ಬಸವನಬಾಗೇವಾಡಿ: ದೇಶದಲ್ಲಿ ಕಳೆದ ಹತ್ತು ವರ್ಷಗಳಿಂದ ಆಡಳಿತ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅಚ್ಛೇ ದಿನ ಆಯೇಗಾ ಅನ್ನುತ್ತಲೇ ಇದ್ದರೆ ಹೊರತು ಅಚ್ಛೇ ದಿನ ಇನ್ನೂ ಬಂದಿಲ್ಲ. ಜನಸಾಮಾನ್ಯರು ಬಳಕೆ ಮಾಡುವ ಎಲ್ಲ ವಸ್ತುಗಳ ಮೇಲೆ ಜಿಎಸ್ಟಿ ಹಾಕುವ ಮೂಲಕ ಎಲ್ಲ ವಸ್ತುಗಳ ಬೆಲೆ ಗಗನಕ್ಕೇರುವಂತೆ ಮಾಡಿರುವಂತೆ ಮೋದಿ ಅವರ ಸಾಧನೆಯಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಮತದಾರರು ಮತ ನೀಡಿದರೆ ಮತ್ತಷ್ಟು ಗ್ಯಾರಂಟಿಗಳ ಹಿತವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದರು.
ತಾಲೂಕಿನ ಹೂವಿನಹಿಪ್ಪರಗಿ ಗ್ರಾಮದ ದೇವರಹಿಪ್ಪರಗಿ ರಸ್ತೆಯ ಹೊರವಲಯದಲ್ಲಿ ಶುಕ್ರವಾರ ಲೋಕಸಭಾ ಚುನಾವಣೆಯ ಪ್ರಚಾರಾರ್ಥವಾಗಿ ಹಮ್ಮಿಕೊಂಡಿದ್ದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಇವರ ಆಡಳಿತದಲ್ಲಿ ಗ್ಯಾಸ್, ಪೆಟ್ರೋಲ್, ಡಿಸೇಲ್ ಸೇರಿದಂತೆ ಎಲ್ಲ ವಸ್ತುಗಳ ಬೆಲೆ ಹೆಚ್ಚಾಗಿದೆ.ಸರ್ವಜನಾಂಗದ ಹಿತ ಬಯಸುವ ಕಾಂಗ್ರೆಸ್ ಪಕ್ಷಕ್ಕೆ ಆಡಳಿತ ನೀಡಿದರೆ ದೇಶದ ಜನರಿಗೆ ಹಿತವಾಗಲಿದೆ. ನಮ್ಮ ಪಕ್ಷವು ಕೇಂದ್ರದಲ್ಲಿ ಆಡಳಿತಕ್ಕೆ ಬಂದರೆ ರೈತರ ಸಾಲ ಮನ್ನಾ ಆಗುವ ಜೊತೆಗೆ ಅವರ ಬೆಳೆಗೆ ಸೂಕ್ತ ಬೆಲೆ ಸಿಗಲಿದೆ. ಸೀಯರಿಗೆ ಒಂದು ವರ್ಷಕ್ಕೆ ೧ ಲಕ್ಷ ರೂ. ಸೇರಿದಂತೆ ಅನೇಕ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ಬರಲಿವೆ ಎಂದರು.
ಚಿಕ್ಕೋಡಿಯಿಂದ ಮೂರು ಸಲ, ವಿಜಯಪುರದಿಂದ ಮೂರು ಸಲ ಸಂಸದರಾಗಿ ರಮೇಶ ಜಿಗಜಿಣಗಿ ಆಯ್ಕೆಯಾದರೂ ಒಮ್ಮೆಯೂ ಜಿಲ್ಲೆಯ ಅಭಿವೃದ್ಧಿ ಕುರಿತು ಲೋಕಸಭೆಯಲ್ಲಿ ಧ್ವನಿ ಎತ್ತಿಲ್ಲ. ಇದು ಮೀಸಲು ಕ್ಷೇತ್ರವಾಗಿದ್ದರೂ ದಲಿತ ಬಾಂಧವರ ಪರವಾಗಿಯೂ ಧ್ವನಿ ಎತ್ತಿಲ್ಲ. ಇಂತಹ ಸಂಸದರನ್ನು ಜನರು ಆ ಸಲ ತಿರಸ್ಕರಿಸಿ ಜಿಲ್ಲೆಯಲ್ಲಿ ಬದಲಾವಣೆ ಮಾಡುವ ಮೂಲಕ ನಮ್ಮ ಪಕ್ಷದ ಅಭ್ಯರ್ಥಿಯಾದ ರಾಜು ಆಲಗೂರ ಅವರಿಂದ ಜಿಲ್ಲೆಯ ಅಭಿವೃದ್ಧಿಗೆ ನಾಂದಿಗೆ ಮುಂದಾಗಬೇಕಿದೆ. ರಾಜು ಆಲಗೂರ ಅವರಿಗೆ ಮತ ಹಾಕಿದರೆ ಅದು ನನಗೆ ಹಾಕಿದಂತೆ ಎಂದ ಅವರು ಚುನಾವಣೆ ನೀತಿ ಸಂಹಿತೆ ಮುಕ್ತಾಯವಾದ ನಂತರ ಜಿಲ್ಲೆಯ ನೀರಾವರಿ ಯೋಜನೆ ಬಗ್ಗೆ ಪ್ರಗತಿ ಪರಿಶೀಲನೆ ಮಾಡಲಾಗುವುದು ಎಂದರು.
ಡಾ.ಪ್ರಭುಗೌಡ ಲಿಂಗದಳ್ಳಿ ಮಾತನಾಡಿ, ಈ ಸಲ ನಡೆಯುತ್ತಿರುವ ಲೋಕಸಭಾ ಚುನಾವಣೆಯು ಸುಳ್ಳು-ಸತ್ಯದ ನಡೆಯುತ್ತಿದೆ. ಇದೊಂದು ಚಾರಿತ್ರಿಕ ಚುನಾವಣೆಯಾಗಿದೆ. ಸುಳ್ಳು ಹೇಳುವ ಬಿಜೆಪಿ ಸರ್ಕಾರವನ್ನು ಕಿತ್ತೊಗೆದು ಕಾಂಗ್ರೆಸ್ ಪಕ್ಷಕ್ಕೆ ಮತದಾರರು ಅಧಿಕಾರ ನೀಡಬೇಕೆಂದರು.
ಆನಂದಗೌಡ ದೊಡಮನಿ ಮಾತನಾಡಿ, ಸುಳ್ಳು ಹೇಳುವ ಬಿಜೆಪಿ ಪಕ್ಷವನ್ನು ಸೋಲಿಸುವ ಅವಕಾಶ ಬಂದಿದೆ. ಎಲ್ಲರೂ ಜಾಗ್ರತೆಯಾಗಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕೆಂದರು.
ಗೌರಮ್ಮ ಮುತ್ತತ್ತಿ, ಶರಣಪ್ಪ ಸುಣಗಾರ, ರಮಿಜಾ ನದಾಫ ಮಾತನಾಡಿದರು. ಕಾರ್ಯಕ್ರಮದಲ್ಲಿ ಎಐಸಿಸಿ ವೀಕ್ಷಕ ಡಾ.ಸಯ್ಯದ, ಅಭ್ಯರ್ಥಿ ರಾಜು ಆಲಗೂರ, ಮುಖಂಡರಾದ ಅಶೋಕಗೌಡ ಪಾಟೀಲ, ಸರಿತಾ ನಾಯಕ, ಈರಣ್ಣ ಪಟ್ಟಣಶೆಟ್ಟಿ, ರಮಜಾನ ಮುಜಾವರ, ಬಾಳಾಸಾಹೇಬಗೌಡ ಪಾಟೀಲ, ಬಿ.ಎಸ್.ಪಾಟೀಲ ಯಾಳಗಿ, ಕಲ್ಲಪ್ಪ ಮಟ್ಟಿ, ಬಸೀರ ಬೇಪಾರಿ, ಗುರು ಗುಡಿಮನಿ,ರವಿ ರಾಠೋಡ ಇತರರು ಇದ್ದರು.
ಸುಂಟರಗಾಳಿ: ಕಾರ್ಯಕ್ರಮ ನಡೆಯುವಾಗ ಒಮ್ಮೆಲೆ ಜೋರಾಗಿ ಸುಂಟರಗಾಳಿ ಬೀಸಿದ್ದರಿಂದ ಕಾರ್ಯಕ್ರಮಕ್ಕೆ ಹಾಕಿದ್ದ ಶಾಮಿಯಾನ ಒಮ್ಮೆಲೆ ಹಾರಿದ್ದರಿಂದಾಗಿ ಜನರು ದಿಕ್ಕಾಪಾಲಾಗಿ ಓಡಿದರು. ಕೆಲ ಕ್ಷಣ ಎಲ್ಲರೂ ಭಯಭೀತರಾದರು. ಶಾಮಿಯಾನದ ಏಂಗಲ್ ಬಡಿದು ೫-೬ ಜನರಿಗೆ ತಲೆ ಪೆಟ್ಟಾಗಿದೆ ಎಂದು ಜನರಿಂದ ತಿಳಿದುಬಂತು.
Subscribe to Updates
Get the latest creative news from FooBar about art, design and business.
ಕಾಂಗ್ರೆಸ್ಗೆ ಮತ ಮತ್ತಷ್ಟು ಗ್ಯಾರಂಟಿಗಳ ಹಿತ :ಎಂ.ಬಿ.ಪಾಟೀಲ
Related Posts
Add A Comment

