ವಿಜಯಪುರ : ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಬಿಜಾಪುರ ಲೋಕಸಭಾ ಅಭ್ಯರ್ಥಿಯಾಗಿರುವ ಗಣಪತಿ ರಾಥೋಡ್ ಅವರ ಪರವಾಗಿ ಇಂದು ವಿಜಯಪುರ ನಗರ ಸೇರಿದಂತೆ ವಿವಿಧ ಭಾಗಗಳಲ್ಲಿ ರಾಜ್ಯಾಧ್ಯಕ್ಷ ರವಿಕೃಷ್ಣ ರೆಡ್ಡಿ ಮತಯಾಚನೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷ ರವಿಕೃಷ್ಣ ರೆಡ್ಡಿ ಮಾತನಾಡಿ, ಕಾಂಗ್ರೆಸ್ ಪಕ್ಷ ಸುಮಾರು ೬೦ ವರ್ಷಗಳ ಕಾಲ ಕೇವಲ ಕುಟುಂಬ ರಾಜಕಾರಣ ಮಾಡುತ್ತಾ ಬಂದಿದ್ದು, ಈ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ಯಾವುದೇ ಬೆಲೆ ಇಲ್ಲ. ಕೇವಲ ಹಣ ಇದ್ದರೆ ಮಾತ್ರ ಈ ಪಕ್ಷದಲ್ಲಿ ಬೆಲೆ ಇದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸದ್ಯ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರದಲ್ಲಿದ್ದು, ಇವರ ಮಗ, ಮಗಳು, ಹೆಂಡತಿ, ಅಳಿಯ ಇಂತಹ ವ್ಯಕ್ತಿಗಳಿಗೆ ಮಾತ್ರ ಪಕ್ಷದ ಟಿಕೆಟ್ ನೀಡಿದ್ದು, ರಾಜ್ಯದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಿಟ್ಟಿಗೆ ಗುರಿಯಾಗಿವೆ. ಉನ್ನತ ಹುದ್ದೆಗಳನ್ನು ಪಕ್ಷದಲ್ಲಿರುವ ಸಚಿವರು, ಶಾಸಕರ ಮಕ್ಕಳಿಗೆ ಪಕ್ಷದ ಟಿಕೆಟ್ ನೀಡಿದ್ದರಿಂದ ನಿಜವಾದಿ ಪಕ್ಷದ ನಿಷ್ಠಾವಂತ ಪಕ್ಷದ ಕಾರ್ಯಕರ್ತರಿಗೆ ಅನ್ಯಾಯ ಮಾಡಿದ್ದಾರೆ. ಅದೇ ರೀತಿ ಬಿಜೆಪಿ ಪಕ್ಷವು ಸಹ ಇದಕ್ಕೆ ಹೊರತಾಗದೇ ತಮ್ಮ ಮಕ್ಕಳಿಗೆ ಟಿಕೆಟ್ ನೀಡಿ ಕಾರ್ಯಕರ್ತರನ್ನು ಅವರ ಕೈಯಾಳು ಆಗಿ ದುಡಿಸಿಕೊಳ್ಳುತ್ತಿರುದು ನಾಚಿಕೆಗೇಡಿನ ಸಂಗತಿಯಾಗಿದೆ. ಜಿಲ್ಲೆಯಲ್ಲಿ ಪ್ರಭಾರಿ ನಾಯಕರ ಶಾಲಾ ಕಾಲೇಜುಗಳೇ ತಲೆ ಎತ್ತಿರುವುದರಿಂದ ಮಕ್ಕಳು ಶಿಕ್ಷಣ ಕಲಿಯುವದು ಬಹಳ ದುಬಾರಿ ಆಗಿ ಪರಿಣಮಿಸುತ್ತಿದೆ. ಈ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದ ಶಾಲಾ ಕಾಲೇಜು, ವೈದ್ಯಕೀಯ ಕಾಲೇಜುಗಳು ಆಗಬೇಕು. ಹಣದ ಆಮಿಷ ಒಡ್ಡಿ, ಉಚಿತ ಗ್ಯಾರೆಂಟ್‌ಗಳನ್ನು ನೀಡುತ್ತ ಸಾಗಿರುವ ಸರಕಾರ ದೇಶದ ಹಿತವನ್ನು ಕಾಪಾಡುವ ಕೆಲಸ ಆಗಬೇಕಾಗಿದೆ. ಇವರ ಈ ಉಚಿತ ಗ್ಯಾರೆಂಟಿಯಿಂದ ಎಲ್ಲ ವರ್ಗದ ಜನರಿಗೆ ತೊಂದರೆ ಆಗುತ್ತಿದೆ. ಈ ಉಚಿತ ಗ್ಯಾರೆಂಟಿಯಿಂದ ರಾಜ್ಯವನ್ನು ಆರ್ಥಿಕ ಪರಿಸ್ಥಿತಿಯ ಕಡೆಗೆ ನೂಕುತ್ತಿರುವದು ಖೇದಕರ ಸಂಗತಿಯಾಗಿದೆ. ಸದ್ಯ ಎಲ್ಲ ವಸ್ತುಗಳ ಬೆಲೆಯು ದುಬಾರಿ ಆಗುತ್ತಿದೆ. ಈ ಸರಕಾರಗಳು ಒಂದು ಜೇಬಿಗೆ ಕತ್ತರಿ ಹಾಕಿ ಇನ್ನೊಂದು ಜೇಬಿಗೆ ಕೈ ಆಗುವ ಹುನ್ನಾರ ನಡೆಸುತ್ತಿದೆ. ಇದೆಲ್ಲವು ಸಂವಿಧಾನ ಬಾಹಿರ ನಿರ್ಧಾರಗಳಾಗಿದ್ದು, ಇವುಗಳೆಲ್ಲವು ನಿಲ್ಲಬೇಕು. ಇಂತಹ ಸರಕಾರಗಳನ್ನು ನಾವು ದೇಶದಿಂದ ಕಿತ್ತೆಸೆಯಬೇಕು. ಹಾಗೂ ಈ ಬಾರಿ ಲೋಕಸಭಾ ಚುನಾವಣೆಗೆ ವಿಜಯಪುರ ಜಿಲ್ಲೆಯಿಂದ ಗಣಪತಿ ರಾಠೋಡ್ ಅವರು ನಮ್ಮ ಕೆ.ಆರ್.ಎಸ್. ಪಾರ್ಟಿಯಿಂದ ಸ್ಪರ್ಧಿಸಿದ್ದು, ಇವರ ಗೆಲುವಿಗಾಗಿ ತಾವು ಮತ ಚಲಾಯಸಬೇಕೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿಗಳಾದ ವಿಜಯಕುಮಾರ ಯುವಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಾನಂದ ಯಡಹಳ್ಳಿ, ಜಿಲ್ಲಾಧ್ಯಕ್ಷ ಅಶೋಕ ಜಾಧವ, ಪ್ರವೀಣ ಕನಸೇ ಮತ್ತಿತರರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
ರಾಷ್ಟ್ರಹಿತಕ್ಕಾಗಿ ಕೆ.ಆರ್.ಎಸ್. ಪಾರ್ಟಿಗೆ ಮತಚಲಾಯಿಸಿ :ರವಿಕೃಷ್ಣ ರೆಡ್ಡಿ
Related Posts
Add A Comment

