ವಿಜಯಪುರ: ಇಂಡಿ ಕ್ಷೇತ್ರದ ಅಥರ್ಗಾದಲ್ಲಿ ಭಾನುವಾರ ರಾತ್ರಿ ನಡೆದ ಪ್ರಚಾರ ಸಭೆ ಕಾಂಗ್ರೆಸ್‌ಗೆ ಮತ್ತಷ್ಟು ಆತ್ಮವಿಶ್ವಾಸ ತುಂಬಿತು. ಜತೆಗೆ ಬಿಜೆಪಿ ಅಭ್ಯರ್ಥಿಯ ಈ ಊರಲ್ಲೇ ಸರಾಗವಾಗಿ ಸಾಗಿರುವ ಕಾಂಗ್ರೆಸ್‌ನ ಪ್ರಚಾರ ರಥದ ವೇಗ ಇನ್ನೂ ಹೆಚ್ಚಿತು.
ಸಭೆಯಲ್ಲಿ ಮಾತನಾಡಿದ ಶಾಸಕ ಯಶವಂತರಾಯಗೌಡ ಪಾಟೀಲ, ನೀವು ನಿಮ್ಮೂರವರಿಗೆ ಬಹಳ ಅವಕಾಶ, ಅಧಿಕಾರ ನೀಡಿದ್ದೀರಿ. ಆದರೆ ನಿಮಗೆ ಅವರು ವಾಪಸು ಏನು ಕೊಟ್ಟರು? ಸುಮಾರು ಐವತ್ತು ವರ್ಷಗಳಿಂದ ಅಧಿಕಾರ ಅನುಭವಿಸಿದರೂ ನಿಮ್ಮ ಏಳ್ಗೆಗಾಗಿ, ಕ್ಷೇತ್ರದ ಅಭಿವೃದ್ಧಿಗಾಗಿ ಜಿಗಜಿಣಗಿ ಅವರು ಶ್ರಮಿಸಲಿಲ್ಲ. ನಾವು ತಾಲೂಕಿನ ಕೆರೆಗಳನ್ನು ತುಂಬಿಸಿದ್ದೇವೆ, ನಿಂಬೆ ಅಭಿವೃದ್ಧಿ ನಿಗಮ ಮಾಡಿದ್ದೇವೆ. ರಸ್ತೆ, ಇಂಡಿ ಪಟ್ಟಣಕ್ಕೆ ನಿರಂತರ ನೀರು ಕೊಟ್ಟಿದ್ದೇವೆ. ಮುಂದೂ ಅನೇಕ ಕೆಲಸಗಳು, ಶಾಶ್ವತ ನೀರಾವರಿ ಯೋಜನೆ ಆಗಲಿದೆ ಎಂದು ಹೇಳಿದರು.
ಪ್ರಾಧ್ಯಾಪಕರಾಗಿ ನಿಮ್ಮೂರಲ್ಲೇ ಸೇವೆ ಮಾಡಿರುವ ಆಲಗೂರರು ವಿದ್ಯಾವಂತ, ಪ್ರಬುದ್ಧರಾಗಿದ್ದಾರೆ. ಅವರಿಗೆ ಅವಕಾಶ ಸಿಕ್ಕರೆ ಸಂಸತ್‌ನಲ್ಲಿ ನಿಮ್ಮ ದನಿಯಾಗಲಿದ್ದಾರೆ. ಅವರೊಬ್ಬ ಉತ್ತಮ ಸಂಸದೀಯ ಪಟುವಾಗಲಿದ್ದಾರೆ. ರಾಜ್ಯ ಹಾಗೂ ಕೇಂದ್ರದಲ್ಲೂ ನಮ್ಮದೇ ಸರಕಾರವಿದ್ದರೆ ಸಮಗ್ರ ಬದಲಾವಣೆ ಸಾಧ್ಯ ಎಂದು ಹೇಳಿದರು.
ಅಭ್ಯರ್ಥಿ ರಾಜು ಆಲಗೂರರು ಮಾತನಾಡಿ, ‘ನಿಮ್ಮ ಅಭಿಮಾನ, ಪ್ರೀತಿ ಕಂಡು ಮೂಕನಾಗಿರುವೆ. ನನಗೆ ಮತ ನೀಡಿದರೆ ಇಷ್ಟು ವರ್ಷಗಳ ಕಾಲ ನೀವು ಅಭಿವೃದ್ಧಿಯಿಂದ ವಂಚಿತರಾಗಿದ್ದನ್ನು ಮರೆಮಾಚಿ, ಈ ವಿಜಯಪುರ ಲೋಕಸಭೆ ಕ್ಷೇತ್ರದ ಸರ್ವತೋಮುಖ ಬೆಳವಣಿಗೆಗೆ ಹಗಲು-ರಾತ್ರಿ ಶ್ರಮಿಸುವೆ. ನಿಮ್ಮ ಸೇವಕನಾಗಿ ದುಡಿಯುವೆ’ ಎಂದು ಹೇಳಿದರು.
ಮುಖಂಡರಾದ ಜಟ್ಟೆಪ್ಪ ರವಳಿ, ಗುರಣ್ಣಗೌಡ ಪಾಟೀಲ, ಎಂ.ಆರ್. ಪಾಟೀಲ, ಎಸ್.ಅರ್.ಸಿಂದಗಿ, ಎಂ.ಆರ್.ಪತಂಗಿ, ರೇವಣಸಿದ್ಧ ಅಂಕಲಗಿ, ಇಲಿಯಾಸ್ ಬೋರಾಮಣಿ, ಜಾವೇದ್ ಮೋಮಿನ್ ಸೇರಿದಂತೆ ಅನೇಕರಿದ್ದರು.
ಇದೇ ಸಂದರ್ಭದಲ್ಲಿ ಜೆಡಿಎಸ್ ಪಕ್ಷ ತೊರೆದು ಅನೇಕರು ಕಾಂಗ್ರೆಸ್ ಪಕ್ಷವನ್ನು ಸೇರಿದರು.
Subscribe to Updates
Get the latest creative news from FooBar about art, design and business.
ಬಿಜೆಪಿ ಅಭ್ಯರ್ಥಿ ಊರಲ್ಲೇ ಪ್ರಚಾರದ ವೇಗ ಹೆಚ್ಚಿಸಿಕೊಂಡ ಆಲಗೂರ
Related Posts
Add A Comment

