ಇಂಡಿ: ಸಾಲೋಟಗಿಯ ಶ್ರೀ ಶಿವಯೋಗೀಶ್ವರರ ಜಾತ್ರೆ ಕುರಿತು ರವಿವಾರ ರಾತ್ರಿ ನೀರಾಟ ನಡೆಯಿತು.
ಹಿನ್ನೆಲೆ: ಶ್ರೀ ಶಿವಯೋಗೀಶ್ವರರ ಮಾತಾ ಪಿತ್ರಗಳ ಅಭಿಪ್ಸೆಯ ಮೇರೆಗೆ ಶಿವಯೋಗೀಶ್ವರರ ಮದುವೆಯು ಗಂಗಾಂಬಿಕೆಯೊಂದಿಗೆ ನಡೆಯುವ ಸಂದರ್ಭದಲ್ಲಿ ಮದುವೆ ಜೋಡಿಯನ್ನು ಸುರಿಗೆ ಸುತ್ತಿ ಮಧು ವರರ ಮೇಲೆ ಸುರಿಗೆ ನೀರನ್ನು ಹಾಕುವಾಗ ಅಜನ್ಮ ಬ್ರಹ್ಮಚಾರಿಗಳಾದ ಶಿವಯೋಗೀಶ್ವರರು ಮದುವೆಯನ್ನು ನಿರಾಕರಿಸಿ ಮದುವೆ ಮಂಟಪದಿಂದ ಹೊರ ಹೋಗುತ್ತಾರೆ. ದಾಂಪತ್ಯದ ಸಂಬಂಧ ಬಿಟ್ಟು ಶಿವಯೋಗೀಶ್ವರ ಹೋಗಬೇಡೆಂದು ಕಳಸಿಗಳಲ್ಲಿ ತುಂಬಿದ ಸುರಿಗೆ ನೀರನ್ನು ಎರಚುತ್ತಾರೆ. ಶಿವಯೋಗಿಶ್ವರರು ಅಲ್ಲಿಂದ ದೂರ ಹೋಗಲಾಗಿ ಸುರುಗೆ ನೀರು ಗಂಗಾAಬಿಕೆಯ ಮೇಲೆಮಾತ್ರ ಬಿಳುತ್ತದೆ.ಈ ಸನ್ನಿವೇಶವೇನೀರಾಟದ ರೂಪದಲ್ಲಿಧಾರ್ಮಿಕ ಆಧ್ಯಾತ್ಮಿಕಮತ್ತು ಸಾಂಸ್ಕೃತಿಕ ಸಂಕೇತವಾಗಿದೆ.
ರವಿವಾರ ಒಳಗಿನ ಗುಡಿಯಿಂದಶಿವಯೋಗೀಶ್ವರರ ಉತ್ಸವಮೂರ್ತಿಯನ್ನುಭವ್ಯ ಮೆರವಣೆಗೆಯಲ್ಲಿ ಹೊರಗಿನ ಗುಡಿಗೆ ಒಯ್ದು ಗದ್ದುಗೆಯಲ್ಲಿಕೂಡಿಸಿದ ನಂತರ ಸರಿಯಾಗಿ ರಾತ್ರಿ ಒಂದು ಗಂಟೆಗೆನೀರಾಟ ಪ್ರಾರಂಭವಾಯಿತು. ಗಂಗಾಂಬಿಕೆಯನ್ನು ಸಂಕೇತಿಸುವ ಗಂಗಮ್ಮನ ಬಿಂದಿಗೆಯ ಬಾಯಿಯನ್ನು ಶ್ರೀಗಂಧದ ನೀಳವಾದೆಲೆಯುಕ್ತ ಚಬಕಿಗಳಿಂದೊಂದು ಹನಿ ನೀರೂ ಒಳಗಿಳಿಯದಂತೆ ಭದ್ರ ಪಡಿಸುತ್ತಾರೆ. ಹೊರಗಿನ ಗುಡಿಯ ಮುಂದೆ ಮತ್ತು ಹಿಂದೆ ಇರುವ ಎರಡು ಬಾವಿಗಳಿಂದ ಭಕ್ತರು ಬಿಂದಿಗೆಗಳಲ್ಲಿ ನೀರು ಹೊತ್ತು ಓಡುತ್ತ ಶಿವಯೋಗೀಶ್ವರ ಎಂದು ಕೂಗುತ್ತ ಬಿಂದಿಗೆಯ ಮೇಲೆ ನೀರು ಸುರಿಸುತ್ತಾರೆ. ನಸುಕಿನ ಐದು ಗಂಟೆಗೆ ನೀರಾಟ ಮುಕ್ತಾಯವಾಯಿತು. ಗಂಗಮ್ಮನ ಬಿಂದಿಗೆಯನ್ನು ಶಿವಯೋಗೀಶ್ವರರೆಡಕ್ಕೆ ತಂದು ಇಟ್ಟರು. ಶ್ರೀಗಂಧದಚಟುಕಗಳ ಮೂಲಕ ಬಿಂದಿಗೆಯಲ್ಲಿ ಸಂಗ್ರಹವಾದ ನೀರಿನ ಪ್ರಮಾಣದಷ್ಟು ಆ ವರ್ಷ ಮಳೆಯಾಗುತ್ತದೆ ಮತ್ತು ಊರಲ್ಲಿ ಸಮೃದ್ಧಿ ತುಂಬುತ್ತದೆ ಎಂಬ ಘನವಾದ ನಂಬಿಕೆ.
ನೀರಾಟದ ಸಮಯದಲ್ಲಿ ಸಂಸ್ಥೆಯ ಅಧ್ಯಕ್ಷ ಸೋಮಯ್ಯ ಚಿಕ್ಕಪಟ, ಗಣ್ಯರಾದ ಮಲ್ಲಿಕಾರ್ಜುನ ಕಿವಡೆ, ಭೀಮನಗೌಡ ಪಾಟೀಲ, ಮಲ್ಲನಗೌಡ ಪಾಟೀಲ,ಹಿರಯ್ಯ ಚಿಕ್ಕಯ್ಯ, ಸಾಹಿತಿ ಗೀತಯೋಗಿ, ದಯಾನಂದ ಸ್ವಾಮಿ, ಸೋಮನಾಥ ಶಿವೂರ, ಭೀಮರಾಯ ಪಾತರ, ಹಿರಿತನ ಮಾಡುವವರು ಭಕ್ತಾದಿಗಳು ಮತ್ತಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

