ಇಂಡಿ: ಶೈಕ್ಷಣಿಕ, ಸಮಾಜಿಕ, ಆರ್ಥಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಅವಕಾಶ ವಂಚಿತರಿಂದ ಉಪ್ಪಾರ ಸಮಾಜ ಅತ್ಯಂತ ಹೀನಾಯ ಸ್ಥಿತಿಯಲ್ಲಿದೆ ಎಂದು ಭಗೀರಥ ಮಹರ್ಷಿ ಸಮಾಜ ಸೇವಾ ಸಂಘದ ತಾಲ್ಲೂಕು ಅಧ್ಯಕ್ಷ ಸುರೇಶ ಕರಂಡೆ ಹೇಳಿದರು.
ಮಂಗಳವಾರ ಭಗೀರಥ ಮಹರ್ಷಿ ಜಯಂತಿ ಅಂಗವಾಗಿ ತಾಲ್ಲೂಕಿನ ಹಿರೇರೂಗಿ ಗ್ರಾಮ ಪಂಚಾಯತ, ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯಾಲಯದಲ್ಲಿ ಹಾಗೂ ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ಭಗೀರಥ ಮಹರ್ಷಿ ವೃತದಲ್ಲಿ ಭಗೀರಥ ಮಹರ್ಷಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರು ಉಪ್ಪಿನ ಮೇಲೆ ತೆರಿಗೆ ಹೇರುವುದನ್ನು ತಡೆಯಲು ಉಪ್ಪಾರ ಜನಾಂಗ ಮಹಾತ್ಮಾ ಗಾಂಧೀಜಿಯೊಂದಿಗೆ ಗುಜರಾತಿನಲ್ಲಿ ಉಪ್ಪಿನ ಸತ್ಯಾಗ್ರಹದಲ್ಲಿ ತೊಡಗಿದ್ದರು. ಈ ಹೋರಾಟ ದೇಶವನ್ನು ಸ್ವತಂತ್ರಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು. ಅದರಲ್ಲಿ ಉಪ್ಪಾರರ ಸೇವೆ ಸ್ಮರಣೀಯ ಎಂದರು.
ತಾಯಿ, ಉಪ್ಪಿನ ಋಣ ತೀರಿಸಲು ಸಾಧ್ಯವಿಲ್ಲ ಎಂಬಂತೆ ಉಪ್ಪಿನ ಋಣ ಎಲ್ಲ ಸಮಾಜದ ಮೇಲಿದೆ. ಆದರೆ ಸದ್ಯ ಸಮಾಜಕ್ಕೆ ರಾಜಕೀಯ ಸ್ಥಾನಮಾನ ಸಿಗದೆಯಿರುವುದರಿಂದ ಪ್ರಗತಿ ಕಾಣದಂತಾಗಿದೆ. ಎಲ್ಲಿಯವರೆಗೆ ರಾಜಕೀಯ ಅವಕಾಶ ಸಿಗುವುದಿಲ್ಲವೋ..! ಅಲ್ಲಿಯವರೆಗೆ ಸಮಾಜ ತುಳಿತಕ್ಕೆ ಕಾರಣವಾಗುತ್ತದೆ. ಹಾಗಾಗಿ ಜನಪ್ರತಿನಿಧಿಗಳು ಹಾಗೂ ಸರಕಾರ ಈ ಸಮಾಜವನ್ನು ಗುರುತಿಸಿ ಮುಖ್ಯ ವಾಹಿನಿಗೆ ಬರಲು ರಾಜಕೀಯ ಕ್ಷೇತ್ರದಲ್ಲಿ ಅವಕಾಶ ಕೊಡಬೇಕು ಎಂದು ಮನವಿ ಮಾಡಿಕೊಂಡರು.
ಇನ್ನು ತಾ.ಪಂ ಮಾಜಿ ಉಪಾಧ್ಯಕ್ಷ ಸೋಮಶೇಖರ್ ಬ್ಯಾಳಿ, ರಮೇಶ್ ಕಲ್ಯಾಣಿ, ಡಾ. ಸಂಜೀವ ಮೊಟಗಿ ಮಾತನಾಡಿ, ಸಮಾಜ ಸುಧಾರಣೆಯಲ್ಲಿ ಯುವಕರ ಪಾತ್ರ ಪ್ರಮುಖ. ದುಶ್ಚಟಗಳಿಗೆ ದಾಸರಾಗದೆ ಇತರರಿಗೆ ಮಾದರಿಯಾಗಿ ಬದುಕಿ ಎಂದರು.
ಈ ಸಂದರ್ಭದಲ್ಲಿ ಅಂಬಿಕಾ ಮಳಸಿದ್ದ ಚನಗೊಂಡ, ಪರಶುರಾಮ ಹತ್ತರಕಿ, ಚಿದಾನಂದ ಉಪ್ಪಾರ, ಶಂಕರ ಪೂಜಾರಿ, ಸುರೇಶ ಡೊಂಗ್ರೊಜ್, ಗ್ರಾ.ಪಂ ಸದಸ್ಯ ಅನೀಲ ರೆಬಿನಾಳ, ಶೀವು ಉಪ್ಪಾರ, ಮಳ್ಳು ಗಬ್ಬೂರು, ಮಲ್ಲು ತೇರಿ, ರವಿ ಮಸಳಿ, ಅಣ್ಣರಾಯ ಮದರಿ, ಮಲ್ಲು ನಂದ್ಯಾಳ, ಜಕ್ಕಪ್ಪ ಉಪ್ಪಾರ, ಸದಾಶಿವ ನರಳೆ, ಕಲ್ಲಪ್ಪ ಕರಂಡೆ, ಜಟ್ಟಪ್ಪ ಉಪ್ಪಾರ, ನಿಂಗು ಬಿರಾದಾರ, ಸಂತೋಷದ ಅಗರಖೇಡ ಹಾಗೂ ಇನ್ನೂ ಅನೇಕರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

