ದೇವರಹಿಪ್ಪರಗಿ: ಪಟ್ಟಣಕ್ಕೆ ಚುನಾವಣಾ ವೀಕ್ಷಕರಾದ ರತನಕುಮಾರಿ ಕನ್ವರ್ ಭೇಟಿ ನೀಡಿ, ಚುನಾವಣಾ ರಥಕ್ಕೆ ಚಾಲನೆ ನೀಡಿ, ಸೆಕ್ಟರ್ ಅಧಿಕಾರಿಗಳ ಸಭೆ ನಡೆಸಿದರು.
ಪಟ್ಟಣಕ್ಕೆ ಗುರುವಾರ ಬೆಳಿಗ್ಗೆ ಚುನಾವಣಾ ವೀಕ್ಷಕರು ಆಗಮಿಸುತ್ತಿದ್ದಂತೆಯೇ ಸಹಾಯಕ ಚುನಾವಣಾ ಅಧಿಕಾರಿ ಪ್ರವೀಣ ಜೈನ್ ಹಾಗೂ ತಹಶೀಲ್ದಾರ ಪ್ರಕಾಶ ಸಿಂದಗಿ ಸ್ವಾಗತಿಸಿದರು. ನಂತರ ಬಿಎಲ್‌ಡಿಇ ಸಂಸ್ಥೆಯ ದಿ.ಎ.ಬಿ.ಸಾಲಕ್ಕಿ ಕಾಲೇಜಿನಲ್ಲಿಯ ಮತಕ್ಷೇತ್ರದ ಭದ್ರತಾ ಕೊಠಡಿಗೆ ಭೇಟಿ ನೀಡಿ ಪರಿಶೀಲಿಸಿದರು. ನಂತರ ಡಾ.ಅಂಬೇಡ್ಕರ್ ವೃತ್ತದಲ್ಲಿ ಚುನಾವಣಾ ರಥಕ್ಕೆ ಚಾಲನೆ ನೀಡಿದರು. ತದನಂತರ ತಹಶೀಲ್ದಾರ ಕಚೇರಿಗೆ ತೆರಳಿ ಮತಕ್ಷೇತ್ರದ ಸೆಕ್ಟರ್ ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡು ನಿರ್ದೆಶನಗಳನ್ನು ನೀಡಿ ಮಾತನಾಡಿದರು. ಕೊನೆಯಲ್ಲಿ ಸಖಿ ಮತಗಟ್ಟೆ ಸೇರಿದಂತೆ ಸಂಖ್ಯೆ ೨೮, ೨೯,೩೦,೩೧, ೩೬, ೩೯, ೪೦, ೪೧ ಗಳಿಗೆ ಭೇಟಿ ನೀಡಿ ಪೂರ್ವಸಿದ್ಧತೆ ಹಾಗೂ ವ್ಯವಸ್ಥೆಗಳನ್ನು ಪರಿಶೀಲನೆ ಮಾಡಿದರು.
ತಾಲ್ಲೂಕು ಪಂಚಾಯಿತಿ ಇಓ ಸಂಜೀವ ಜುನ್ನೂರ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಲ್.ಡಿ.ಮುಲ್ಲಾ, ಪಿಎಸ್‌ಐ ಬಸವರಾಜ ತಿಪ್ಪಾರೆಡ್ಡಿ, ಬಿ.ಬಿ.ಕೊಳ್ಳಿ, ಕಿರಿಯ ಆರೋಗ್ಯ ನಿರೀಕ್ಷಕ ಫಿರೋಜ್ ಮುಲ್ಲಾ, ಅನೀಲಕುಮಾರ ರಾಠೋಡ ಸೇರಿದಂತೆ ಸೆಕ್ಟರ್ ಅಧಿಕಾರಿಗಳು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

