ಚಡಚಣ: ಜಿಲ್ಲೆಯ ೧೪ ಕಡೆಗಳಿಗೆ ನೀರು ತುಂಬುವ ಯೋಜನೆಯನ್ನು ಪ್ರಾರಂಭಿಸಿದ್ದು, ರೈತರಿಗೆ ಅನುಕೂಲ ಕಲ್ಪಿಸಿರುವುದು ಕಾಂಗ್ರೆಸ್. ಕಾರಣ ರಾಜು ಆಲಗೂರರನ್ನು ಜಯಶಾಲಿಯನ್ನಾಗಿಸಿದರೆ ಜಿಲ್ಲೆ ಮತ್ತಷ್ಟು ಅಭಿವೃದ್ಧಿಯಾಗುವುದು ಖಚಿತ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲರು ಹೇಳಿದರು.
ಸಮೀಪದ ನಿವರಗಿ ಗ್ರಾಮದ ರಾಜು ಆಲಗೂರ ಪರ ಮತಯಾಚನೆಯ ಬೃಹತ್ ಪ್ರಚಾರ ಸಭೆಯಲ್ಲಿ ಅವರು ಮಾತನಾಡುತ್ತ, ಹಾಲಿ ಸಂಸದ ರಮೇಶ ಜಿಗಜಿಣಗಿಯವರು ಎರಡು ಸಲ ಆರಿಸಿ ಬಂದರೂ, ಜಿಲ್ಲೆಗೆ ಏನು ಮಾಡಿದ್ದಾರೆ ಎಂದು ಪ್ರಶ್ನಿಸುತ್ತ, ಅವರ ಸಾಧನೆ ಶೂನ್ಯವಾಗಿದೆ. ಕೆಲಸ ಮಾಡುವವರಿಗೆ ಮತ ನೀಡಿರಿ. ಕಾಂಗ್ರೆಸ್ ರೈತರು, ಬಡವರು, ಜನ ಸಾಮಾನ್ಯರಿಗೆ ಸ್ವಾವಲಂಬಿಯಾಗಿ ಬದುಕಲು ಅಭಿವೃದ್ಧಿ ಯೋಜನೆಗಳ ಮೂಲಕ ಶಕ್ತಿ ತುಂಬುತ್ತಿದೆ. ಬಿಜೆಪಿ ಬ್ರಿಟಿಷರ ಪರವಾಗಿದ್ದ ಪಕ್ಷ, ಬಿಜೆಪಿಯವರ ಪ್ರಶ್ನೆಗಳಿಗೆ ನಮ್ಮ ಅಭಿವೃದ್ಧಿ ಯೋಜನೆಗಳು ಉತ್ತರವಾಗಲಿದೆ. ಕಾಂಗ್ರೆಸ್ ದೇಶಕ್ಕಾಗಿ ಏನು ಮಾಡಿದೆ ಎಂದು ಕೇಳುವ ಬಿಜೆಪಿಯವರಿಗೆ ರಾಜು ಆಲಗೂರರವರಿಗೆ ಮತ ಹಾಕುವ ಮೂಲಕ ತಕ್ಕ ಪಾಠ ಕಲಿಸಬೇಕೆಂದು ಎಂ.ಬಿ.ಪಾಟೀಲ ಹೇಳಿದರು.
ರಮೇಶ ಜಿಗಜಿಣಗಿ ಕೆಲಸ ಏನು ಮಾಡಿಲ್ಲ. ಜಿಲ್ಲೆ ಪರ ಸಂಸತ್ತಿನಲ್ಲಿ ಧನಿ ಎತ್ತಿರುವದಿಲ್ಲ. ಮೋದಿ ಅವರ ಸುಳ್ಳು ಭರವಸೆಗಳಿಗೆ ಎಲ್ಲರಿಗೂ ಅರಿವಾಗಿದ್ದು, ಈ ಸಲ ಕಾಂಗ್ರೆಸ್ ಪರವಾಗಿದ್ದಾರೆ. ಆನ ಬದಲಾವಣೆ ಬಯಸಿರುವರು. ರಾಜು ಆಗಲೂರರಿಗೆ ಮತ ಹಾಕಿ ಸಂಸತ್ತಿನಲ್ಲಿ ಧ್ವನಿ ಎತ್ತುವಂತೆ ಮಾಡಿರಿ. ಇದೊಂದು ಸಲ ಅವರಿಗೆ ಅವಕಾಶ ನೀಡಿ ಎಂದು ಎಂ. ಬಿ. ಪಾಟೀಲರು ಕೇಳಿಕೊಂಡರು.
ಈ ವೇಳೆಯಲ್ಲಿ ರಾಜು ಆಲಗೂರರವರು ಮಾತನಾಡಿ. ಈ ಭಾಗ ನನಗೆ ಹೊಸದಲ್ಲ, ಎರಡು ಸಲ ಶಾಸಕನಾಗಿ ಅಭಿವೃದ್ಧಿ ಕಾರ್ಯ ಮಾಡಿ ಮತದಾರರಿಗೆ ಹೃದಯಲ್ಲಿರುವೆನು, ಮೋದಿ ಹವಾ ಎಲ್ಲೂ ಇಲ್ಲಾ ಕಾಂಗ್ರೆಸ್ ಹವಾ ಜೋರಾಗಿದೆ. ಬಿಜೆಪಿಯವರು ಮಹಾ ಸುಳ್ಳುಗಾರರು ಜಿಲ್ಲೆಯ ಅಭಿವೃದ್ಧಿಗೆ ನನಗೆ ಮತಹಾಕಿ ಎಂದು ಕೇಳಿಕೊಂಡರು.
ಈ ವೇಳೆ ಶಾಸಕರ ವಿಠ್ಠಲ ಕಟಕಧೋಂಡ, ಮಹಾದೇವ ಸಾಹುಕಾರ ಭೈರಗೊಂಡ, ಕಾಂತಾನಾಯಕ, ಬಾಬುಗೌಡ ಪಾಟೀಲ, ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಮುಖಂಡ ಡಿ.ಎಲ್. ಚವ್ಹಾಣ, ರಾಜೇಂದ್ರಬಾಬು ನಾಯಕ, ಎಂ. ಆರ್. ಪಾಟೀಲ, ಬ್ಲಾಕ ಅಧ್ಯಕ್ಷ ಆರ್.ಡಿ. ಹಕ್ಕೆ, ಕಾಂಗ್ರೆಸ್ ಮುಖಂಡ ಶಬ್ಬೀರ ನದಾಫ, ಮಹಾದೇವ ಹಿರೇಕುರುಬರ, ಮಹಾದೇವ ಬನಸೋಡೆಎಲ್ಲ ಮುಖಂಡರು ಪದಾಧಿಕಾರಿಗಳು ಕಾರ್ಯಕರ್ತ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

