ದರು.
ಸಮಾರೋಪ ಸಮಾರಂಭದ ನಂತರ ಪಂ. ರೇವಣಸಿದ್ಧಯ್ಯ ಹಿರೇಮಠ ಕಲಬುರ್ಗಿ, ಪಂ. ಶಿವಬಸಯ್ಯ ಚರಂತಿಮಠ ದಾವಣಗೆರೆ, ಡಾ. ಸುಮಾ ಹಡಪದ ಹಳಿಯಾಳ, ರೇವಣಸಿದ್ಧಪ್ಪ ಎಂ. ಕೆ. ಶಿಷ್ಯವೃಂದ ದಾವಣಗೆರೆ, ಸೌಮ್ಯ ಸ. ದಾರವಾಡ ಮತ್ತು ತಂಡ ಇವರಿಂದ ವಚನ ಸಂಗೀತ, ಪುಷ್ಪ ಗೋವಿಂದರಾಜು ತಂಡ ದಾವಣಗೆರೆ, ರೇಖಾ ಮತ್ತು ತಂಡ, ಮಮತಾ ಕೊಟ್ರೇಶ, ಮಮತಾ ಮಾಗಳ ಮತ್ತ ತಂಡ ಹಾವೇರಿ, ಮಂಗಳ ಗೌರಿ ತಂಡ ದಾವಣಗೆರೆ ತಂಡ ಭಕ್ತಿಗೀತೆ ಗಾಯನ, ಪಂ. ಶರಣ ಎಸ್. ಬಿ. ಶಿಷ್ಯವೃಂದ ಸಂತೆಬೆನ್ನೂರು, ಡಾ. ಮಂಗಳಾ ಶೇಖರ್ ಶಿಷ್ಯವೃಂದ ದಾವಣಗೆರೆ, ಭರತನಾಟ್ಯ, ಮಮತಾ ನಾಗರಾಜ ಮತ್ತು ತಂಡ ದಾವಣಗೆರೆ ಕಿರು ನಾಟಕ, ಈ ಎಲ್ಲಾ ಕಾರ್ಯಕ್ರಮಗಳು ಸಭಿಕರನ್ನು ಮಂತ್ರಮುಗ್ದರನ್ನಾಗಿ ಮಾಡಿದವು.
ನಂದಿನಿ ಗಂಗಾಧರ ಸ್ವಾಗತಿಸಿದರು, ಚಂದ್ರಿಕಾ ಮಂಜುನಾಥ ನಿರೂಪಣೆ ಮಾಡಿದರು, ಪುಷ್ಪಾ ವಂದನಾರ್ಪಣೆ ಮಾಡಿದರು.
ಬೆಳಿಗ್ಗೆ ನಡೆದ ಉದ್ಘಾಟನಾ ಸಮಾರಂಭವನ್ನು ಸಮಿತಿಯ ಮಹಾ ಪೋಷಕ ಜಿಲ್ಲಾ ಅದ್ಯಕ್ಷ ವಿನಾಯಕ ಪಿ. ಬಿ. ದಾವಣಗೆರೆ ಇವರು ಉದ್ಘಾಟನೆ ಮಾಡಿದರು. ಗೌರವಾಧ್ಯಕ್ಷ ಅಣಬೇರು ಮಂಜಣ್ಣ ಅಧ್ಯಕ್ಷತೆ ವಹಿಸಿಕೊಂಡಿದ್ದರು. ಬಾಪೂಜಿ ಶಿಕ್ಷಣ ಸಂಸ್ಥೆಯ ನಿರ್ದೇಕಿ ಕಿರುವಾಡಿ ಗಿರಿಜಮ್ಮ, ದಾವಣಗೆರೆ ವೀರೇಶ್ವರ ಪುಣ್ಯಾಶ್ರಮದ ಕರಿಬಸಪ್ಪ ಜಾಲಿಮರ, ಕ.ಸಾ.ಪ.ದಾವಣಗೆರೆ ಜಿಲ್ಲಾ ಅಧ್ಯಕ್ಷ ಬಿ. ವಾಮದೇವಪ್ಪ ಶ.ಸಾ.ಪ.ದಾವಣಗೆರೆ ಜಿಲ್ಲಾ ಅಧ್ಯಕ್ಷ ಬಿ. ಕೆ ಪರಮೇಶ್ವರಪ್ಪ ದಾವಣಗೆರೆ ಅತಿಥಿಗಳಾಗಿ ಆಗಮಿಸಿದ್ದರು. ಉದ್ಘಾಟನಾ ಸಮಾರಂಭದ ನಂತರ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಕವಿಗಳಿಂದ ಕಲೆಗೆ ಕಣ್ಣಿತ್ತ ಪೂಜ್ಯರು ರಾಜ್ಯಮಟ್ಟದ ಕವಿಗೋಷ್ಠಿ ನಡೆಯಿತು. ಕವಿಗೋಷ್ಠಿ ಅಧ್ಯಕತೆಯನ್ನು ಶ್ರೀ ಎಂ. ಪಿ. ಎಂ. ಕೊಟ್ರಯ್ಯ ನಿವೃತ್ತ ಕನ್ನಡ ಪ್ರಾಧ್ಯಾಪಕರು ಹೂವಿನಹಡಗಲಿ ಇವರು ವಹಿಸಿಕೊಂಡಿದ್ದರು ವೇ. ಚನ್ನವೀರಸ್ವಾಮಿ ಹಿರೇಮಠ (ಕಡಣಿ) ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾರ್ಥನೆಯನ್ನು ಶ್ರೀ ವೀರೇಶ್ವರ ಪುಣ್ಯಾಶ್ರಮದ ವಿದ್ಯಾರ್ಥಿಗಳು ನಡೆಸಿಕೊಟ್ಟರು. ಹಾಲೇಶ ಜಿ. ಇ. ಸ್ವಾಗತ ಮಾಡುವರು. ಮಮತಾ ನಾಗರಾಜ ಪ್ರ.ಕಾರ್ಯದರ್ಶಿ: ಡಾ. ಪಂ. ಪು. ಸೇ.ಸಮಿತಿ ಮಹಿಳಾ ಘಟಕ, ದಾವಣಗೆರೆ ನಿರೂಪಿಸಿದರು. ಕವಿಗೋಷ್ಠಿ ನಿರೂಪಣೆ: ಶ್ರೀಮತಿ ವಾಣಿ ಬಸವರಾಜ ದಾವಣಗೆರೆ ನಡೆಸಿಕೊಟ್ಟರು.

