ಇಂಡಿ: ಪಟ್ಟಣದಲ್ಲಿ ಮನೆ ನಿರ್ಮಿಸಬೇಕಾದರೆ ಕಟ್ಟಡ ಪರವಾನಿಗೆಗೆ ಅನುಮತಿ ಕೇಳಿದರೆ ಆರು ತಿಂಗಳಾದರೂ ಅನುಮತಿ ಸಿಗದ ದುಸ್ಥಿತಿ ಇಲ್ಲಿಯ ಪುರಸಭೆಯಲ್ಲಿದ್ದು ಇದರಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.
ಪುರಸಭೆಯಲ್ಲಿ ಅನುಮತಿ ಪಡೆದು ಕಟ್ಟಡ ಕಟ್ಟಬೇಕಾದರೆ ಸಂಬಂಧಪಟ್ಟ ಇಂಜಿನಿಯರ್ ಹತ್ತಿರ ಕಟ್ಟಡದ ನೀಲ ನಕ್ಷೆ ಹಾಗೂ ಅಂದಾಜು ಮೊತ್ತದ ಪ್ರತಿ ಸೇರಿದಂತೆ ಕಟ್ಟಡ ಪರವಾನಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಆರು ತಿಂಗಳ ಹಿಂದೆಯೇ ಅರ್ಜಿ ಸಲ್ಲಿಸಿದರೂ ಸಹ ಅನುಮತಿ ಸಿಗುತ್ತಿಲ್ಲ. ಹೀಗಾಗಿ ಇಂಡಿ ಪಟ್ಟಣದಲ್ಲಿ ಮನೆ ಕಟ್ಟಲು ಅನುಮತಿಗಾಗಿ ಜನ ಹರಸಾಹಸದ ಪಡುತ್ತಿರುವ ಘಟನೆ ನಡೆಯುತ್ತಿದೆ.
ಪುರಸಭೆಯವರನ್ನು ಕೇಳಿದರೆ ನಾವು ವಿಜಯಪುರದ ನಗರ ಮತ್ತು ಗ್ರಾಮಾಂತರ ಯೋಜನಾ ಪ್ರಾಧಿಕಾರಕ್ಕೆ ಅರ್ಜಿ ಕಳುಹಿಸಿದ್ದೇವೆ. ಅವರು ಅಪ್ರುವಲ್ ನೀಡಿದ ನಂತರ ನಮಗೆ ಮುಂದಿನ ಕ್ರಮ ಕೈಗೊಳ್ಳಲು ಬರುತ್ತದೆ ಅಲ್ಲಿಯವರೆಗೂ ನಾವೇನು ಮಾಡೋಕೆ ಆಗೋಲ್ಲ ಅಂತಾರೆ ಪುರಸಭೆ ಸಿಬ್ಬಂದಿ.
ಒಟ್ಟಿನಲ್ಲಿ ಈ ಅಧಿಕಾರಿಗಳ ತಿಕ್ಕಾಟದ ಮಧ್ಯ ಮನೆ ಕಟ್ಟುವ ಕನಸು ಹೊತ್ತಿರುವ ಜನರ ಪರಿಪಾಟಲು ಹೇಳತೀರದಂತಾಗಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಸಮಸ್ಯೆ ಪರಿಹರಿಸುವರೇ ಕಾದು ನೋಡೋಣ.
Subscribe to Updates
Get the latest creative news from FooBar about art, design and business.
ಕಟ್ಟಡ ಪರವಾನಿಗೆಗೆ ಆರು ತಿಂಗಳಾದರೂ ಅನುಮತಿ ಸಿಗದ ದುಸ್ಥಿತಿ!
Related Posts
Add A Comment

