ಢವಳಗಿ: ವಿಜಯಪುರ ಲೋಕಸಭಾ ಮೀಸಲು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ ಚಂದಪ್ಪ ಜಿಗಜಿಣಿಗಿ ಅವರ ಪರವಾಗಿ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ಪ್ರಭು ತಳಗೇರಿ ಅವರು ಬುಧವಾರದಂದು ತಾಲೂಕಿನ ಬಳವಾಟ, ಜೆಕ್ಕೆರಾಳ, ಜಮ್ಮಲದಿನ್ನಿ, ತಾರನಾಳ, ಢವಳಗಿ ಗ್ರಾಮದಲ್ಲಿ ರಮೇಶ ಜಿಗಜಿಣಿಗಿ ಅವರ ಪರವಾಗಿ ಕೇಂದ್ರ ಸರ್ಕಾರದ ಅಭಿವೃದ್ಧಿಗಳನ್ನು ಜನರಿಗೆ ತಿಳಿಸಿ ಬಿಜೆಪಿ ಪಕ್ಷಕ್ಕೆ ಮತ ನೀಡುವಂತೆ ಕೇಳಿಕೊಂಡರು.
ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರವು ಸಮಾಜದ ಕಟ್ಟಕಡೆಯ ವ್ಯಕ್ತಿಯ ಕಲ್ಯಾಣದಿಂದ ಹಿಡಿದು ಇಡಿ ವಿಶ್ವ ಮಟ್ಟದಲ್ಲಿ ಭಾರತ ದೇಶದ ಗೌರವವನ್ನು ಹೆಚ್ಚಿಸುವಂತೆ ದಿಟ್ಟ ನಿರ್ಧಾರಗಳನ್ನು ತೆಗೆದುಕೊಂಡಿದೆ. ಆಡಳಿತಾತ್ಮಕವಾಗಿ ಇಡಿ ದೇಶದಲ್ಲಿ ಸುಶಾಸನ ಜಾರಿಗೆ ಬಂದಿದ್ದು ಮೋದಿಜೀಯವರಿಂದ. ಇಂತಹ ಸಮರ್ಥ ನೇತೃತ್ವಕ್ಕೆ ಮತ್ತೆ ದೇಶದ ಆಡಳಿತ ಸುಧಾರಣೆಗಾಗಿ ಮತ್ತೋಮ್ಮೆ ಪ್ರಧಾನಿ ಗದ್ದುಗೆ ಏರಲು ಮೋದಿಯವರನ್ನು ಗೆಲ್ಲಿಸೋಣ, ಮೋದಿ ಅವರ ಗೆಲುವಿಗೆ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಿಗೆ ಅವರಿಗೆ ಮತ ನೀಡಿ ಎಂದು ಮಾತನಾಡಿದರು.
ಇದೇ ಸಂದರ್ಭದಲ್ಲಿ ಬಸರಕೋಡ ಗ್ರಾಮದ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಯಮನಪ್ಪ ಬಸರಕೋಡ, ಬಿಜೆಪಿ ಮುಖಂಡರಾದ ಮಲ್ಲಪ್ಪ ಅರ್ಜಿ, ಬಾಲಪ್ಪ ಬಸರಕೋಡ, ಪವಾಡೇಪ್ಪ ತಳಗೇರಿ, ಮಹಾಂತೇಶ ದೊಡಮನಿ ಢವಳಗಿ, ಸೇರಿದಂತೆ ಯುವಕರು ಮತ್ತು ಗ್ರಾಮದ ಹಿರಿಯರು ಪಾಲ್ಗೊಂಡಿದ್ದರು.
Subscribe to Updates
Get the latest creative news from FooBar about art, design and business.
ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಪರ ಪ್ರಭು ತಳಗೇರಿ ಪ್ರಚಾರ
Related Posts
Add A Comment

