ಬಸವನಬಾಗೇವಾಡಿ: ಪಟ್ಟಣದ ಸೇರಿದಂತೆ ತಾಲೂಕಿನಾದ್ಯಂತ ಸಾಂಸ್ಕ್ರತಿಕ ನಾಯಕ ಬಸವೇಶ್ವರರ ಜಯಂತಿಯನ್ನು ಶುಕ್ರವಾರ ಜನತೆ ಶ್ರದ್ಧಾ-ಭಕ್ತಿಯಂದ ಆಚರಿಸಿದರು.ಪಟ್ಟಣದ ಐತಿಹಾಸಿಕ ಮೂಲನಂದೀಶ್ವರ(ಬಸವೇಶ್ವರ) ದೇವಸ್ಥಾನದಲ್ಲಿ ಭಕ್ತರು ಬೆಳಗ್ಗೆ ರುದ್ರಾಭಿಷೇಕ, ವಿಶೇಷ ಪೂಜೆಯಲ್ಲಿ ಭಾಗವಹಿಸಿದ್ದರು. ಬಸವ ಜಯಂತಿಯಂಗವಾಗಿ ಮೂಲನಂದೀಶ್ವರ(ಬಸವೇಶ್ವರ) ಪಲ್ಲಕ್ಕಿ ಕಟ್ಟೆಯನ್ನು ಅಲಂಕರಿಸಲಾಗಿತ್ತು.
ಸಂಪ್ರದಾಯದಂತೆ ಬಸವೇಶ್ವರ ದೇವಸ್ಥಾನದಿಂದ ವಿರಕ್ತಮಠಕ್ಕೆ ತೆರಳಿ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿಯವರನ್ನು ಮೆರವಣಿಗೆ ಮೂಲಕ ದೇವಸ್ಥಾನಕ್ಕ ಬರಮಾಡಿಕೊಳ್ಳಲಾಯಿತು. ದೇವಸ್ಥಾನಕ್ಕೆ ಆಗಮಿಸಿದ ಶ್ರೀಗಳು ಬಸವ ಜಯಂತಿಯಂಗವಾಗಿ ಹಮ್ಮಿಕೊಂಡಿದ್ದ ಶಿವಭಜನೆಗೆ ಪೂಜೆ ಸಲ್ಲಿಸಿ ಮಂಗಳಾರತಿ ಜರುಗಿದ ನಂತರ ಶಿವಭಜನೆ ಮುಕ್ತಾಯಗೊಳಿಸಿದರು. ನಂತರ ದೇವಸ್ಥಾನದ ಆವರಣದಲ್ಲಿ ಶ್ರೀಗಳಿಂದ ಷಟ್ಸ್ಥಲ ಧ್ವಜಾರೋಹಣ ನೆರವೇರಿಸುವ ಮೂಲಕ ಬಸವ ಜಯಂತಿಗೆ ಚಾಲನೆ ನೀಡಿದರು. ನಂತರ ಶ್ರೀಗಳನ್ನು ಶ್ರೀಮಠಕ್ಕೆ ಮೆರವಣಿಗೆ ಮೂಲಕ ಬೀಳ್ಕೊಡಲಾಯಿತು.
ಬೆಳಗ್ಗೆ ೧೧.೩೦ ಗಂಟೆಗೆ ಸುಮಾರಿಗೆ ಬಸವಜನ್ಮ ಸ್ಮಾರಕದಿಂದ ವಿರಕ್ತಮಠಕ್ಕೆ ತೆರಳಿ ಶ್ರೀಗಳನ್ನು ಬಸವ ಜನ್ಮಸ್ಮಾರಕಕ್ಕೆ ಮೆರವಣಿಗೆ ಮೂಲಕ ಬರಮಾಡಿಕೊಳ್ಳಲಾಯಿತು. ಶ್ರೀಗಳ ಆಗಮನದ ನಂತರ ಅವರ ಸಾನಿಧ್ಯದಲ್ಲಿ ಬೆಳ್ಳಿ ಬಾಲ ಬಸವ ಮೂರ್ತಿಯನ್ನು ತೊಟ್ಟಿಲಲ್ಲಿ ಹಾಕುವ ಮೂಲಕ ಮಹಿಳೆಯರು ನಾಮಕರಣ ಮಾಡುವ ಪದ್ಧತಿ ನೆರವೇರಿಸಿ ಜೋಗುಳ ಪದ ಹಾಡಿದರು.
ಸಂಪ್ರದಾಯದಂತೆ ಸಂತಾನ ಬಯಸಿ ಶ್ರವಣಾ ಮೋಟಗಿ, ಪೂಜಾ ವಂದಾಲ,ಲಕ್ಷ್ಮೀ ಬೈರಗೊಂಡ, ಪುಟ್ಟಕ್ಕ ಚವ್ಹಾಣ, ಸುವರ್ಣಾ ಸಜ್ಜನ, ಭಾಗ್ಯಶ್ರೀ ಪೂಜಾರಿ, ಶೈಲಾ ಕೋಲಕಾರ, ಕವಿತಾ ನಾಗೂರ, ಶೃತಿ ತೆಗ್ಗಿನಮಠ, ಅಶ್ವಿನಿ ಕಿಣಗಿ, ಅಕ್ಷತಾ ಕಿಣಗಿ, ಅಶ್ವಿನಿ ಕೊಟ್ಟೂರ, ರಾಜೇಶ್ವರ ಸಂಪನ್ನವರ, ಭಾಗ್ಯಶ್ರೀ ಕಲಾಲ, ಸಹನಾ ಕೊಡೆಕಲ್ ಸೇರಿದಂತೆ ೪೦ ಕ್ಕೂ ಹೆಚ್ಚು ಸುಮಂಗಲೆಯರು ಬಸವೇಶ್ವರ ನಾಮಕರಣ ಮಾಡುವ ಸಂದರ್ಭದಲ್ಲಿ ತೊಟ್ಟಿಲು ಕೆಳಗೆ ಕುಳಿತುಕೊಂಡಿದ್ದರು. ತೊಟ್ಟಿಲು ಕೆಳಗೆ ಕುಳಿತ ಸುಮಂಗಲೆಯರ ಉಡಿಯಲ್ಲಿ ಶ್ರೀಗಳು ಬೆಳ್ಳಿ ಬಾಲ ಬಸವನನ್ನು ಹಾಕಿ ಶುಭಾಶೀರ್ವಾದ ಮಾಡಿದರು. ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದ ಮಹಿಳೆಯರು ಬಸವ ನಾಮಕರಣ ನೆರವೇರುವ ಸಂದರ್ಭದಲ್ಲಿ ಬಸವ ಜಯಘೋಷ ಹಾಕಿದರು. ತೊಟ್ಟಿಲೋತ್ಸವ ಕಾರ್ಯಕ್ರಮವನ್ನು ಹಿರಿಯರಾದ ಬಸವರಾಜ ಹಾರಿವಾಳ ಅವರು ನೆರವೇರಿಸಿಕೊಟ್ಟರು.
ತೊಟ್ಟಿಲೋತ್ಸವ ಕಾರ್ಯಕ್ರಮದಲ್ಲಿ ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ಜಿ.ಎಸ್.ಚಿನಿವಾಲರ, ಬಿ.ಎಸ್.ಕಳ್ಳಿ, ಸಾಹಿತಿ ಜಿ.ಎಸ್. ಸಿದ್ದರಾಮಯ್ಯ, ಮುಖಂಡರಾದ ಈರಣ್ಣ ಪಟ್ಟಣಶೆಟ್ಟಿ, ಬಸವರಾಜ ಗೊಳಸಂಗಿ, ಸುರೇಶಗೌಡ ಪಾಟೀಲ, ಎಂ.ಜಿ.ಆದಿಗೊಂಡ, ಸಂಗಣ್ಣ ಕಲ್ಲೂರ, ಸಂಗಮೇಶ ಓಲೇಕಾರ, ಸಂಕನಗೌಡ ಪಾಟೀಲ, ಜಗದೀಶ ಕೊಟ್ರಶೆಟ್ಟಿ, ಉಮೇಶ ಹಾರಿವಾಳ, ಈರನಗೌಡ ಪಾಟೀಲ, ಅಶೋಕ ಹಾರಿವಾಳ, ವಿಜಯ ಮದ್ರಾಸ, ಸುರೇಶ ಬಾಗೇವಾಡಿ, ಆರ್.ಜಿ. ಅಳ್ಳಗಿ, ವೀರಣ್ಣ ಮರ್ತುರ, ವಿವೇಕಾನಂದ ಕಲ್ಯಾಣಶೆಟ್ಟಿ, ಮಹಾಂತೇಶ ಹಂಜಗಿ, ವಿನುತ ಕಲ್ಲೂರ, ಕಾಶೀನಾಥ ರಾಠೋಡ, ಶಿವಲಿಂಗಪ್ಪ ಕಿಣಗಿ, ಎಸ್.ಐ. ಡೋಣೂರ, ಶಿವು ಮಡಿಕೇಶ್ವರ, ರವಿ ಕಿಣಗಿ, ಬಸವರಾಜ ಕಿಣಗಿ, ಸಂಜನಾ ಕಿಣಗಿ, ಸಾವಿತ್ರಿ ಕಲ್ಯಾಣಶೆಟ್ಟಿ, ಶ್ವೇತಾ ಕಿಣಗಿ ಸೇರಿದಂತೆ ವಿವಿಧೆಡೆಗಳಿಂದ ಆಗಮಿಸಿದ್ದ ಅಪಾರ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು. ನಂತರ ಪ್ರಸಾದ ರೂಪದಲ್ಲಿ ಗುಗ್ಗರಿ, ಕಲ್ಲುಸಕ್ಕರೆ ವಿತರಿಸಲಾಯಿತು. ಕೂಡಲಸಂಗಮ ಅಭಿವೃದ್ಧಿ ಮಂಡಳಿಯಿಂದ ಬಸವಜನ್ಮ ಸ್ಮಾರಕ ಮುಂಭಾಗ, ದೇವಸ್ಥಾನದ ದಾಸೋಹದಲ್ಲಿ ಹುಗ್ಗಿ, ಅನ್ನ-ಸಾಂಬಾರ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ತೊಟ್ಟಿಲೋತ್ಸವ ಕಾರ್ಯಕ್ರಮ ನಡೆಯುವ ಮುನ್ನವೇ ಕ್ಷೇತ್ರದ ಶಾಸಕ, ಸಚಿವ ಶಿವಾನಂದ ಪಾಟೀಲ ಅವರು ಬಸವ ಜನ್ಮ ಸ್ಮಾರಕಕ್ಕೆ ಭೇಟಿನೀಡಿ ದರ್ಶನ ಪಡೆದುಕೊಂಡರು.
Subscribe to Updates
Get the latest creative news from FooBar about art, design and business.
ವಿಶ್ವಗುರು ಬಸವೇಶ್ವರರ ಜಯಂತಿ :ಬಸವ ನೆಲದಲ್ಲಿ ತೊಟ್ಟಿಲೋತ್ಸವ
Related Posts
Add A Comment

