ವಿಜಯಪುರ: ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಬಣದ ವತಿಯಿಂದ ಹುಬ್ಬಳ್ಳಿ ಖಾಸಗಿ ಕಾಲೇಜಿನ ವಿದ್ಯಾರ್ಥಿನಿ ನೇಹಾ ಹಿರೇಮಠ ಭೀಕರ ಕೊಲೆಗೈದ ತಪ್ಪಿಸ್ಥರಿಗೆ ಗಲ್ಲು ಶಿಕ್ಷೆ ನೀಡುವ ಕುರಿತು ಜಿಲ್ಲಾಡಳಿತ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಬಣದ ಉತ್ತರ ಕರ್ನಾಟಕದ ಅಧ್ಯಕ್ಷ ಲಕ್ಷ್ಮಣ್ ಕಂಬಾಗಿ ಮಾತನಾಡಿ, ಮಹಿಳೆಯರ ಮೇಲೆ ದೌರ್ಜನ್ಯ ಶೋಷಣೆ ಕೊಲೆಗಳು ದಿನೇ ದಿನೇ ಹೆಚ್ಚಾಗುತ್ತಿದ್ದು ಮಹಿಳೆಯರಿಗೆ ಮತ್ತು ವಿದ್ಯಾರ್ಥಿನಿಯರಿಗೆ ಸೂಕ್ತ ರಕ್ಷಣೆ ಇಲ್ಲದಿರುವುದರಿಂದಲೇ ಇಂಥ ಘಟನೆಗಳು ನಡೆಯುತ್ತಿವೆ. ಈಗಾಗಲೇ ನೇಹಾಳ ಕೊಲೆಗಾರನನ್ನು ಬಂಧಿಸಿದರೂ ಶೀಘ್ರ ತನಿಖೆ ನಡೆಸಿ ಗಲ್ಲು ಶಿಕ್ಷೆ ಆಗಬೇಕೆಂದು ಆಗ್ರಹಿಸಿದರು
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಜಗದೇವ್ ಸೂರ್ಯವಂಶಿ, ಗಿರೀಶ ಕಲಘಟಗಿ, ಸಂಕೇತ್ ಪಟ್ಟಣದ, ಸಿದ್ದರಾಮ ಹಲ್ಲೂರ್, ಶೋಭಾ ಪಾಟೀಲ, ಚಂದ್ರಶೇಖರ್ ಕಡಕೋಳ, ಪ್ರಭು ಮಂಕಣಿ, ಮಲ್ಲಯ್ಯ ಹಿರೇಮಠ, ಶಿವಕುಮಾರ ಕುಂಬಾರ್, ಬಸಲಿಂಗಪ್ಪ ಕಪಾಲಿ, ವೆಂಕಟೇಶ್ ಮರತಿಮನಿ, ಖಾಜಾಬೀನ್ ನದಾಫ, ಸಾಹೇಬಗೌಡ ಬಿರಾದಾರ, ಶಫೀಕ್ ಗಂಗನಹಳ್ಳಿ, ಮಹಾಂತೇಶ್ ತಳವಾರ, ಮಂಜೂರ್ ನಾಗರಬಾಡಿ, ಸರ್ಫ್ರಾಜ್ ಗಂಗನಹಳ್ಳಿ ಮತ್ತು ಇತರರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
ನೇಹಾ ಹತ್ಯೆ ಆರೋಪಿಗೆ ಗಲ್ಲುಶಿಕ್ಷೆ ನೀಡಲು ಆಗ್ರಹಿಸಿ ಕರವೇ ಮನವಿ
Related Posts
Add A Comment

