ಸಿಂದಗಿ: ಕಾಂಗ್ರೆಸ್ ಪಕ್ಷದ ಕೊಡುಗೆ ಸಮಾಜಕ್ಕೆ ಅನನ್ಯವಾಗಿದೆ. ಸವದಿ ಅವರಿಗೆ ಟಿಕೆಟ್ ತಪ್ಪಿಸಿದ್ದು ಜಿಗಜಿಣಗಿ ಎಂದು ಸಮಾಜದ ಮುಖಂಡ, ಕಾಂಗ್ರೆಸ್ ಪಕ್ಷದ ಸದಸ್ಯ ಸುರೇಶ ಮಳಲಿ ಎಂದು ಹೇಳಿದರು.
ಭಾನುವಾರ ಸಾಯಂಕಾಲ ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯದಲ್ಲಿ ಗಾಣಿಗ ಸಮಾಜದ ವತಿಯಿಂದ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಮುಖಂಡ ಸುರೇಶ ಮಳಲಿ ಮಾತನಾಡಿ, ಗಾಣಿಗ ಸಮುದಾಯಕ್ಕೆ ೨ಎ ಮೀಸಲಾತಿ ನೀಡಿದ್ದು ಆಗಿನ ಕಾಂಗ್ರೆಸ್ ಸರಕಾರ ಮತ್ತು ವಿರಪ್ಪ ಮೋಯ್ಲಿ ಅವರ ಸರಕಾರ ಕಾಂಗ್ರೆಸ್ ಕೊಡುಗೆ ಸಮಾಜಕ್ಕೆ ಅನನ್ಯ. ಗಾಣಿಗ ಸಮಾಜವನ್ನು ಜಿಗಜಿಣಗಿ ಅವರು ಆಯ್ಕೆ ಮತ್ತು ಅಧಿಕಾರಕ್ಕೆ ಮಾತ್ರ ಬಳಸಿಕೊಂಡಿದ್ದಾರೆ. ಗಾಣಿಗ ಸಮುದಾಯವನ್ನು ಮೂಲೆ ಗುಂಪು ಮಾಡಿದ್ದೆ ಬಿಜೆಪಿಯವರ ಸಾಧನೆ. ಪಕ್ಷದಿಂದ ಸವದಿ ಅವರು ಹೊರ ಬರಲು ಜಿಗಜಿಣಗಿ ಅವರ ಹಿನ್ನಲೆ ಸಹಕಾರವಿದೆ. ಕಾರಣ ಸಮಾಜ ಬಾಂಧವರು ಕಾಂಗ್ರೆಸ್ ಪಕ್ಷದ ಆಲಗೂರ ಅವರಿಗೆ ಮತ ನೀಡಿ ಬೆಂಲಿಸಿ ಎಂದರು.
ಈ ವೇಳೆ ಗೋಲ್ಲಾಳಪ್ಪಗೌಡ ಪಾಟೀಲ ಮಾತನಾಡಿ, ಜಿಲ್ಲೆಗೆ ಜಿಗಜಿಣಗಿ ಅವರು ಕೊಡುಗೆ ಶೂನ್ಯ. ಮಂಜುರಾದ ಆಲಮೇಲ ತೋಟಗಾರಿಕಾ ಕಾಲೇಜ ರದ್ದಾಗುವಂತೆ ಮಾಡಿದ್ದು, ಸರಕಾರಿ ವೈಧ್ಯಕೀಯ ಕಾಲೇಜು ಮಾಡದೇ ಇರುವುದು ನೋಡಿದರೇ ಅವರ ಯಾವುದೇ ಅಭಿವೃದ್ಧಿ ಕಾರ್ಯ ಮಾಡಿಲ್ಲ ಎಂದರು.
ಇದೇ ಸಂದರ್ಭದಲ್ಲಿ ಕೆಡಿಪಿ ಸದಸ್ಯ ಸುರೇಶ ಚೌಧರಿ ಮಾತನಾಡಿ, ಕಳೆದ ೧೫ ವರ್ಷದಿಂದ ಸಮುದಾಯಕ್ಕೆ ಜಿಗಜಿಣಗಿ ಅವರು ಯಾವುದೇ ಅನುದಾನ ನೀಡಿಲ್ಲ. ಕಾಂಗ್ರೆಸ್ ಸರಕಾರ ಸಿಂದಗಿಯ ವನಶ್ರೀ ಸಮುದಾಯ ಭವನಕ್ಕೆ ೨ಕೋಟಿ, ಇಂಡಿ ಸಮುದಾಯ ಭವನಕ್ಕೆ ೫ಕೋಟಿ ಅನುದಾನ ನೀಡಿದೆ. ಹಾಗಾಗಿ ಸಮಾಜ ಬಾಂಧವರು ಬಿಜೆಪಿ ಅಭ್ಯರ್ಥಿಗೆ ಮತ ಹಾಕದೇ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ಹಾಕಿ ಬೆಂಬಲಿಸಿ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಗಿರೀಶಗೌಡ ಪಾಟೀಲ ಯರಗಲ್, ರಾವುತಗೌಡ ಬಿರಾದಾರ, ಪ್ರವೀಣ ಕಂಠಿಗೊಂಡ, ಬ್ಲಾಕ್ ಕಾಂಗ್ರೆಸ್ ತಾಲೂಕಾಧ್ಯಕ್ಷ ಸುರೇಶ ಪೂಜಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment
