ಬ್ರಹ್ಮದೇವನಮಡು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಲ್ಲಿ ಮತದಾನದ ಜಾಗೃತಿ ಮೂಡಿಸಲು ತಾಲೂಕು ಆಡಳಿತ, ತಾಲೂಕು ಸ್ಟೀಪ್ ಸಮಿತಿ ಹಾಗೂ ಹೊನ್ನಳ್ಳಿ ಗ್ರಾಪಂ ಆಶ್ರಯದಲ್ಲಿ ಮತದಾನ ಜಾಗೃತಿ ಕಾಯ೯ಕ್ರಮವನ್ನು ಭಾನುವಾರ ಏಪ೯ಡಿಸಲಾಗಿತ್ತು.
ಈ ವೇಳೆ ಗ್ರಾಪಂ ಪಿಡಿಒ ಎಸ್.ಸಿ.ನಾಯ್ಕೋಡಿ ಮಾತನಾಡಿ, ಪ್ರಜಾಪ್ರಭುತ್ವದ ಯಶಸ್ಸು ನಮ್ಮ ದೇಶದ ಸಾವ೯ತ್ರಿಕ ಚುನಾವಣೆಗಳನ್ನು ಅವಲಂಬಿಸಿದೆ. ದೇಶದ ಪ್ರತಿ ಪ್ರಜೆಯೂ ಆಮಿಷಗಳಿಗೆ ಬಲಿಯಾಗದೆ ತನಗೆ ಸಂವಿಧಾನ ಬದ್ದ ಪ್ರಾಪ್ತವಾಗಿರುವ ಮತಧಿಕಾರವನ್ನು ಯೋಗ್ಶ ಅಭ್ಶಥಿ೯ಗಳ ಆಯ್ಕೆಗೆ ಚಲಾಯಿಸಬೇಕು. ಹೀಗಾಗಿ ಮೆ.೭ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಸ್ವಯಂ ಸ್ಪೂತಿ೯ಯಿಂದ ಮತಗಟ್ಟೆಗೆ ತೆರಳಿ ಮತ ಚಲಾಯಿಸಬೇಕು ಎಂದು ಮನವಿ ಮಾಡಿದರು.
ಮುಖ್ಶ ಶಿಕ್ಷಕ ಎನ್.ಆರ್.ಬಡಿಗೇರ, ಶಿಕ್ಷಕ ಎಸ್.ಐ.ಯಳಸಂಗಿ, ಶ್ರೀಮತಿ ಜಿನತ್ ಕೌಸರ್, ಚಾಂದಬಾಷಾ ದಗಾ೯, ಬಸವರಾಜ ಸಜ್ಜನ, ಖಾಸಿಂಮಸಾಬ್ ರಾಜೇಕೋಳ, ಜೆಟ್ಟೆಪ್ಪ ದೊಡ್ಡಮನಿ ಸೇರಿದಂತೆ ಗ್ರಾಪಂ ಸಿಬ್ಬಂದಿ, ಆಶಾ ಕಾಯ೯ಕತ೯ರು,ಅಂಗನವಾಡಿ ಕಾಯ೯ಕತ೯ರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

