ವಿಜಯಪುರ: 10 ವರ್ಷಗಳ ಕಾಲ ಪ್ರಧಾನಿಯಾಗಿ ನರೇಂದ್ರ ಮೋದಿಯವರ ಕೆಲಸಗಳು ಅಲ್ಪಸಂಖ್ಯಾತರಿಗೆ ತೃಪ್ತಿ ತಂದಿವೆ ಎಂದು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ರಾಜ್ಯಾಧ್ಯಕ್ಷ ಡಾ.ಅನೀಲ ಥಾಮಸ್ ಹೇಳಿದರು.
ಬುಧವಾರ ನಗರದ ಬಿಜೆಪಿ ಚುನಾವಣಾ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 10 ವರ್ಷಗಳಲ್ಲಿ ಪ್ರಧಾನಿ ಮೋದಿಯವರು ಭಾರತದ ಆರ್ಥಿಕತೆಯನ್ನು 5 ನೇ ಸ್ಥಾನಕ್ಕೆ ತಂದಿದ್ದಾರೆ. ಈಗ ಮುಂದಿನ 5 ವರ್ಷಗಳಲ್ಲಿ ಭಾರತದ ಆರ್ಥಿಕತೆಯನ್ನು 3ನೇ ಸ್ಥಾನಕ್ಕೆ ಕೊಂಡೊಯ್ಯಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದರು.
2047 ರ ವೇಳೆಗೆ ಭಾರತದ 100ನೇ ಸ್ವಾತಂತ್ರೋತ್ಸವ ವರ್ಷಾಚರಣೆ ಸಂದರ್ಭದಲ್ಲಿ ಭಾರತ ವಿಶ್ವಗುರು ಆಗಲಿದೆ. ಅದರಲ್ಲಿ ಮುಸ್ಲಿಂಮರು ಕ್ರೈಸ್ತರು ಸೇರಿದಂತೆ ಎಲ್ಲ ಅಲ್ಪಸಂಖ್ಯಾತರ ಕೊಡುಗೆ ಇರಲಿದೆ ಎಂದು ತಿಳಿಸಿದರು.
ಬಿಜೆಪಿ ಕೇವಲ ಹಿಂದುಗಳ ಪಕ್ಷವಲ್ಲ. ಅಲ್ಪಸಂಖ್ಯಾತರು ಕೂಡಾ ಪ್ರಧಾನಿ ಮೋದಿ ಜಾರಿಗೊಳಿಸಿದ ಯೋಜನೆಗಳ ಫಲಾನುಭವಿಗಳಾಗಿದ್ದಾರೆ. ಎಲ್ಲ ಅಲ್ಪಸಂಖ್ಯಾತರು ಪ್ರಧಾನಿ ನರೇಂದ್ರ ಮೋದಿ ಅವರ ಪರವಾಗಿದ್ದಾರೆ. ಫಲಿತಾಂಶ ಬಂದ ಬಳಿಕ ಎಲ್ಲವೂ ಗೊತ್ತಾಗಲಿದೆ. ನಾವು ಕೂಡಾ ಪ್ರಧಾನಿಯಾಗಿ ಮೋದಿ ಅವರನ್ನೇ ನೋಡಬಯಸುತ್ತಿದ್ದೇವೆಂದು ತಿಳಿಸಿದರು
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಶೀತಲಕುಮಾರ ಓಗಿ, ಮಜರ ಇನಾಮದಾರ, ಸೈಯ್ಯದ ನಿಡೋಣಿ, ಅಬ್ದುಲ ಸತ್ತಾರ ಸೇರಿದಂತೆ ಹಲವರು ಇದ್ದರು.
Subscribe to Updates
Get the latest creative news from FooBar about art, design and business.
ಪ್ರಧಾನಿ ಮೋದಿ ಕಾರ್ಯಗಳಿಂದ ಅಲ್ಪಸಂಖ್ಯಾತರಿಗೆ ತೃಪ್ತಿ :ಡಾ.ಥಾಮಸ್
Related Posts
Add A Comment

