ವಿಜಯಪುರ: ವಿಶ್ವನಾಯಕ, ಪ್ರಧಾನಿ ನರೇಂದ್ರ ಮೋದಿ ಅವರ ಕನಸಾಗಿರುವ ವಿಕಸಿತ ಭಾರತ ನಿರ್ಮಾಣಕ್ಕಾಗಿ ಜಿಲ್ಲೆಯ ಮತದಾರರು ಈ ಸಲವೂ ಬಿಜೆಪಿಯ ಕೈ ಹಿಡಿಯಬೇಕು ಎಂದು ವಿಜಯಪುರ ಮಹಾನಗರ ಪಾಲಿಕೆ ಸದಸ್ಯ ಶಿವರುದ್ರ ಬಾಗಲಕೋಟ ಮನವಿ ಮಾಡಿದರು.
ಲೋಕಸಭಾ ಚುನಾವಣೆ ಪ್ರಯುಕ್ತ ವಿಜಯಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಸಂಸದ ರಮೇಶ ಜಿಗಜಿಣಗಿ ಅವರ ಪರವಾಗಿ ಮಹಾನಗರ ಪಾಲಿಕೆಯ ವಾರ್ಡ್ ನಂಬರ್ 32 ರಲ್ಲಿ ಬರುವ ಗೋಂಧಳಿ ಗಲ್ಲಿ, ಉಪ್ಪಾರ ಗಲ್ಲಿ , ಅಡವಿಸ್ವಾಮಿ ಮಠ , ಶಾಪೇಟಿ ಗಲ್ಲಿ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ಮನೆ ಮನೆಗೆ ತೆರಳಿ ಮತಯಾಚನೆ ಮಾಡಲಾಯಿತು.
ಈ ವೇಳೆ ಪಾಲಿಕೆ ಸದಸ್ಯ ಶಿವರುದ್ರ ಬಾಗಲಕೋಟ ಮಾತನಾಡಿ, ನರೇಂದ್ರ ಮೋದಿ ಅವರ ಸಾಧನೆಗಳು ಮೂರನೇ ಅವಧಿಗೆ ಮತ್ತಷ್ಟು ವೇಗ ಪಡೆದುಕೊಳ್ಳಲಿದೆ. ಮೂರನೇ ಅವಧಿಯಲ್ಲಿ ದೇಶದ ಆರ್ಥಿಕತ ಶಕ್ತಿ ಹೆಚ್ಚಾಗಲಿದೆ. ಭ್ರಷ್ಟಾಚಾರ ರಹಿತ ಆಡಳಿತ, ನಿಸ್ವಾರ್ಥ ಸೇವೆ ನರೇಂದ್ರ ಮೋದಿಯವರ ಉದ್ದೇಶವಾಗಿದೆ. ಕಳೆದ 10 ವರ್ಷಗಳ ಆಡಳಿತದಲ್ಲಿ ಒಂದೇ ಒಂದು ಭ್ರಷ್ಟಾಚಾರ ನಡೆದಿಲ್ಲ ಎಂದರು.
ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ನಗರದಲ್ಲಿ ರಸ್ತೆಗಳು, ಕುಡಿಯುವ ನೀರು ಸೇರಿದಂತೆ ಎಲ್ಲಾ ಅವಶ್ಯಕ ಮೂಲಸೌಕರ್ಯ ಅಭಿವೃದ್ಧಿಗೊಳಿಸಿ ವಿಜಯಪುರ ನಗರದಲ್ಲಿ ಮಹತ್ತರ ಬದಲಾವಣೆ ತಂದಿದ್ದಾರೆ. ಸಂಸದ ರಮೇಶ ಜಿಗಜಿಣಗಿ ಅವರು ಜಿಲ್ಲೆಯಲ್ಲಿ ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣಗಳ ಅಭಿವೃದ್ಧಿ, ಎನ್ಟಿಪಿಸಿ ಸೇರಿದಂತೆ ಅನೇಕ ಕೇಂದ್ರ ಪುರಸ್ಕೃತ ಯೋಜನೆಗಳನ್ನು ಯಶಸ್ವಿ ಅನುಷ್ಠಾನಗೊಳಿಸಿದ್ದಾರೆ. ಹೀಗಾಗಿ ವಿಜಯಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ರಮೇಶ ಜಿಗಜಿಣಗಿ ಅವರನ್ನು ಮತ್ತೊಮ್ಮೆ ಬೆಂಬಲಿಸುವಂತೆ ಶಿವರುದ್ರ ಬಾಗಲಕೋಟ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಹಿಳಾ ಘಟಕದ ಮಲ್ಲಮ್ಮ ಜೋಗೂರ್ ಮುಖಂಡರಾದ ಅಮರ ಗರುಡಕರ, ಸಂದೀಪ್ ಕಾಳೆ, ಶ್ರೀನಿವಾಸ್ ಶಹಾಪುರ, ಆನಂದ ಸಲ್ಫೇಕರ, ಲಕ್ಷ್ಮಣ್ ಗಣೂರ, ಪ್ರವೀಣ ಹೇರಲಗಿ, ಹುಚ್ಚಪ್ಪ ಕವಿಶೆಟ್ಟಿ, ಸುರೇಶ್ ಗರುಡಕರ, ಸುವರ್ಣ ಕುರ್ಲೆ, ಗೀತಾ ಗಿಡವೀರ, ಪ್ರಕಾಶ ಹಿರಂಡಗಿ, ಗುರು ಶ್ಯಾಪೇಟಿ, ಸತೀಶ್ ಅಗಸರ, ಬಸವರಾಜ ಹಿರೇಮಠ, ವಿನಾಯಕ ಹೇರಲಗಿ, ಶಿವಾನಂದ ಗಿಡವೀರ, ಆದಿತ್ಯ ತಾವರಗೆರೆ, ಕಿರಣ್ ಸೊನ್ನದ , ಮಂಜುನಾಥ್ ಶ್ಯಾಪೇಟಿ, ವಿನೋದ್ ತೆಲಸಂಗ, ಹರೀಶ್ ಹಿರಂಡಗಿ, ಅರುಣ ಬೋವಿ, ಭೀಮು ಮಾಶಾಳ, ಗುರು ದೇಶಪಾಂಡೆ, ನಾನಾ ಕಾಸರ್, ಯಲ್ಲಪ್ಪ ಗೋರ್ಪಡೆ, ಅಮಿತ್ ಕುರ್ಲೆ, ಸುರೇಶ್ ಅಳಗುಂಡಗಿ, ಪಾಲಂಕಪ್ಪ ಕುರ್ಲೆ, ಶರಣು ಗಿಡುವೀರ ಮುಂತಾದವರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
ವಿಕಸಿತ ಭಾರತಕ್ಕಾಗಿ ಬಿಜೆಪಿ ಬೆಂಬಲಿಸಿ :ಶಿವರುದ್ರ ಬಾಗಲಕೋಟ
Related Posts
Add A Comment

