ಆಲಮಟ್ಟಿ: ಕೃಷ್ಣಾ ನದಿಯಲ್ಲಿ ಸ್ನಾನಕ್ಕಿಳಿದಿದ್ದ ಬಾಲಕನೋರ್ವ ಕೃಷ್ಣೆಯ ಪಾಲಾದ ಘಟನೆ ಸೋಮವಾರ ತಾಲ್ಲೂಕಿನ ಯಲಗೂರ ಗ್ರಾಮದ ಜಾಕವೆಲ್ ಬಳಿ ಜರುಗಿದೆ.
ಮೃತ ಯುವಕ ಬಸವನಬಾಗೇವಾಡಿ ತಾಲ್ಲೂಕಿನ ಹಂಗರಗಿ ಗ್ರಾಮದ ವೆಂಕಟೇಶ ಶರಣಪ್ಪ ಚಲವಾದಿ(೧೫) ಕಳೆದೆರೆಡು ದಿನಗಳಿಂದ ಆಲಮಟ್ಟಿಯ ಜಲಾಶಯದಿಂದ ಕೃಷ್ಣಾ ನದಿ ತಳಪಾತ್ರಕ್ಕೆ ನೀರು ಬಿಡಲಾಗುತ್ತಿದೆ. ಹೀಗಾಗಿ ಯಲಗೂರ ಜಾಕವೆಲ್ ಬಳಿ ನೀರಿನ ಹರಿವು ಇತ್ತು. ನೀರಿನ ಆಳ ಅಗಲದ ಮಾಹಿತಿ ಗೊತ್ತಿಲ್ಲದ್ದ ಬಾಲಕ ನದಿಯಲ್ಲಿ ಮುಳುಗಿದ ಎನ್ನಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ನಿಡಗುಂದಿ ಪೊಲೀಸರು, ಜಲಾಶಯದಿಂದ ನೀರು ಬಿಡುವುದನ್ನು ಕೆಲ ಕಾಲ ಬಂದ್ ಮಾಡಿಸಲಾಯಿತು. ಸ್ಥಳೀಯ ಮೀನುಗಾರರ ಜೊತೆಗೂಡಿ ಅಗ್ನಿಶಾಮಕ ದಳದ ತಂಡದವರು ಸೇರಿ ಶವ ಹುಡುಕಾಟದಲ್ಲಿ ತೊಡಗಿದ್ದರು. ಸಂಜೆಯವರೆಗೂ ಶವ ಪತ್ತೆಯಾಗಲಿಲ್ಲ.
ಶುಕ್ರವಾರ ಮೃತನ ಚಿಕ್ಕಪ್ಪ ಅವರ ಮದುವೆಯಾಗಿದ್ದು, ಅದರ ಬಾಸಿಂಗ್ ಬಿಡಲು ನದಿಗೆ ಬಂದಾಗ ಈ ದುರ್ಘಟನೆ ಜರುಗಿದೆ.
ನದಿ ತೀರದಲ್ಲಿ ಸಂಬಂಧಿಗಳ ರೋಧನ ಮುಗಿಲುಮುಟ್ಟಿತ್ತು. ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Subscribe to Updates
Get the latest creative news from FooBar about art, design and business.
Related Posts
Add A Comment
