ವಿಜಯಪುರ: ಕಾಶ್ಮೀರದ ಅರಸ ಪರ್ಷಿಯನ್ ಭಾಷೆ ಬಿಟ್ಟು ಕನ್ನಡ ಕಲಿತು ಶ್ರೇಷ್ಠ ವಚನಕಾರನೆನಿಸಲು ಬಸವಣ್ಣನವರ ನಡೆ – ನುಡಿಗಳೆ ಕಾರಣವಾದವು. ಧಾರ್ಮಿಕ ಜಿಡ್ಡು ತೊಳೆದು ವೈಚಾರಿಕ ನೆಲೆಗಟ್ಟಿನಲ್ಲಿ. ಲಿಂಗಾಯತ ಸಮಾಜ ನಿರ್ಮಿಸಿದ ಬಸವಣ್ಣ ವಿಶ್ವದ ಶ್ರೇಷ್ಠ ದಾರ್ಶನಿಕ ಎನಿಸಿದ್ದಾನೆ ಎಂದು ಜನಪದ ಸಾಹಿತಿ ಶಂಕರ ಬೈಚಬಾಳ ಹೇಳಿದರು.
ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕದ ಆಶ್ರಯದಲ್ಲಿ ನಗರದ ಪರಿಷತ್ ಕಾರ್ಯಾಲಯದಲ್ಲಿ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಸವಾದಿ ಶಿವಶರಣರು ಜನಪದರ ಆಡು ನುಡಿಯಲ್ಲಿ ವಚನ ಬರೆದು ಜನಪದ ಸಾಹಿತ್ಯ ರಕ್ಷಿಸಿದರು . ವಚನ ಸಾಹಿತ್ಯ ಗ್ರಾಮೀಣ ಬದುಕಿನ ಪ್ರತಿಬಿಂಬವಾಗಿ ಕಾಣುತ್ತಿದೆ ಎಂದು ಹೇಳಿದರು.
” ಸಾಮರಸ್ಯದ ಬದುಕಿಗೆ ಶರಣರ ವಚನಗಳು ” ಕುರಿತು ಉಪನ್ಯಾಸ ನೀಡಿದ ಚಿಂತಕ ಮೋಹನ ಕಟ್ಟಿಮನಿ, ಸತ್ಕಾರ್ಯ- ಸದ್ವಿಚಾರದ ಮೂಲಕ ಬಸವಣ್ಣನವರು ಸಮಾನತೆಯ ಸಮಾಜ ನಿರ್ಮಿಸುವ ಕನಸು ಕಂಡರು. ಶರಣರ ಸಹಕಾರದಿಂದ ವಚನ ಚಳುವಳಿ ನಡೆಸಿದರು. ಬಸವಣ್ಣನವರ ವಿಚಾರಧಾರೆಗಳು ಮೈಗೂಡಿಸಿಕೊಂಡು ನಡೆದರೆ ಬದುಕು ಸುಂದರವಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ ಬಸವಣ್ಣನವರು ಕೇವಲ ಸಾಂಸ್ಕೃತಿಕ ನಾಯಕ ಅಷ್ಟೆ ಅಲ್ಲ. ಅವರೊಬ್ಬ ನಾಗರಿಕ ಸಮಾಜದ ನಿರ್ಮಾಪಕ. ಜಗತ್ತಿನ ಸಮಾನತೆಯ ಹರಿಕಾರ ಎಂದು ಹೇಳಿದರು.
ಕ ಜಾ ಪ ತಿಕೋಟಾ ತಾಲೂಕು ಗೌರವಾಧ್ಯಕ್ಷ ಬಾಬುರಾವ್ ಮಹಾರಾಜರು ಸಾನಿಧ್ಯ ವಹಿಸಿದ್ದರು. ಕರ್ನಾಟಕ ಬಯಲಾಟ ಅಕಾಡೆಮಿ ಸದಸ್ಯೆ ಶ್ರೀಮತಿ ಅನಸೂಯಾ ವಡ್ಡರ, ಕ ಜಾ ಪ ಜಿಲ್ಲಾ ಖಜಾಂಚಿ ಪ್ರೊ ಎಸ್ ಎಲ್ ಮೇತ್ರಿ, ಇಂಡಿ ತಾಲೂಕಾಧ್ಯಕ್ಷ ರಾಜಶೇಖರ ಪಾಟೀಲ, ಮುದ್ದೇಬಿಹಾಳ ತಾಲೂಕಾಧ್ಯಕ್ಷ ಎ ಆರ್ ಮುಲ್ಲಾ, ವಿಜಯಪುರ ತಾಲೂಕಾಧ್ಯಕ್ಷ ವೈ ಎಚ್ ಪವಾರ , ವಲಯ ಅಧ್ಯಕ್ಷರಾದ ಸಿದರಾಯ ಬಡಿಗೇರ, ಶಿವಾನಂದ ಮಳ್ಳಿ ಉಪಸ್ಥಿತರಿದ್ದರು.
ಜಿಲ್ಲಾ ಘಟಕದ ಸದಸ್ಯ ಎಸ್ ಆಯ್ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಕಾರ್ಯದರ್ಶಿ ಡಾ ರಮೇಶ ತೇಲಿ ನಿರೂಪಿಸಿದರು. ಜಿಲ್ಲಾ ಸಂಚಾಲಕ ಪ್ರೊ ಜಿ ಎಂ ಹಳ್ಳೂರ ಸ್ವಾಗತಿಸಿದರು. ಜಿಲ್ಲಾ ಸದಸ್ಯ ಮೌಲಾಲಾಬ ಜಹಾಗಿರದಾರ ವಂದಿಸಿದರು.
ಕಾರ್ಯಕ್ರಮದಲ್ಲಿ ನಾಗಠಾಣ ಭಜನೆ ಉಪ್ಪಲದಿನ್ನಿ ರಿವಾಯತ ಮತ್ತು ವಚನ ಪಠಣ ನಡೆದವು.
Subscribe to Updates
Get the latest creative news from FooBar about art, design and business.
Related Posts
Add A Comment

