ವಿಜಯಪುರ: ಪ್ರತಿಷ್ಠಿತ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಲಾಭರಹಿತ ಸಂಸ್ಥೆಯಾದ ಫೌಂಡೇಶನ್ ಫಾರ್ ಇನೋವೇಶನ್ ಗೆ ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ವಾಣಿಜ್ಯೋದ್ಮಮ ಮಂಡಳಿ ಇನಕ್ಲೂಸಿವ್ ಟೆಕ್ನಾಲಜಿ ಬ್ಯೂಸಿನೆಸ್ ಇನಕ್ಯೂಬೇಟರ್ ಸ್ಥಾಪನೆಗೆ ರೂ. 3.92 ಕೋಟಿ ಅನುದಾನ ನೀಡಿದೆ.
ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದ ಪ್ರಾಚಾರ್ಯ ಡಾ. ಎಂ. ಬಿ. ಪಾಟೀಲ, ಇನಕ್ಲೂಸಿವ್ ಟಕ್ನಾಲಜಿ ಬ್ಯೂಸಿನೆಸ್ ಇನಕ್ಯೂಬೇಟರ್ ಸ್ಥಾಪನೆಗೆ ಒಟ್ಟು ರೂ. 5 ಕೋ. ಅಗತ್ಯವಿತ್ತು. ಈಗ ಕೇಂದ್ರ ಸರಕಾರ ರೂ. 3.92 ಕೋ. ಹಣ ಬಿಡುಗಡೆ ಮಾಡಲಿದ್ದು, ಉಳಿದ ರೂ. 1.08 ಕೋ. ಹಣವನ್ನು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಭರಿಸಲಿದೆ. ವೈದ್ಯಕೀಯ ಕಾಲೇಜು ಕೇಂದ್ರದಿಂದ ಈ ಯೋಜನೆಯಡಿ ಅನುದಾನ ಪಡೆಯುತ್ತಿರುವುದು ಅತೀ ವಿರಳವಾಗಿದ್ದು, ಬಿ.ಎಲ್.ಡಿ.ಇ ವೈದ್ಯಕೀಯ ಕಾಲೇಜಿಗೆ ಇದು ಹೆಮ್ಮೆಯ ವಿಷಯವಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಕೇಂದ್ರ ಸ್ಥಾಪನೆಯಿಂದ ಸ್ಟಾರ್ಟಅಪ್ ಪ್ರಾರಂಭಿಸುವ ಕನಸು ಕಾಣುವ ಉದಯೋನ್ಮುಖ ಯುವ ಉದ್ದಿಮೆದಾರರಿಗೆ ಸ್ಚಾರ್ಟಅಪ್ ನೋಂದಣಿ, ಸಂಶೋಧನೆ, ಉತ್ಪಾದನೆ ಹಾಗೂ ಮಾರುಕಟ್ಟೆ ವ್ಯವಸ್ಥೆಯ ಬಗ್ಗೆ ಸಂಪೂರ್ಣ ಮಾರ್ಗದರ್ಶನ, ತಾಂತ್ರಿಕ ಸಹಾಯ ಸಿಗಲಿದೆ. ಬಿ.ಎಲ್.ಡಿ.ಇ ಫೌಂಡೇಶನ್ ಫಾರ್ ಇನೊವೇಶನ್ ಈ ಕುರಿತು ಬಹಳ ಹಿಂದೆಯೇ ಪ್ರಸ್ತಾವನೆ ಕಳುಹಿಸಿತ್ತು. ಈಗ ಈ ಪ್ರಸ್ತಾವನೆಗೆ ಅನುಮತಿ ದೊರೆತಿದೆ.
ವೈದ್ಯಕೀಯ, ಕೃಷಿ, ಮಾಹಿತಿ ಮತ್ತು ತಂತ್ರಜ್ಞಾನ, ಆಹಾರ ಸಂಸ್ಕರಣೆ ಸೇರಿದಂತೆ ಇತರ ಕ್ಷೇತ್ರಗಳಲ್ಲಿ ಸ್ಟಾರ್ಟಪ್ ಪ್ರಾರಂಭಿಸಲು ಮತ್ತು ಸಂಶೋಧನೆ ನಡೆಸಲು ಆಸಕ್ತಿ ಹೊಂದಿರುವವರು ಈ ಕೇಂದ್ರವನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ. ಅಲ್ಲದೇ, ಈ ಸಂಸ್ಥೆಯ ಸ್ಥಾಪನೆಯಿಂದ ಯುವಕರು, ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಹಾಗೂ ಯುವ ಉದ್ಯಮಿಗಳಲ್ಲಿ ಸ್ಟಾರ್ಟಅಪ್ ಅಭಿರುಚಿಯನ್ನು ಉತ್ತೇಜಿಸಲು ಮತ್ತು ಅವರಲ್ಲಿ ನಾವೀನ್ಯತೆ ಮತ್ತು ಉದ್ಯಮಶೀಲತೆಯ ಸಂಸ್ಕೃತಿಯನ್ನು ಬೆಳೆಸಿ ಪ್ರೋತ್ಸಾಹಿಸಲು ಅನುಕೂಲವಾಗಲಿದೆ.
ಈ ಅನುದಾನ ಪಡೆಯುವಲ್ಲಿ ನಿಕಟಪೂರ್ವ ಪ್ರಾಚಾರ್ಯ ಡಾ. ಅರವಿಂದ ಪಾಟೀಲ, ಡಾ. ಅನಿಲಕುಮಾರ ರೆಡ್ಡಿ, ಡಾ. ಆರ್. ಚಂದ್ರಮೌಳಿರೆಡ್ಡಿ ಮತ್ತು ಡಾ. ಗವೀಶ ಹಾದಿಮನಿ, ಡಾ. ದೀಪಕಕುಮಾರ ಚವ್ಹಾಣ ಅವರು ಕೇಂದ್ರ ಸರಕಾರದ ಸಂಬಂಧಿಸಿದ ಇಲಾಖೆಯೊಂದಿಗೆ ನಿಕಟ ಸಂಪರ್ಕ ಹೊಂದಿ ಪೂರಕ ದಾಖಲೆಗಳನ್ನು ಒದಗಿಸಿದ್ದರು. ಈಗ ಎಲ್ಲರ ಪ್ರಯತ್ನಕ್ಕೆ ಯಶಸ್ಸು ಸಿಕ್ಕಿದು, ಕೇಂದ್ರ ಸರಕಾರ 3.92 ಕೋಟಿ ಅನುದಾನ ನೀಡುವ ಮೂಲಕ ಈ ಭಾಗದಲ್ಲಿ ಸಂಶೋಧೆನೆಗೆ ಹೆಚ್ಚಿನ ಉತ್ತೇಜನ ನೀಡದಂತಾಗಿದೆ.
ಇನಕ್ಲೂಸಿವ್ ಟೆಕ್ನಾಲಜಿ ಬ್ಯೂಸಿನೆಸ್ ಇನಕ್ಯೂಬೇಟರ್ ಸ್ಥಾಪನೆಗೆ ಕೇಂದ್ರದಿಂದ ರೂ. 3.92 ಕೋಟಿ ಅನುದಾನ ಪಡೆಯಲು ಶ್ರಮಿಸಿದ ಎಲ್ಲರಿಗೂ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ. ಎಂ. ಬಿ. ಪಾಟೀಲ ಅಭಿನಂದನೆ ಸಲ್ಲಿಸಿದ್ದಾರೆ. ಅಲ್ಲದೇ, ವಿವಿಯ ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ, ಕುಲಪತಿ ಡಾ. ಆರ್. ಎಸ್. ಮುಧೋಳ ಸಂತಸ ವ್ಯಕ್ತಪಡಿಸಿದ್ದಾರೆ ಎಂದು ಕಾಲೇಜಿನ ಪ್ರಾಚಾರ್ಯ ಡಾ. ಎಂ. ಬಿ. ಪಾಟೀಲ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
