ಆಲಮಟ್ಟಿ: ಡಾ.ಅಂಬೇಡ್ಕರ ಅವರು ಹಲವು ಇಲ್ಲಗಳ ಕಾಲಘಟ್ಟದಲ್ಲಿ, ಅನೇಕ ಸಾಮಾಜಿಕ ಬಹಿಷ್ಕಾರದಂತಹ ಪರಿಸ್ಥಿತಿಗಳಲ್ಲಿ ಡಾ ಅಂಬೇಡ್ಕರ ಬೆಳೆಯಲು ಶಿಕ್ಷಣವೇ ಮುಖ್ಯ ಕಾರಣ. ಈಗ ಶಿಕ್ಷಣ ಪಡೆಯಲು ಸಾಕಷ್ಟು ಅವಕಾಶಗಳಿವೆ, ಹೀಗಾಗಿ ದಲಿತರು ಶಿಕ್ಷಣವಂತರಾಗಿ, ಸಮಗ್ರ ಅಭಿವೃದ್ಧಿಯಾಗಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಹಾಗೂ ಅಂಬೇಡ್ಕರ ಸೈನ್ಯದ ರಾಜ್ಯ ಸಂಘಟನಾ ಸಂಚಾಲಕ ಹಾಗೂ ವಿಜಯಪುರ ಜಿಲ್ಲಾ ಘಟಕದ ಸಂಚಾಲಕ ಮರೆಪ್ಪ ಹೆಬ್ಬಾಳ ಅಭಿಪ್ರಾಯಪಟ್ಟರು.
ಇಲ್ಲಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಭಾನುವಾರ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಹಾಗೂ ಅಂಬೇಡ್ಕರ ಸೈನ್ಯದ ವತಿಯಿಂದ ಡಾ ಅಂಬೇಡ್ಕರ ಅವರ ೧೩೩ ನೇ ಜಯಂತಿ ಅಂಗವಾಗಿ ನಡೆದ, ಪ್ರಜಾಪ್ರಭುತ್ವ ರಕ್ಷಣೆಗಾಗಿ ತಾಲ್ಲೂಕು ಮಟ್ಟದ ಜನಜಾಗೃತಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಉಮೇಶ ಅಲಕಪುರ ಮಾತನಾಡಿ, ದಲಿತರು ಮೂಡನಂಬಿಕೆಗೆ ಹಾಗೂ ಆಮಿಷಕ್ಕೆ ಒಳಪಟ್ಟು ದೇವರುಗಳ ಹೆಸರಲ್ಲಿ ಕುರಿ, ಕೋಳಿ, ಕೋಣ ಬಲಿ ಕೊಡುವುದು, ದೇವದಾಸಿಯಂತಹ ಅನಿಷ್ಠ ಪದ್ಧತಿಯನ್ನು ತೊಡೆದು ಹಾಕಿ ದಲಿತರು ಮುಂದೆಬರಬೇಕು ಎಂದರು.
ತತ್ವಶಾಸ್ತ್ರದ ನಿವೃತ್ತ ಪ್ರಾಧ್ಯಾಪಕ ಡಾ ವೀರೇಶ್ವರ ಕುಂಬಾರ ಮಾತನಾಡಿ, ಡಾ ಅಂಬೇಡ್ಕರ್, ಶೋಷಿತ, ದಮನಿತರ, ಕಾರ್ಮಿಕರ, ಮಹಿಳೆ, ರೈತರ ಹಿತವನ್ನು ಕಾಪಾಡುವ ಕೆಲಸ ಮಾಡಿದ್ದಾರೆ, ಅವರ ಅಪಾರ ಶ್ರಮ, ಸಂವಿಧಾನ ರಚನೆಯಲ್ಲಿನ ಬದ್ಧತೆಯಿಂದಾಗಿ ಇಂದು ನಾವು ಚೆನ್ನಾಗಿದ್ದೇವೆ ಎಂದರು.
ಸಂಘಟನೆಯ ರಾಜ್ಯ ಘಟಕದ ಕಾರ್ಯಾಧ್ಯಕ್ಷ ನ್ಯಾಯವಾದಿ ಪ್ರಕಾಶ ದೊಡಮನಿ, ರಾಜ್ಯ ಸಂಘಟನಾ ಸಂಚಾಲಕ ಮಲ್ಲು ಬಿಜ್ಜೂರ, ಜ್ಯೋತಿ ಹಣಮಂತ ಹೆಬ್ಬಾಳ ಮಾತನಾಡಿ, ದಲಿತರು ಪ್ರಜ್ಞಾವಂತ ಮನೋಭಾವದವರಾಗಿರಬೇಕು ಎಂದರು.
ಬಾಗಲಕೋಟೆ ಜಿಲ್ಲಾ ಘಟಕದ ಸಂಚಾಲಕ ಹಣಮಂತ ಹಿರೇಮಳಗಾವಿ, ನಿಡಗುಂದಿ ತಾಲ್ಲೂಕು ಘಟಕದ ಸಂಚಾಲಕ ಹಣಮಂತ ಮುದ್ದಾಪುರ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸುನಿತಾ ಹೆಬ್ಬಾಳ, ರಸೂಲಬಿ ನದಾಫ್, ಮಲ್ಲಪ್ಪ ಹೆಬ್ಬಾಳ, ಯಲ್ಲವ್ವ ಮಾದರ, ಹಣಮವ್ವ ಗಂಟಿ ಸೇರಿದಂತೆ ಹಲವರು ಇದ್ದರು.
Subscribe to Updates
Get the latest creative news from FooBar about art, design and business.
ದಲಿತರು ಶಿಕ್ಷಣವಂತರಾಗಿ, ಸಮಗ್ರ ಅಭಿವೃದ್ಧಿಯಾಗಬೇಕು :ಹೆಬ್ಬಾಳ.
Related Posts
Add A Comment

