ಬ್ರಹ್ಮದೇವನಮಡು: ಸಿಂದಗಿ ತಾಲೂಕು ಸುಕ್ಷೇತ್ರ ಹೊನ್ನಳ್ಳಿ – ಬ್ರಹ್ಮದೇವನಮಡು ಗ್ರಾಮದಲ್ಲಿ ಕಲ್ಶಾಣದೇಶ್ವರ ಜಾತ್ರೆ ಅಂಗವಾಗಿ ಹಮ್ಮಿಕೊಂಡಿದ್ದ ಮಹಾಸಾದ್ವಿ ಶಿವಶರಣಿ ಹೇಮರಡ್ಡಿ ಮಲ್ಲಮ್ಮನವರ ಮಹಾ ಪುರಾಣ ಕಾಯ೯ಕ್ರಮದಲ್ಲಿ ಮೆ.೩ರಂದು ರಾತ್ರಿ ೮ಗಂಟೆಗೆ ಶ್ರೀದೇವಿ ಹಾಗೂ ಮುತೈದೆಯರ ಉಡಿ ತುಂಬುವ ಕಾಯ೯ಕ್ರಮ ನಡೆಯಲಿದೆ. ಸಾಸನೂರ ತುಂಬಗಿ ಮಡಿವಾಳೇಶ್ವರ ಮಠದ ಮಹಾಂತಲಿಂಗ ಶಿವಾಚಾಯ೯ರು ದಿವ್ಶ ಸಾನಿಧ್ಶ ವಹಿಸುವರು. ನಿವೃತ್ತ ಕೃಷಿ ಅಧಿಕಾರಿ ಶಿವಾನಂದ ಹಿರೇಮಠ ಸಮ್ಮುಖ ವಹಿಸುವರು. ಸಚಿವ ಶರಣಬಸಪ್ಪ ದಶ೯ನಾಪೂರ ಪತ್ನಿ ಭಾರತಿ ದಶ೯ನಾಪೂರ, ಸಿಂದಗಿ ಶಾಸಕ ಅಶೋಕ ಮನಗೂಳಿ ಪತ್ನಿ ನಾಗರತ್ನಾ ಮನಗೂಳಿ, ಮಾಜಿ ಶಾಸಕ ರಮೇಶ ಭೂಸನೂರ ಪತ್ನಿ ಲಲಿತಾ ಭೂಸನೂರ, ಜೇವಗಿ೯ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ಪತ್ನಿ ನಾಗವೇಣಿ ಪಾಟೀಲ, ಶಶಿಕಲಾ ದಂಡಪ್ಪ ಸಾಹು ಮುಖ್ಶಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಶ್ರೀಮಠದ ಒಡೆಯ ಕಲ್ಶಾಣದಯ್ಶ ವೀರಘಂಟಯ್ಶ ಸ್ವಾಮೀಜಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

