ವಿಜಯಪುರ: ಜಿಲ್ಲೆಯ ಎಲ್ಲ ತಾಲೂಕುಗಳನ್ನು ಈಗಾಗಲೇ ಸರ್ಕಾರ ಬರಪೀಡಿತ ತಾಲೂಕುಗಳೆಂದು ಘೋಷಿಸಿದ್ದು, ಬೆಳೆಹಾನಿಯಾದ ರೈತರ ಖಾತೆಗಳಿಗೆ ನೇರವಾಗಿ ಡಿಬಿಟಿ ಮೂಲಕ ಪರಿಹಾರ ಹಣ ಜಮೆ ಮಾಡಲಾಗುತ್ತಿದ್ದು, ಜಿಲ್ಲೆಯಲ್ಲಿ ೩೬೦೧೦.೨೦ ಲಕ್ಷ ರೂ.ಗಳನ್ನು ೨,೫೦,೦೬೩ ರೈತರಿಗೆ ಜಮೆ ಮಾಡಲಾಗಿದೆ. ರೈತರು ತಮ್ಮ ಬ್ಯಾಂಕ್ ಖಾತೆಗಳಿಗೆ ಪರಿಹಾರ ಧನ ಜಮೆಯಾಗಿರುವ ಕುರಿತುhಣಣಠಿs://ಠಿಚಿಡಿihಚಿಡಿಚಿ.ಞಚಿಡಿಟಿಚಿಣಚಿಞಚಿ.gov.iಟಿ/seಡಿviಛಿe೯೨/ ಜಾಲತಾಣದಿಂದ ಪರಿಶೀಲಿಸಬಹುದಾಗಿದ್ದು, ಈ ಕುರಿತಂತೆ ಹೆಚ್ಚಿನ ಮಾಹಿತಿಯನ್ನು ಈ ಕೆಳಗಿನ ಸಹಾಯವಾಣಿ ಸಂಖ್ಯೆಗೆ ಸಂಪರ್ಕಿಸಿ ಪಡೆದುಕೊಳ್ಳಬಹುದಾಗಿದೆ.
ಸಹಾಯವಾಣಿ : ಜಿಲ್ಲಾಧಿಕಾರಿಗಳ ಕಚೇರಿ ವಿಜಯಪುರ ದೂ: ೦೮೩೫೨-೨೨೧೨೬೧ ಹಾಗೂ ಟೋಲ್ ಫ್ರೀ ಸಂಖ್ಯೆ ೧೦೭೭, ಉಪವಿಭಾಗಾಧಿಕಾರಿಗಳು ವಿಜಯಪುರ ದೂ: ೦೮೩೫೨೧-೨೯೫೨೮೬, ಉಪವಿಭಾಗಾಧಿಕಾರಿಗಳು ಇಂಡಿ ದೂ: ೦೮೩೫೯-೨೨೫೦೦೩, ಉಪನಿರ್ದೇಶಕರು ತೋಟಗಾರಿಕೆ ಇಲಾಖೆ, ವಿಜಯಪುರ ದೂ: ೦೮೩೫೨-೨೫೦೨೪೪, ತಹಶೀಲ್ದಾರ ವಿಜಯಪುರ ದೂ:೦೮೩೫೨-೩೫೫೭೩೧, ತಹಶೀಲ್ದಾರ ಬಬಲೇಶ್ವರ ದೂ: ೮೩೧೦೫೦೪೨೦೫, ೯೬೮೬೦೭೩೩೯೦, ತಹಶೀಲ್ದಾರ ತಿಕೋಟಾ ದೂ: ೮೭೬೨೪೮೦೮೧೧, ೯೪೮೦೫೩೨೬೯೬, ತಹಶೀಲ್ದಾರ ಬ.ಬಾಗೇವಾಡಿ ದೂ:೮೦೫೦೪೨೬೬೬೩, ೯೧೦೮೪೮೨೫೯೯, ತಹಶೀಲ್ದಾರ ನಿಡಗುಂದಿ ದೂ: ೭೦೧೯೧೭೮೦೭೫,೯೯೦೨೬೩೪೧೮೬, ತಹಶೀಲ್ದಾರ ಕೊಲ್ಹಾರ ದೂ: ೦೮೪೨೬-೨೦೦೨೫೨, ತಹಶೀಲ್ದಾರ ಮುದ್ದೇಬಿಹಾಳ ದೂ: ೦೮೩೫೬-೨೨೦೨೨೭, ತಹಶೀಲ್ದಾರ ತಾಳಿಕೋಟೆ ದೂ:೯೪೪೯೭೫೨೮೫೪, ತಹಶೀಲ್ದಾರ ಇಂಡಿ ದೂ:೦೮೩೫೯-೨೨೫೦೨೦, ತಹಶೀಲ್ದಾರ ಚಡಚಣ ದೂ: ೯೪೮೩೯೫೨೩೩೭,೯೭೪೦೧೮೩೫೨೯, ತಹಶೀಲ್ದಾರ ಸಿಂದಗಿ ದೂ:೦೮೪೮೮-೨೨೧೨೩೫, ತಹಶೀಲ್ದಾರ ದೇವರಹಿಪ್ಪರಗಿ ದೂ: ೦೮೪೨೪-೨೮೩೨೨೨, ತಹಶೀಲ್ದಾರ ಆಲಮೇಲ ದೂ: ೭೩೫೩೩೪೩೨೨೮ ಇದಲ್ಲದೇ ವಿಪತ್ತು ನಿರ್ವಹಣೆಗಾರರ ದೂ: ೭೦೧೯೬೮೨೭೪೦ ಸಂಖ್ಯೆಗೆ ಕಚೇರಿ ಸಮಯದಲ್ಲಿ ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ.
ಬೆಳೆ ಹಾನಿ ಪರಿಹಾರ ಪಡೆದುಕೊಳ್ಳಲು ಫ್ರೂಟ್ಸ್ ಐಡಿ ಕಡ್ಡಾಯವಾಗಿರುವುದರಿಂದ ಇದುವರೆಗೆ ಫ್ರೂಟ್ಸ ಐಡಿ ಮಾಡಿಕೊಳ್ಳದ ರೈತರು ಕೂಡಲೇ ತಮ್ಮ ಆಧಾರ, ಬ್ಯಾಂಕ್ ಖಾತೆ ವಿವರ ಹಾಗೂ ಪಹಣಿ ಮಾಹಿತಿಯನ್ನು ಗ್ರಾಮ ಆಡಳಿತ ಅಧಿಕಾರಿಗಳಿಗೆ ಅಥವಾ ಸಮೀಪದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಫ್ರೂಟ್ಸ್ ಐಡಿ ಮಾಡಿಕೊಳ್ಳಲು ಮನವಿ ಮಾಡಿಕೊಳ್ಳಲಾಗಿದ್ದು, ಫ್ರೂಟ್ಸ್ ಐಡಿ ಇಲ್ಲದ ರೈತರು ಪರಿಹಾರ ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
