ರಾಜ್ಯ ಎಸ್ಸಿ ಮೋರ್ಚಾ ಉಪಾಧ್ಯಕ್ಷಗೋಪಾಲ ಘಟಕಾಂಬಳೆ ಡಾ.ಬಾಬುರಾಜೇಂದ್ರ ನಾಯಕ ವಿರುದ್ಧ ಕಿಡಿ
ವಿಜಯಪುರ:ಡಾ.ಬಾಬುರಾಜೇಂದ್ರ ನಾಯಕ ಅವರು ಬಿಜೆಪಿ ಲೋಕಸಭೆ ಅಭ್ಯರ್ಥಿ ಸಂಸದ ರಮೇಶ ಜಿಗಜಿಣಗಿ, ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕುಚಬಾಳ, ಮಾಜಿ ಸಚಿವ ಅಪ್ಪುಪಟ್ಟಣಶೆಟ್ಟಿ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ.
ವೈದ್ಯರಾಗಿ ಯಾವರೀತಿ ಮಾತನಾಡಬೇಕು ಎಂಬ ಸೌಜನ್ಯ ಅವರಲ್ಲಿ ಇಲ್ಲ ಎಂದು ರಾಜ್ಯ ಎಸ್ಸಿ ಕೋರ್ಚಾ ಉಪಾಧ್ಯಕ್ಷ, ಗೋಪಾಲ ಘಟಕಾಂಬಳೆ ಕಿಡಿಕಾರಿದರು.
ಬುಧವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಎಲ್ಲಿ ಬೇಕಾದರೂ ನಿಲ್ಲಲು ಅವಕಾಶ ಇದೆ. ಸಂಸದ ಜಿಗಜಿಣಗಿ ಅವತಿಗೆ ಪ್ರಜ್ಞೆ ಇಲ್ಲ ಎಂದಿದ್ದಾರೆ. ಅವರಿಗೆ ತಿಳುವಳಿಕೆಯ ಕೊರತೆ ಇದೆ.
ಅವರು ನಿಲ್ಲಬಾರದು ಎಂದು ಎಲ್ಲೂ ಹೇಳಿಲ್ಲ, ಚುನಾವಣೆಯಲ್ಲಿ ನಾಮಪತ್ರ ಸಲ್ಲಿಸಿ ಸ್ಪರ್ಧೆ ಮಾಡಿದರೂ, ನಮ್ಮ ನಾಯಕರಾಗಲಿ, ಕಾರ್ಯಕರ್ತರು ಏನೂ ಹೇಳಿಲ್ಲ. ನಮ್ಮ ನಾಯಕರಿಗೆ ಆ ಧ್ಯಾನ ಇದೆ. ನಿಮಗೆ ಬೆನ್ನು ಹತ್ತಿ ಸ್ಪರ್ದೆ ಮಾಡಬೇಡಿ ಎಂದು ಕಾಂಗ್ರೆಸ್ ನವರು ಹಿಂದೆ ತೆಗೆಸಿದ್ದಾರೆ, ಅದರ ಪರಿಜ್ಞಾನ ಇಲ್ಲದ ಕಾಂಗ್ರೆಸ್ ನವರಿಗೆ ಹೇಳಲಿ ಎಂದು ಟಾಂಗ್ ನೀಡಿದರು.
ಬಿಜೆಪಿ ಪಕ್ಷಕ್ಕೆ ಬಂದು ಮೂರು ವರ್ಷ ಆಗಿದೆ, ಜವಾಬ್ದಾರಿ ಕೊಟ್ಟು ಎರಡು ವರ್ಷ ಆಗಿದೆ. ಅವರು ಟಿಕೆಟ್ ಪಡೆದು ಎಂಪಿ ಆಗಲೆಂದು ಬಂದಿದ್ದಾರೆ, ಅವರು ಪ್ರಯತ್ನ ಮಾಡಿದಾರೆ, ಪಕ್ಷ ನಿರ್ಣಯ ಮಾಡಿದೆ, ಅವರು ತಾಳ್ಮೆಯಿಂದ ಇರಬೇಕಿತ್ತು. ಪಕ್ಷಕ್ಕೆ ನಿಮ್ಮ ಕೊಡುಗೆ ಏನಿದೆ? ಎರಡು ವರ್ಷದಲ್ಲಿ ಬಂದು ನೀವೇನು ದೊಡ್ಡ ಸಾಧನೆ ಮಾಡಿಲ್ಲ. ನಮ್ಮ ಪಕ್ಷದಲ್ಲಿ ಇದ್ದಿರಿ ಎಂದು ಕೆಲವು ಕಡೆ ಗುರುತಿಸ್ತಾರೆ. ಬಂಜಾರ ಸಮಾಜದ ನಾಯಕರು ಕೂಡ ಬಿಜೆಪಿ ಜೊತೆ ಇದ್ದಾರೆ.
ಸಣ್ಣತನ ಮಾತಾನಾಡುವುದು ಸರಿಯಲ್ಲ, ಅವರು ತಮ್ಮ ನಡೆ ತಿದ್ದಿಕೊಳ್ಳಲಿ ಎಂದು ತಿಳಿಹೇಳಿದರು.
ಆರ್ ಎಸ್ ಎಸ್ ಸ್ವಯಂ ಸೇವಕ ಎಂದು ಹೇಳಿಕೊಳ್ಳುವ ಡಾಕ್ಟರ್ ಬಾಬು ರಾಜೇಂದ್ರ ನಾಯಕ ಅವರು ಯಾವ ಶಾಖೆಗೆ ಎಷ್ಟು ವರ್ಷ ಹೋಗಿದಾರೋ ಅಥವಾ ಎಷ್ಟು ತಿಂಗಳು ಹೋಗಿದಾರೊ ಎಂಬುದನ್ನು ತಿಳಿಸಬೇಕು ಎಂದು ಗೋಪಾಲ ಘಟಕಾಂಬಳೆ ಲೇವಡಿ ಮಾಡಿದರು.
ಪ್ರಶಾಂತ ರಾಠೋಡ ಮಾತನಾಡಿ,
ನಾವು 20ವರ್ಷಗಳಿಂದ ಬಿಜೆಪಿಯಲ್ಲೇ ಇದ್ದೇವೆ, ಪ್ರತಿ ತಾಂಡಾದಿಂದ ಶೇ 80% ರಷ್ಟು ಬಂಜಾರಾ ಸಮುದಾಯ ಬಿಜೆಪಿ ಪರ ಮತ ಚಲಾಯಿಸಲಿದ್ದಾರೆ. ನಮ್ಮ ಸಮಾಜ ಯಾವಾಗಲೂ ಬಿಜೆಪಿ ಜೊತೆ ಇದೆ. ಬಿಜೆಪಿ ಅಭ್ಯರ್ಥಿ ಸಂಸದ ರಮೇಶ ಜಿಗಜಿಣಗಿ ಜೊತೆ, ಮೋದಿ ಅವರ ಜೊತೆ ಇರ್ತೆವೆ. ನಮ್ಮ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡಿದ್ದು ಬಿಜೆಪಿ ಸರಕಾರ. ಆ ಋಣವನ್ನು ನಾವು ಈ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮತ ಮಾಡುವ ಮೂಲಕ ತೀರಿಸುತ್ತೇವೆ ಎಂದರು
ಭೀಮಶಿ ರಾಠೋಡ ಮಾತನಾಡಿ, ಕಾಂಗ್ರೆಸ್ ನಲ್ಲಿ ಬಂಜಾರಾ ಸಮಾಜಕ್ಕೆ ಯಾವ ಸೌಲಭ್ಯ ಕೊಟ್ಟಿದ್ದಾರೆ? ಅಷ್ಟಿದ್ದರೂ ಅವರು ಯಾಕೆ ಕಾಂಗ್ರೆಸ್ ಗೆ ಹೋಗಿದಾರೆ? ಕಾಂಗ್ರೆಸ್ ನಿಂದ ಕಳೆದ 30 ವರ್ಷಗಳಿಂದ ಏನೂ ಸಹಾಯ ಆಗಿಲ್ಲ. ಟಿಕೆಟ್ ಕೇಳುವುದು ತಪ್ಪು ಅಲ್ಲ, ಪಕ್ಷದ ಸಭೆಯಲ್ಲಿ ನಾವೇ ಡಾಕ್ಟರ್ ನಾಯಕ್ ಪರವಾಗಿ ಟಿಕೆಟ್ ಕೇಳಿದ್ದೇವೆ. ಆದರೆ ಟಿಕೇಟ್ ಸಿಗಲಿಲ್ಲ, ಪಕ್ಷದ ತೀರ್ಮಾನ ಮಾಡಿದಂತೆ ನಾವು ನಡೆಯಬೇಕು. ಕಾಂಗ್ರೆಸ್ ನಲ್ಲಿ ಪ್ರಕಾಶ ರಾಠೋಡ ಅವರಿಗೂ ಟಿಕೆಟ್ ಕೊಡದೆ ಅನ್ಯಾಯ ಮಾಡಿದಾರೆ. ನಾಲ್ಕು ಸಲ ಟಿಕೆಟ್ ಕೊಟ್ಟು ಕಾಂಗ್ರೆಸ್ ನಾಯಕರು ಅವರನ್ನು ಸೋಲಿಸಿದ್ದಾರೆ.
ಮುಂದಿನ ದಿನಮಾನಗಳಲ್ಲ ಬಂಜಾರಾ ದವರಿಗೆ ಟಿಕೆಟ್ ಕೊಟ್ಟರೂ ಸೋಲಿಸುತ್ತಾರೆ.
ಬಂಜಾರಾ ಸಮಾಜದ ಶೇ 90% ರಷ್ಟು ಮತದಾರರು ಬಿಜೆಪಿಗೆ ಮತ ಹಾಕಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಭೀಮಸಿಂಗ ರಾಠೋಡ, ಡಾ.ಅರವಿಂದ ನಾಯಿಕ, ಮಂತ್ರಿ ಚವ್ಹಾಣ, ಪಿಂಟು ರಾಠೋಡ, ತಾರಾಸಿಂಗ ನಾಯಿಕ, ಮಾಧ್ಯಮ ಪ್ರಮುಖ ವಿಜಯ ಜೋಶಿ ಸೇರಿದಂತೆ ಹಲವರು ಇದ್ದರು.

