ಬಸವನಬಾಗೇವಾಡಿ: ಇಂದಿನ ಕಾಲದಲ್ಲಿ ಪುರಾಣ ಮತ್ತು ಪ್ರವಚನಗಳಿಂದ ನಾವು ಧರ್ಮ, ಸಂಸ್ಕ್ರತಿ, ಮಹಾತ್ಮರ ಮತ್ತು ಶರಣರ ತತ್ವ-ಸಿದ್ಧಾಂತಗಳನ್ನು ಅರಿತುಕೊಳ್ಳಲು ಸಾಧ್ಯವಾಗುತ್ತದೆ. ಇಂತಹ ಕಾರ್ಯಕ್ರಮಗಳಲ್ಲಿ ಜನರು ಭಾಗವಹಿಸಿ ಜೀವನದಲ್ಲಿ ಶಾಂತಿ, ನೆಮ್ಮದಿ ಪಡೆಯಬೇಕೆಂದು ವಡವಡಗಿ ನಂದಿಮಠದ ವೀರಸಿದ್ದ ಸ್ವಾಮೀಜಿ ಹೇಳಿದರು.
ತಾಲೂಕಿನ ವಡವಡಗಿ ಗ್ರಾಮದ ನಂದಿಮಠದ ಗುರುವೀರಸಿದ್ಧ ಶಿವಯೋಗಿಗಳ ೭೪ ನೇ ಜಾತ್ರಾಮಹೋತ್ಸವ ಹಾಗೂ ಲಿಂ.ಮಲ್ಲಿಕಾರ್ಜುನ ಸ್ವಾಮೀಜಿಯವರ ದ್ವಿತೀಯ ಪುಣ್ಯಾರಾಧನೆಯಂಗವಾಗಿ ಹಮ್ಮಿಕೊಂಡಿದ್ದ ಜಗದ್ಗುರು ಸಾವಳಗಿ ಶಿವಲಿಂಗೇಶ್ವರ ಪುರಾಣ ಮಂಗಲೋತ್ಸವದಂಗವಾಗಿ ಭಾನುವಾರ ಸಂಜೆ ಹಮ್ಮಿಕೊಂಡಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಾತ್ರೆ ಸೇರಿದಂತೆ ವಿವಿಧ ಸಂದರ್ಭದಲ್ಲಿ ಹಮ್ಮಿಕೊಳ್ಳುವ ಪುರಾಣ-ಪ್ರವಚನ ಕಾರ್ಯಕ್ರಮದಲ್ಲಿ ಜನರು ಭಾಗವಹಿಸಿ ಪ್ರವಚನಕಾರರು ಹೇಳುವ ಆಧ್ಯಾತ್ಮಿಕ ಸಂದೇಶಗಳನ್ನು ತಿಳಿದುಕೊಂಡು ಸಮಾಜದಲ್ಲಿ ಉತ್ತಮರಾಗಿ ಬಾಳಬೇಕು. ಯುವಜನಾಂಗ ಯಾವುದೇ ದುಶ್ಚಟಗಳಿಗೇ ದಾಸರಾಗದೇ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುವ ಕಡೆಗೆ ಗಮನ ಹರಿಸಬೇಕು. ಇಂದು ಬಸವಾದಿ ಶರಣರ ಆದರ್ಶಮಯ ಜೀವನ ನಮಗೆ ಮಾದರಿಯಾಗಿದೆ. ಇಂತಹ ಶರಣರ ಜೀವನವನ್ನು ನಾವೆಲ್ಲರೂ ಅನುಸರಿಸಬೇಕಿದೆ. ಶ್ರೀಮಠದ ಲಿಂ.ಮಲ್ಲಿಕಾರ್ಜುನ ಸ್ವಾಮೀಜಿಯವರು ಭಕ್ತರೊಂದಿಗೆ ಇದ್ದ ಬಾಂಧವ್ಯ ಕುರಿತು ಸ್ಮರಿಸಿಕೊಂಡರು.
ಸಮ್ಮುಖ ವಹಿಸಿದ್ದ ಕೊಲ್ಹಾರ ದಿಗಂಬರೇಶ್ವರ ಮಠದ ಕಲ್ಲಿನಾಥ ದೇವರು ಮಾತನಾಡಿ, ನಂದಿ ಮಠದ ಪರಂಪರೆ ವಿಶಿಷ್ಠವಾಗಿದೆ. ಇದು ಅಪಾರ ಶಿಷ್ಯ ಬಳಗ ಹೊಂದಿದೆ. ಶ್ರೀಮಠದ ಲಿಂ.ಮಲ್ಲಿಕಾರ್ಜುನ ಸ್ವಾಮೀಜಿಗಳು ಮಠವನ್ನು ಸದ್ಭಕ್ತರ ನೆರವಿನೊಂದಿಗೆ ಅಭಿವೃದ್ಧಿ ಮಾಡಿದರು. ಪ್ರಸ್ತುತ ಶ್ರೀಗಳು ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿ ಜಾತ್ರೆಯಂಗವಾಗಿ ಸಾಮಾಜಿಕ, ಧಾರ್ಮಿಕ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿರುವುದು ಮಾದರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪುರಾಣ ಪ್ರವಚನಕಾರ ಗಂಗಾಧರಯ್ಯ ಹಿರೇಮಠ, ಚಡಚಣಶ್ರೀಗಳು, ಕೋರವಾರ ಶ್ರೀಗಳು, ಮುಖಂಡರಾದ ಬಸವರಾಜ ಡೆಂಗಿ,ಸಂಗಣ್ಣ ಗಂಗಶೆಟ್ಟಿ, ಸಂಗಣ್ಣ ಸಜ್ಜನ, ಸಂಗಮೇಶ ಹಳೆಮನಿ, ಮಂಜುನಾಥ ಬಶೆಟ್ಟಿ ಇತರರು ಇದ್ದರು. ವೈ.ಎಸ್.ಗಂಗಶೆಟ್ಟಿ ಸ್ವಾಗತಿಸಿದರು. ಎ.ಎಸ್.ಕಂಬಿ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ಹಾಸ್ಯ ಕಲಾವಿದ ಸಿದ್ದು ನಾಲತವಾಡ ಅವರಿಗೆ ಶ್ರೀಮಠದಿಂದ ನಂದಿ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮಡಿವಾಳಪ್ಪ ಹೂಗಾರ ಹಾಗೂ ಸಿದ್ದನಗೌಡ ತಾಳಿಕೋಟಿ ಅವರಿಂದ ಶ್ರೀಗಳಿಗೆ ತುಲಾಭಾರ ಸೇವೆ ನಡೆಯಿತು.
ಶ್ರೀಮಠದ ಜಾತ್ರಾಮಹೋತ್ಸವಕ್ಕೆ ಸಹಾಯ-ಸಹಕಾರ ನೀಡಿದ ಬಸಲಿಂಗಯ್ಯ ಗಂವ್ಹಾರಮಠ, ರಮೇಶ ವರದಪ್ಪನವರ, ವಿರೇಶ ಇಟ್ಟಂಗಿಹಾಳ, ಕಲ್ಲಪ್ಪ ಅಂಗಡಿ, ರೇಣುಕಾ ಸಜ್ಜನ, ರಮೇಶ ಕಟಗೂರ, ಪ್ರಭು ಕೋಳೂರ, ಮೋದಾನಸಾಬ ಬಾಗವಾನ, ಸೋಮು ಸಜ್ಜನ, ಬಸವರಾಜ ನಾಟೀಕಾರ, ಚೆನ್ನಪ್ಪ ಪಟ್ಟಣಶೆಟ್ಟಿ ಇತರರನ್ನು ಸನ್ಮಾನಿಸಲಾಯಿತು.
Subscribe to Updates
Get the latest creative news from FooBar about art, design and business.
ಪುರಾಣ-ಪ್ರವಚನಗಳು ಧರ್ಮ-ಸಂಸ್ಕ್ರತಿ ಅರಿತುಕೊಳ್ಳಲು ಪೂರಕ :ವೀರಸಿದ್ಧ ಶ್ರೀ
Related Posts
Add A Comment

