ಆಲಮಟ್ಟಿ: ಇಲ್ಲಿಯ ನರ್ಸರಿಯಲ್ಲಿ ಅಂತರಾಷ್ಟ್ರೀಯ ಕಾರ್ಮಿಕ ದಿನಾಚರಣೆಯನ್ನು ಆಚರಿಸಲಾಯಿತು.
ಉಪ ಅರಣ್ಯ ಸಂರಕ್ಷಣಾಧಿಕಾರಿ ರಾಜಣ್ಣ ನಾಗಶೆಟ್ಟಿ ಮಾತನಾಡಿ,
ಕಾರ್ಮಿಕ ಸಂಘಟನೆಗಳು ಪ್ರಮುಖವಾಗಿ ಆಚರಿಸುವ ಸಾರ್ವಜನಿಕ ಉತ್ಸವದ ದಿನವೇ ಕಾರ್ಮಿಕ ದಿನವಾಗಿದೆ. ಈ ದಿನದಂದು ಪ್ರಪಂಚದ ನೂರಾರು ರಾಷ್ಟ್ರಗಳಲ್ಲಿ ಸಾಮಾಜಿಕ ಮತ್ತು ಆರ್ಥಿಕ ಸಾಧನೆಗಳನ್ನು ಆಚರಿಸಲಾಗುತ್ತದೆ. 20ನೇ ಶತಮಾನದಲ್ಲಿ ಕಾರ್ಮಿಕ ಸಂಘಟನೆಗಳ ಪ್ರಭಾವದಿಂದಾಗಿ ಭಾರತದಲ್ಲಿಯೂ ಈ ದಿನಾಚರಣೆ ಆಚರಿಸಲಾಗುತ್ತದೆ ಎಂದು ಕಾರ್ಮಿಕ ದಿನದ ಇತಿಹಾಸ, ಬೆಳವಣಿಗೆ, ಅದರ ಹಿನ್ನಲೆ ಕುರಿತು ವಿವರಿಸಿದರು.
ಆರ್.ಎಂ.ಜಿ.ಎಫ್.ಅಧ್ಯಕ್ಷ ನೇತಾಜಿ ಗಾಂಧಿ ಮಾತನಾಡಿ, ಶ್ರಮಜೀವಿಗಳಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಸ್ವಾತಂತ್ರ್ಯ ಪೂರ್ವದ 1923ರಲ್ಲಿ ಮೊದಲ ಬಾರಿಗೆ ಭಾರತದಲ್ಲಿ ಈ ದಿನವನ್ನು ಆಚರಿಸಲು ಆರಂಭಿಸಲಾಯಿತು.
ದಿನಕ್ಕೆ 8 ತಾಸು ಕೆಲಸದ ಅವಧಿಯನ್ನು ನಿಗದಿ ಮಾಡಬೇಕು ಎನ್ನುವ ಆಗ್ರಹದೊಂದಿಗೆ ಶುರುವಾದ ಚಳವಳಿಗೆ ಯಶಸ್ಸು ಸಿಕ್ಕಿತು. ಕಾರ್ಮಿಕರ ಕೊಡುಗೆ ಮತ್ತು ಅವರ ತ್ಯಾಗವನ್ನು ಈ ದಿನ ಸ್ಮರಿಸಲಾಗುತ್ತದೆ. ಕಾರ್ಮಿಕರ ತ್ಯಾಗವನ್ನು ಮನಗಂಡ ಮಹಾತ್ಮ ಗಾಂಧೀಜಿಯವರು 1918ರಲ್ಲಿ ಅಹಮದಾಬಾದ್ ಹತ್ತಿ ಗಿರಣಿ ಮಾಲೀಕರ ವಿರುದ್ಧ ಸತ್ಯಾಗ್ರಹ ಶುರುಮಾಡಿ ಕಾರ್ಮಿಕರ ಸಮಸ್ಯೆಯನ್ನು ಪರಿಹರಿಸಿದರು ಎಂದು ಹೇಳಿದರು.
ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿ ಸತೀಶ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಮಿಕ ಮುಖಂಡರಾದ ವಿರುಪಾಕ್ಷಿ ಮಾದರ, ಬಸವರಾಜ್ ಗುಡಿಮನಿ, ದ್ಯಾಮಣ್ಣ ಬಿರಾದಾರ, ಭೀಮಶಿ ನಾಯಕ, ಯಶೋಧಾ ಗಾರೇಗೋಳ, ಗಸ್ತು ಅರಣ್ಯ ಪಾಲಕರಾದ ಅಶೋಕ ಕಾಳೆ, ನಾಗಪ್ಪ ಹಯ್ಯಾಳಪ್ಪ, ಪ್ರವೀಣಕುಮಾರ ಹಚ್ಯಾಳಕರ , ಈರಯ್ಯ ಹಳ್ಳಿಮಠ ಮತ್ತೀತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

