ವಿಜಯಪುರ: ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾ ಭವನದಲ್ಲಿ ಕಾರ್ಮಿಕ ದಿನಾಚರಣೆಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಹಿರಿಯ ಹೋರಾಟಗಾರರಾದ ಅಪ್ಪಾಸಾಹೇಬ ಯರನಾಳ, ಹಣಮಂತ ಮಮದಾಪೂರ, ಎಂ.ಎ. ಮಾಲಬಾವಡಿ, ಆರ್.ಡಿ. ಹಳ್ಳಿಗಳಿ (ನ್ಯಾಯವಾದಿಗಳು), ಬಿ.ವಾಯ್. ದೊಡಮನಿ ಕಾರ್ಮಿಕರ ಕುರಿತು ಮಾತನಾಡಿದರು.
ಹಿರಿಯ ಹೋರಾಟಗಾರರಾದ ಅಪ್ಪಾಸಾಹೇಬ ಯರನಾಳ ಕಾರ್ಮಿಕ ದಿನಾಚರಣೆಯನ್ನು ಕಾರ್ಮಿಕರ ಹಬ್ಬವನ್ನಾಗಿ ಆಚರಿಸುತ್ತಾರೆ ಎಂದರು.
ಈ ಸಂದರ್ಭದಲ್ಲಿ ಕಾರ್ಮಿಕ ಹೋರಾಟಗಾರರಾದ ಸಿದ್ದು ಎಂ. ಕಲ್ಲೂರ, ಕೆ.ಕೆ. ಬನ್ನಟ್ಟಿ, ಎಂ.ಎ. ಮಾಲಬಾವಡಿ, ಬಿ.ವೈ.ದೊಡಮನಿ ಇವರನ್ನು ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಭಾಸ್ಕರ ಮಂದಕನಳ್ಳಿ, ಸರ್ವೆಶ ಕಟ್ಟಿ, ಶಿವಾನಂದ ಮೂಡಲಗಿ, ರಮೇಶ ಮುಂಡೇವಾಡಿ ಇನ್ನಿತರರು ಭಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

