ವಿಜಯಪುರ: ಮಂಗಳವಾರ ಇಲ್ಲಿನ ಕಾಂಗ್ರೆಸ್ ಕಾರ್ಯಾಲಯ ಕಳೆಗಟ್ಟಿತ್ತು. ಇದಕ್ಕೆ ಕಾರಣ, ಮಂಗಳ ಮುಖಿಯರ ನಗು ಮೊಗದ ಕಲರವ.
ಅವರೆಲ್ಲ ಕಾಂಗ್ರೆಸ್ ಪಕ್ಷದ ಲೋಕಸಭೆ ಅಭ್ಯರ್ಥಿ ಪ್ರೊ.ರಾಜು ಆಲಗೂರ ಅವರಿಗೆ ಸ್ವಯಂ ಪ್ರೇರಣೆಯಿಂದ ಬೆಂಬಲ ಸೂಚಿಸಿ, ಶುಭ ಹರಸಲು ಬಂದಿದ್ದರು.
ವಿಜಯಪುರ ಕ್ಷೇತ್ರದಲ್ಲಿ ಮಂಗಳ ಮುಖಿಯರು ಮತದಾರರಾಗಿ ಒಂದೂವರೆ ಸಾವಿರಕ್ಕಿಂತಲೂ ಹೆಚ್ಚು ಇದ್ದಾರೆ ಎಂದು ಹೇಳಲಾಗಿದೆ. ರಾಜ್ಯ ಸಂಘಟನೆಗಳ ಸಲಹೆಯಂತೆ ಮಂಗಳ ಮುಖಿಯರ ಕ್ಷೇಮಕ್ಕಾಗಿ ಇರುವ ಸಂಘಟನೆಗಳವರು ಆಲಗೂರರಿಗೆ ಬೆಂಬಲ ನೀಡಿದ್ದಾರೆ. ಅದಕ್ಕಾಗಿಯೇ ಇವರು ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದರು.
ಇವರಿಗೆ ಧನ್ಯವಾದ ಸಲ್ಲಿಸಿ ಮಾತನಾಡಿದ ರಾಜು ಆಲಗೂರ ಅವರು, ಕಾಂಗ್ರೆಸ್‌ಗೆ ಎಲ್ಲ ಕಡೆಯಿಂದ ನಿರೀಕ್ಷೆ ಮೀರಿ ಬೆಂಬಲ ವ್ಯಕ್ತವಾಗುತ್ತಿದೆ. ಇವತ್ತು ಮಂಗಳ ಮುಖಿಯರ ಶುಭ ಹರಕೆ, ಬೆಂಬಲದಿಂದ ಮತ್ತಷ್ಟು ಖುಷಿಯಾಗಿದೆ. ಇವರ ಕ್ಷೇಮಾಭಿವೃದ್ಧಿಗೆ ಬದ್ಧ ಎಂದರು.
ಮಂಗಳ ಮುಖಿಯರ ಪ್ರತಿನಿಧಿಯಾಗಿ ಪ್ರಾರ್ಥನಾ ಅಂಬಿ ಮಾತನಾಡಿ, ಸಮಾಜದ, ಉಳಿದ ಪಕ್ಷಗಳು ಸೇರಿ ಎಲ್ಲರೂ ನಮ್ಮನ್ನು ಮೊದಲಿಂದ ಕಡೆಗಣಿಸಿದ್ದಾರೆ. ಈಗ ಕಾಂಗ್ರೆಸ್ ಮೇಲೆ ವಿಶ್ವಾಸ ಇಟ್ಟಿದ್ದೇವೆ. ನಮಗೆ ವಸತಿ ಸೇರಿ ಒಂದಷ್ಟು ಅನುಕೂಲಗಳು ಆಗಬೇಕು. ನಮಗೆ ಉದ್ಯೋಗ ನೀಡಿದರೆ ಸ್ವಾಭಿಮಾನಿಗಳಾಗಿ ಬದುಕುತ್ತೇವೆ. ಸ್ವಾವಲಂಬಿ ಜೀವನ ಮಾಡುತ್ತೇವೆ. ನಮಗೆ ರಾಜ್ಯ ಸರಕಾರದ ಎರಡು ಸಾವಿರ ರೂ. ಗ್ಯಾರಂಟಿಯಲ್ಲಿ ಸಿಗಬೇಕು. ಕೆಲ ಅನುಕೂಲ ಮಾಡಿಕೊಡಬೇಕು ಎಂದರು.
ಮೂಡಿಗೆರೆ ಮಾಜಿ ಶಾಸಕ ಕುಮಾರಸ್ವಾಮಿ ಪತ್ರಿಕಾಗೋಷ್ಠಿಯಲ್ಲಿದ್ದರು.
ಮಂಗಳ ಮುಖಿಯರ ಸಂಘದ ಗುಲಾಬ ರಾಠೋಡ, ಸುನೀಲ, ಮೇಘಾ, ಮೈನುದ್ದೀನ್, ಶಬ್ಬೀರ್ ಕಾಗದ ಕೋಟಿ, ಸತೀಶ್, ಉಮಾ, ವಿಠ್ಠಲ ಸಾಳುಂಕೆ, ನಾಗಮ್ಮ, ಈರಣ್ಣ ಲಗಳಿ, ವಿಜು ಅನೇಕರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

