ನಿಡಗುಂದಿ: ವ್ಯಕ್ತಿಯೊಬ್ಬನನ್ನು ಮಚ್ಚಿನಿಂದ ಕೊಚ್ಚಿ ಕೊಲೆಗೈದ ಘಟನೆ ತಾಲ್ಲೂಕಿನ ಬಸವನಬಾಗೇವಾಡಿ ಕ್ರಾಸ್ ಬಳಿ ಬುಧವಾರ ಸಂಜೆ ಜರುಗಿದೆ.
ಮೃತ ವ್ಯಕ್ತಿ ಬೇನಾಳ ಎನ್ ಎಚ್ ಗ್ರಾಮದ ಯಲಗೂರದಪ್ಪಗೌಡ ಗುರುಪಾದಪ್ಪಗೌಡ ಪಾಟೀಲ (65).
ಆಸ್ತಿ ವಿವಾದ ಸೇರಿದಂತೆ ನಾನಾ ಕಾರಣಗಳಿಂದ ಅದೇ ಗ್ರಾಮದ ಕಿರಣಕುಮಾರ ವಿಠ್ಠಲ ಬೋರಣ್ಣವರ (23) ಕೊಲೆ ಮಾಡಿದ್ದಾನೆ ಎನ್ನಲಾಗಿದ್ದು, ನಿಡಗುಂದಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ ಎಂದು ನಿಡಗುಂದಿ ಪೊಲೀಸರು ತಿಳಿಸಿದ್ದಾರೆ.
ಬುಧವಾರ ಸಂಜೆ ಡಾಬಾವೊಂದರಲ್ಲಿ ಊಟಕ್ಕೆ ಕುಳಿತಿದ್ದ ಯಲಗೂರದಪ್ಪಗೌಡನ ಮೇಲೆ ಕಿರಣಕುಮಾರ ಏಕಾಏಕಿ ಮಚ್ಚಿನಿಂದ ಹಲ್ಲೆ ನಡೆಸಿದ ಎನ್ನಲಾಗಿದೆ.
ತೀವ್ರ ಗಾಯಗೊಂಡ ಯಲಗೂರದಪ್ಪನನ್ನು ಚಿಕಿತ್ಸೆಗಾಗಿ ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಬುಧವಾರ ರಾತ್ರಿಯೇ ಯಲಗೂರದಪ್ಪಗೌಡ ಮೃತಪಟ್ಟ ಎಂದು ನಿಡಗುಂದಿ ಪೊಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ವಿಜಯಪುರ ಎಸ್ ಪಿ ಋಷಿಕೇಷ ಸೋನಾವಾಲೆ, ಹೆಚ್ಚುವರಿ ಎಸ್ ಪಿ ಶಂಕರ ಮಾರಿಹಾಳ, ಸಿ.ಪಿ. ಐ. ಶರಣಗೌಡ ಗೌಡರ ಭೇಟಿ ನೀಡಿದರು. ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Subscribe to Updates
Get the latest creative news from FooBar about art, design and business.
Related Posts
Add A Comment
