ವಿಜಯಪುರ: ೨೦೨೪ರ ಲೋಕಸಭಾ ಚುನಾವಣೆಯ ಪ್ರಯುಕ್ತ ವಿಜಯಪುರ ಜಿಲ್ಲೆಯ ಲೋಕಸಭಾ ಅಭ್ಯರ್ಥಿ ರಮೇಶ ಜಿಗಜಿಣಗಿಯವರಿಗೆ ಬೆಂಬಲ ಸೂಚಿಸಲು ವಿಜಯಪುರ ತಾಲೂಕಿನ ಗುಣಕಿ ಗ್ರಾಮದಲ್ಲಿ ಬಂಜಾರಾ ಸಮುದಾಯದ ಸಭೆ ಜರುಗಿತು.
ಸಭೆಯನ್ನು ಉದ್ದೇಶಿಸಿ ಅಭ್ಯರ್ಥಿ ರಮೇಶ ಜಿಗಜಿಣಗಿ ಮಾತನಾಡಿ, ನಾನು ಈ ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ವಿಜಯಪುರ ಜಿಲ್ಲೆಯ ಅಭಿವೃದ್ಧಿಗೆ ಒಂದು ಲಕ್ಷ ಕೋಟಿ ಅನುದಾನ ತಂದಿರುವೆ ವಿಮಾನ ನಿಲ್ದಾಣ, ರೈಲು ಮೇಲ್ ಸೇತುವೆ ಹೀಗೆ ಹತ್ತು ಹಲವಾರು ಕೆಲಸಗಳನ್ನು ಮಾಡಿದ್ದೇನೆ. ಬಂಜಾರ ಸಮಾಜಕ್ಕೆ ಸಾಕಷ್ಟು ಅಭಿವೃದ್ಧಿ ಕೆಲಸವನ್ನು ಕೂಡ ಮಾಡಿದ್ದೇನೆ ಎಂದರು.
ಈ ಸಮಯದಲ್ಲಿ ಬಂಜಾರಾ ಸಮುದಾಯದ ಮುಖಂಡರುಗಳು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮಹೇಂದ್ರ ಕುಮಾರ್ ನಾಯಕ್ ಮಾತನಾಡಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಮ್ಮ ಬಂಜಾರ ಸಮಾಜವು ಬಿಜೆಪಿ ಪರ ನಿಲ್ಲಲಿದೆ. ದೇಶ ರಕ್ಷಣೆಗೆ ಮತ್ತೆ ಮೋದಿ ಪ್ರಧಾನಿಯಾಗಲೇಬೇಕು. ರಮೇಶ ಜಿಗಜಿಣಗಿಯವರು ಈ ಬಾರಿಯೂ ಸಹ ಒಂದು ಲಕ್ಷ ಮತಗಳ ಅಂತರದಿಂದ ಗೆಲುವನ್ನು ಸಾಧಿಸಲಿದ್ದಾರೆ. ದೇಶ ರಕ್ಷಣೆಗೆ ಪ್ರಧಾನಿ ಮೋದಿಯವರು ಹಗಲಿರುಳು ಶ್ರಮಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಉಚಿತ ಯೋಜನೆಗಳನ್ನು ಜನ ನಂಬಬಾರದು ನಮ್ಮ ಮನೆಯ ಹೆಣ್ಣು ಮಕ್ಕಳ ಹಾಗೂ ತಮ್ಮ ಸಮಾಜದ ರಕ್ಷಣೆಗೆ ಮೋದಿಯವರನ್ನು ಮತ್ತೆ ಪ್ರಧಾನಿಯನ್ನಾಗಿ ಮಾಡಲೇಬೇಕು. ನಮ್ಮ ಸಮಾಜದ ಮುಖಂಡರು ಯಾವುದೇ ಯಾವುದೇ ಆಮಿಷಕ್ಕೆ ಒಳಗಾಗದೆ ಕಾಂಗ್ರೆಸ್ಸಿನ ಸುಳ್ಳು ಹಾಗೂ ಯಾವುದೇ ಊಹಾಪೋಹ ಗಳಿಗೆ ಕಿವಿಕೊಡದೆ ದೇಶದ ರಕ್ಷಣೆಯ ಹಿತ ದೃಷ್ಟಿಯಿಂದ ಮೋದಿಯವರ ಕೈ ಬಲಪಡಿಸಲು ಮತ್ತೊಮ್ಮೆ ರಮೇಶ ಜಿಗಜಿಣಗಿಯವರನ್ನು ಲೋಕಸಭಾ ಸದಸ್ಯರನ್ನಾಗಿ ಮಾಡಲು ನಮ್ಮ ಸಮಾಜದವರು ಅತಿ ಹೆಚ್ಚು ಮತಗಳಿಂದ ಅವರನ್ನು ಆರಿಸಿ ತರಲು ಪಣತೊಟ್ಟಿರುತ್ತಾರೆ ಎಂದರು.
ಇದೇ ಸಂದರ್ಭದಲ್ಲಿ ಬಂಜಾರ ಸಮಾಜದ ಮುಖಂಡರಾದ ಭೀಮಸಿಂಗ್ ರಾಠೋಡ ಮಾತನಾಡಿ, ಕಾಂಗ್ರೆಸ್ಸಿನ ಸುಳ್ಳು ಭರವಸೆಗಳಿಗೆ ಕಿವಿಕೊಡಬಾರದು. ನಮ್ಮ ಸಮಾಜಕ್ಕೆ ಬಿಜೆಪಿಯು ಅಪಾರ ಕೊಡುಗೆ ನೀಡಿದೆ. ಸಮಾಜದ ಎಲ್ಲ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿಸಿದ್ದು ಬಿಜೆಪಿ ಹೊರತು ಕಾಂಗ್ರೆಸ್ ಅಲ್ಲ. ಅದಕ್ಕೆ ನಮ್ಮ ಸಮಾಜದವರು ಈ ಬಾರಿ ಮತ್ತೆ ಮೋದಿಯವರನ್ನು ಪ್ರಧಾನಿಯನ್ನಾಗಿ ಮಾಡಲು ಪಣತೊಟ್ಟಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಶಂಕರಗೌಡ ಪಾಟೀಲ, ಜೆಡಿಎಸ್ ಮುಖಂಡರಾದ ಬಾಬು ರಾಠೋಡ, ಬಾಬು ಚವ್ಹಾಣ, ಬಿಜೆಪಿ ಮುಖಂಡರಾದ ಸಂಜೀವ್ ಐಹೊಳೆ, ನಾಗಠಾಣ ಮಂಡಲದ ಅಧ್ಯಕ್ಷರಾದ ಸಿದ್ಧಗೊಂಡ ಬಿರಾದಾರ, ಹಣಮಂತ ಬಿರಾದಾರ, ಶರಣು ಬ್ಯಾಳಿ, ಅತಾಲಟ್ಟಿ ಬಂಜಾರ ಸಮಾಜದ ಮುಖಂಡರಾದ ತುಕಾರಾಮ್, ಮಹಾರಾಜ್ ಶಂಕರಗೌಡ ಪಾಟೀಲ್, ಕಲ್ಲಪ್ಪ ಕರಾಳೆ, ವಿನೋದ ಕೋಳೂರಿಗೆ, ತಾಂಡಾ ಪ್ರಮುಖರು, ಕಾರಬಾರ, ಇನ್ನಿತರರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

