ಸಿಂದಗಿ: ಕಾಂಗ್ರೆಸ್ ಪಕ್ಷದಲ್ಲಿ ಬಂಜಾರ ಸಮಾಜದ ನಾಯಕರಲ್ಲಿ ಒಬ್ಬರು ಎಂಎಲ್‌ಎ, ಎಂಎಲ್‌ಸಿ ಇದ್ದರೂ ಮಂತ್ರಿಸ್ಥಾನ ನೀಡದೇ ಕಾಂಗ್ರೆಸ್ ಬಂಜಾರ ಸಮಾಜಕ್ಕೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಪ್ರಕೋಷ್ಠ ಜಿಲ್ಲಾ ಸಹ ಸಂಚಾಲಕ ಭೀಮಸಿಂಗ್ ರಾಠೋಡ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಜಾರ್ ಸಮಾಜದ ಅಭಿವೃದ್ಧಿ ನಿಗಮ ಮಂಡಳಿ ಮಾಡಿದ ಕೀರ್ತಿ ಬಿಜೆಪಿ ಪಕ್ಷಕ್ಕೆ ಸಲ್ಲುತ್ತದೆ. ವಂಚಿತ ತಾಂಡಾಗಳಿಗೆ ಕಂದಾಯ ಗ್ರಾಮ ಎಂದು ಕಾಂಗ್ರೆಸ್ ಸರಕಾರ ಮಾಡಲಿಲ್ಲ. ಆದರೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ತಾಂಡಾಗಳನ್ನು ಕಂದಾಯ ಗ್ರಾಮ ಎಂದು ಘೋಷಣೆ ಮಾಡಿತು. ಕಾಂಗ್ರೆಸ್ ಪಕ್ಷ ೫ ಮೀಸಲು ಕ್ಷೇತ್ರಗಳಲ್ಲಿ ಒಂದು ಸಹ ಬಂಜಾರ್ ಸಮಾಜಕ್ಕೆ ಟಿಕೆಟ್ ನೀಡದಿರುವುದು ಶೋಚನೀಯ. ಸದಾಶಿವ ಆಯೋಗದಲ್ಲಿ ನಮ್ಮ ಸಮಾಜಕ್ಕೆ ನೀಡಬೇಕಾದ ಮೀಸಲಾತಿಯನ್ನು ನೀಡಿದೆ.
ನಮ್ಮ ಬಂಜಾರ್ ಸಮಾಜದ ಮಣಿಕಂಠ ರಾಠೋಡ ಅವರಿಗೆ ಪ್ರಿಯಾಂಕ ಖರ್ಗೆ, ಮಲ್ಲಿಕಾರ್ಜುನ ಖರ್ಗೆ ಮನೆತನದವರು ೧೦೦ಕ್ಕೂ ಅಧಿಕ ಕೇಸ್‌ಗಳನ್ನು ದಾಖಲಿಸುವ ಮೂಲಕ ಹಿಂಸೆ ಮಾಡಿರುವುದನ್ನು ಸಮಾಜ ಮರೆಯದೇ ಕಲಬುರಗಿಯಲ್ಲಿಯೂ ಎಚ್ಚೆತ್ತುಕೊಂಡು ಬಿಜೆಪಿ ಪಕ್ಷದ ನಮ್ಮ ಸಮಾಜದ ಅಭ್ಯರ್ಥಿ ಜಾದವ್ ಅವರನ್ನು ಬೆಂಬಲಿಸಿ ಅವರಿಗೆ ಮತ ಚಲಾಯಿಸಿ ಗೆಲ್ಲಿಸಿ ತರಬೇಕು ಎಂದು ಮನವಿ ಮಾಡಿಕೊಂಡರು.
ಬಿಜೆಪಿ ಪಕ್ಷ ಅಧಿಕಾರದಲ್ಲಿದ್ದಾಗ ಸೇವಾಲಾಲ್ ಅವರ ಜನ್ಮಸ್ಥಳವಾದ ಸುರಕೊಂಡನಕೊಪ್ಪ ಜೀಣೋದ್ದಾರಕ್ಕೆ ಸುಮಾರು ೮೦ಕೋಟಿ ಅನುದಾನ ನೀಡಿ ಸಮುದಾಯ ಭವನ, ಸುಂದರ ಉದ್ಯಾನವನ ಸೇರಿದಂತೆ ಅನೇಕ ಕಾರ್ಯಗಳನ್ನು ಮಾಡಿದ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ. ಸುಖಾ ಸುಮ್ಮನೇ ಕಾಂಗ್ರೆಸ್ ಪಕ್ಷ ನಮ್ಮ ಸಮಾಜದ ಬಗ್ಗೆ ತಪ್ಪು ಸಂದೇಶವನ್ನು ರವಾನಿಸುತ್ತಿರುವುದು ಸರಿಯಲ್ಲ. ಜಿಗಜಿಣಗಿ ಅವರು ಮತ ಬೇಡವೆಂದು ಹೇಳಿಲ್ಲಿ. ಆ ಹೇಳಿಕೆಯನ್ನು ತಿರುಚಲಾಗಿದೆ. ಹಾಗಾಗಿ ಸಮಾಜ ಬಾಂಧವರು ಜಿಗಜಿಣಗಿ ಅವರಿಗೆ ಬೆಂಬಲಿಸಬೇಕು ಎಂದರು.
ಈ ವೇಳೆ ಡಾ.ಅನಿಲ ನಾಯಕ್ ಮಾತನಾಡಿದರು.
ಈ ವೇಳೆ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಾಜು ರಾಠೋಡ, ಪುಂಡಲೀಕ್ ರಾಠೋಡ ಸೇರಿದಂತೆ ಅನೇಕರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

