ಇಂಡಿ: ಕಾರ್ಮಿಕರು ಜಗತ್ತಿನ ಆಸ್ತಿ, ಶ್ರಮಜೀವಿಗಳು ಅವರನ್ನು ಗೌರವಿಸಲು ಅವರ ಸೇವೆ ಸ್ಮರಿಸಲು ಅಂತರಾಷ್ಟ್ರೀಯ ಮಟ್ಟದಲ್ಲಿ ಕಾರ್ಮಿಕ ದಿನಾಚರಣೆ ಆಚರಿಸಲಾಗುತ್ತದೆ ಎಂದು ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ ಹೇಳಿದರು.
ಪಟ್ಟಣದ ಅಂಬೇಡ್ಕರ ವೃತ್ತದಲ್ಲಿ ಪುರಸಭೆ ಕಾರ್ಮಿಕರ ವತಿಯಿಂದ ಹಮ್ಮಿಕೊಂಡ ಕಾರ್ಮಿಕ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಕರ್ನಾಟಕ ಪೌರ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುಚ್ಚಪ್ಪ ಶಿವಶರಣ ಮಾತನಾಡಿ, ಪ್ರತಿಯೊಂದು ದೇಶದ ಅರ್ಥಿಕ ಅಭಿವೃದ್ದಿ ಆ ದೇಶದ ಕಾರ್ಮಿಕರ ಮೇಲೆ ಅವಲಂಬಿತವಾಗಿದೆ. ದಕ್ಷತೆಯಿಂದ ಕೂಡಿದ ಕಾರ್ಮಿಕ ವರ್ಗದಿಂದ ಮಾತ್ರ ಆ ದೇಶ ಅರ್ಥಿಕ ಪ್ರಗತಿ ಸಾಧಿಸಿರುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಆರೋಗ್ಯ ನೀರಿಕ್ಷಕ ಸೋಮು ನಾಯಕ, ಚಂದ್ರಶೇಖರ ಕಾಲೆಭಾಗ, ಮರೆಪ್ಪ ಗುಡುಮಿ, ಮುತ್ತು ಮುರಾಳ, ಮಲ್ಲಪ್ಪ ನಡಗಡ್ಡಿ ಮತ್ತಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

