ಇಂಡಿ: ಲೋಕಸಭಾ ಅಭ್ಯರ್ಥಿ ರಮೇಶ್ ಜಿಗಜಿಣಗಿ ಅವರು ಒಬ್ಬ ಅಜಾತಶತ್ರು ಅಭಿವೃದ್ಧಿಯ ಹರಿಕಾರ ಸರಳ ಸಜ್ಜನಿಕೆಯ ರಾಜಕಾರಣಿ ಜಂಬ ಕೊಚ್ಚಿಕೊಳ್ಳದ ಧೀಮಂತ ನಾಯಕ. ಪ್ರಚಾರಪ್ರಿಯನಲ್ಲದೆ ಕೆಲಸ ಪ್ರಿಯನಾಗಿ ಕೆಲಸ ಮಾಡುವ ವ್ಯಕ್ತಿಯಾಗಿದ್ದಾರೆ ಎಂದು ಬಿಜೆಪಿ ಇಂಡಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವುಡೆ ಹೇಳಿದರು.
ಅವರು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಇಂಡಿ ಮತಕ್ಷೇತ್ರಕ್ಕೆ ಪ್ರತಿ ಮನೆ ಮನೆಗೆ ನಲ್ಲಿ ನೀರು ಕೊಡುವುದು, ಕೆರೆ ತುಂಬುವ ಯೋಜನೆ, ರೇವಣಸಿದ್ದೇಶ್ವರ ಏತ ನೀರಾವರಿ, ಹಿರೇಮಣೂನೂರ ಗ್ರಾಮದಿಂದ ಇಂಡಿ ಮುಖಾಂತರ ವಿಜಯಪುರ ಜಿಲ್ಲೆಗೆ ರಾಷ್ಟ್ರೀಯ ಹೆದ್ದಾರಿ, ಮತಕ್ಷೇತ್ರದ ಜನರಿಗೆ ಅನುಕೂಲವಾಗಲು ಜಿಲ್ಲೆಯಲ್ಲಿ ಮಾಡಿದ ಹತ್ತು ವರ್ಷದ ಅಭಿವೃದ್ಧಿ ಕಾರ್ಯಗಳು ಒಟ್ಟು ೧ ಲಕ್ಷ ಕೋಟಿಗೂ ಅಧಿಕ ಕೇಂದ್ರ ಸರ್ಕಾರದಿಂದ ಹಣ ತಂದು ಅಭಿವೃದ್ಧಿ ಮಾಡಿದ ಅಭಿವೃದ್ಧಿಯ ಹರಿಕಾರರಾಗಿದ್ದಾರೆ.
ಒಂದು ದೇಶವಾಗಲಿ, ಒಂದು ರಾಜ್ಯವಾಗಲಿ ಸಮೃದ್ಧವಾಗಬೇಕಾದರೆ ಸರ್ವತೋಮುಖ ಅಭಿವೃದ್ಧಿಯ ಯೋಜನೆಗಳಿಂದಲೇ ಹೊರತು ಗ್ಯಾರೆಂಟಿ ಇಂದಲ್ಲ, ಗ್ಯಾರೆಂಟಿಯ ಹಣದಿಂದ ಕುಡಿಯಲು ನೀರು ಸಿಗುವುದಿಲ್ಲ, ಸಮಗ್ರ ನೀರಿನ ಯೋಜನೆಗಳಿಂದ ಮಾತ್ರ ಕುಡಿಯಲು ನೀರು ಸಿಗುತ್ತದೆ, ಜನರು ಅಭಿವೃದ್ಧಿ ಮಾತ್ರ ಬಯಸುತ್ತಾರೆ ಗ್ಯಾರೆಂಟಿಗೆ ಮೆಚ್ಚುವದಿಲ್ಲಾ ಭವ್ಯ ಭಾರತ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಜಿ ಅವರ ಕೈ ಬಲಪಡಿಸಲು ರಮೇಶ್ ಜಿಗಜಿಣಗಿ ಅವರಿಗೆ ಮತದಾನ ಮಾಡಬೇಕು.
ಜಿಗಜಿಣಗಿ ಕಾರ್ಯಸಾಧನೆಗೆ ಮೆಚ್ಚಿ ಕರ್ನಾಟಕ ರಾಜ್ಯದಲ್ಲಿಯೇ ಇಂಡಿ ಮತಕ್ಷೇತ್ರದಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಮತಗಳು ಬೀಳುತ್ತವೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೋ ಜಿಗಜಿಣಗಿ ಅವರ ಆಯ್ಕೆಯೂ ಅಷ್ಟೇ ಸತ್ಯವಾಗಿದೆ ಎಂದರು.
Subscribe to Updates
Get the latest creative news from FooBar about art, design and business.
Related Posts
Add A Comment

