ವಿಜಯಪುರ: ಕೊಲ್ಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಚಂದ್ರಭಾಗಾ ವಿಠ್ಠಲ ಹುಗ್ಗೆನವರ(೩೦ ವರ್ಷ) ಹಾಗೂ ಆಕೆಯ ಮಕ್ಕಳಾದ ಫ್ರಥಮ(೧೧ ವರ್ಷ), ಸಜನಿ(೯ ವರ್ಷ), ಸಾನವಿ(೭ ವರ್ಷ)ರವರನ್ನು ಅಪಹರಣ ಮಾಡಲಾಗಿದೆ ಎಂದು ದೂರು ದಾಖಲಾಗಿದೆ. ಅಬ್ದುಲ್‌ಗಫಾರ ನೂರಲಿಖಾನ ಕಲಾದಗಿ ಎಂಬ ವ್ಯಕ್ತಿಯು ತಾಯಿ ಮಕ್ಕಳನ್ನು ಅಪಹರಣ ಮಾಡಿದ್ದಾನೆ ಎಂದು ಅಪಹರಣಗೊಂಡ ಮಹಿಳೆಯ ಚಿಕ್ಕಪ್ಪನಾದ ಲಕ್ಷö್ಮಣ ಬಸಲಿಂಗಪ್ಪ ಬ್ಯಾಲ್ಯಾಳ ಇವರು ದೂರು ದಾಖಲಿಸಿದ್ದಾರೆ.
ಅಪಹರಣಗೊಂಡ ತಾಯಿ ಹಾಗೂ ಮಕ್ಕಳ ಬಗ್ಗೆ ಸುಳಿವು ಅಥವಾ ಗುರುತು ಪತ್ತೆಯಾದಲ್ಲಿ ಹತ್ತಿರದ ಪೊಲೀಸ್ ಠಾಣೆ ಅಥವಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಕಚೇರಿ ೦೮೩೫೨-೨೫೦೧೫೨ ಮೊಬೈಲ್ ಸಂಖ್ಯೆ ೯೪೮೦೮೦೪೨೦೧, ವಿಜಯಪುರ ಕಂಟ್ರೋಲ್ ರೂಮ್ ನಂ. ೦೮೩೫೨-೨೫೦೮೪೪,೨೫೦೭೫೧, ಡಿಎಸ್‌ಪಿ ಬಸವನ ಬಾಗೇವಾಡಿ ಇವರ ಮೊಬೈಲ್ ನಂಬರ್ ೯೪೮೦೮೦೪೨೨೧ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬೇಕೆಂದು ಬಸವನ ಬಾಗೇವಾಡಿಯ ಪೊಲೀಸ್ ಉಪ ವಿಭಾಗಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

