ಸಿಂದಗಿಯಲ್ಲಿ ಬಿಜೆಪಿ ರೋಡ್ ಶೋ & ಬಹಿರಂಗ ಸಭೆಯಲ್ಲಿ ಶಾಸಕ ಬಸನಗೌಡ ಯತ್ನಾಳ ಸವಾಲು
ಸಿಂದಗಿ: ಮೋದಿಯವರ ಮೇಲೆ ಒಂದೇ ಒಂದು ಭ್ರಷ್ಟಾಚಾರದ ಆರೋಪ ಕಾಂಗ್ರೆಸ್ ಮಾಡಿ ತೋರಿಸಲಿ, ನಾನು ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದು ಕಾಂಗ್ರೆಸ್ಸಿಗರ ಮೇಲೆ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸವಾಲು ಎಸೆದರು.
ಪಟ್ಟಣದ ಸ್ವಾಮಿ ವಿವೇಕಾನಂದ ವೃತ್ತದಲ್ಲಿ ವಿಜಯಪುರ ಲೋಕಸಭಾ ಚುನಾವಣೆ ಪ್ರಚಾರದ ಪ್ರಯುಕ್ತವಾಗಿ ಹಮ್ಮಿಕೊಂಡ ರೋಡ್ ಶೋ ಹಾಗೂ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್‌ನವರು ಹೇಳುತ್ತಾರೆ ಬಿಜೆಪಿ ಚೆಂಬು ಕೊಟ್ಟಿದ್ದಾರೆ ಎಂದು ಆದರೆ ೧೦ವರ್ಷದಲ್ಲಿ ಭಾರತಕ್ಕೆ ಮೋದಿಯವರು ಅಕ್ಷಯ ಪಾತ್ರೆಯನ್ನು ನೀಡಿದ್ದಾರೆ. ಕರೋನಾ ಲಸಿಕೆ ನಮ್ಮವರಿಗಲ್ಲದೇ ಹೋರಗಿನವರಿಗೂ ಮಾನವೀಯತೆಯ ದೃಷ್ಠಿಯಿಂದ ಕೊಟ್ಟಿದ್ದೇವೆ. ಜನಧನ ಯೋಜನೆಯಿಂದ ರೈತರ ಖಾತೆಗೆ ಹಣ ನೇರವಾಗಿ ಜಮಾವಾಗುತ್ತದೆ. ಆದರೆ ರಾಜೀವ ಗಾಂಧಿ ಪ್ರಧಾನಮಂತ್ರಿ ಇದ್ದಾಗ ದೆಹಲಿಯಿಂದ ೧೦೦ ಹೊರಟರೆ ನಮಗೆ ಬಂದು ತಲುಪಬೇಕಾದರೆ ೧೦ರೂ. ಬಂದು ತಲುಪುತಿತ್ತು. ಮೋದಿಯವರು ಬಂದ ಕಾರಣ ಡಿಜಿಟಲ್ ಇಂಡಿಯಾ ಸಹಕಾರಿಯಾಗಿದೆ. ಯಾರ ಮುಖ ನೋಡಿ ಮತ ಹಾಕಬೇಡಿ ನಮ್ಮ ಮನೆ, ನಮ್ಮ ದೇಶ, ಸನಾತನ ಹಿಂದೂ ಧರ್ಮ ಉಳಿಸಲು ಬಿಜೆಪಿಗೆ ಮತ ಚಲಾಯಿಸಿ ಎಂದರು.
ಬಿಜೆಪಿಯವರು ಸಂವಿಧಾನ ಬದಲಾವಣೆ ಮಾಡುತ್ತಾರೆ ಎಂದು ಹೇಳುವ ಕಾಂಗ್ರೆಸ್‌ನವರು ಡಾ.ಬಿ.ಆರ್.ಅಂಬೇಡ್ಕರ್ ಅವರ ಅಂತ್ಯಕಿಯೆಗೆ ದಿಲ್ಲಿಯಲ್ಲಿ ಒಂದು ಎಕರೆ ಜಮೀನು ನೀಡಲಿಲ್ಲ. ಆದರೆ ನೆಹರೂಗೆ ೭೦ಎಕರೆ, ಇಂದೀರಾ ಗಾಂದಿಗೆ ೩೯ಎಕರೆ, ರಾಜೀವ ಗಾಂದಿಗೆ ೨೩ಎಕರೆ, ಸಂಜಯ ಗಾಂದಿ ೧೮ಎಕರೆ ಅಂತ್ಯೆಕ್ರಿಯೆಗೆ ನೀಡಿದ್ದಾರೆ. ಅಂಬೇಡ್ಕರ್ ಅವರ ಹೆಸರಿನಲ್ಲಿ ಮೋದಿಯವರು ಪಂಚತೀರ್ಥ ಎಂದು ಮಾಡಿದ್ದಾರೆ. ಬಿಜೆಪಿ ಸರಕಾರ ಸಂವಿಧಾನ ಬದಲಾವಣೆ ಮಾಡುವುದಿಲ್ಲ ಎಂದರು.
ದೇಶದಲ್ಲಿ ಮುಸ್ಲಿಂರ ಮೀಸಲಾತಿ ತೆಗೆದುಹಾಕಿ ಎಸ್.ಸಿ/ಎಸ್.ಟಿ ಹಿಂದುಳಿದವರಿಗೆ ನೀಡುತ್ತೇವೆ. ೧೦ಲಕ್ಷ ರೂ.ಮೌಲ್ಯದ ಬಟ್ಟೆ ಹಾಕಿಕೊಳ್ಳುತ್ತಾರೆ ಮೋದಿ ಎಂದು ಹೇಳುತ್ತಾರೆ. ಅಮೇರಿಕಾ, ಜರ್ಮನ, ಜಪಾನಗೆ ತೆರಳಿದಾಗ ರಾಹುಲ್ ಗಾಂದಿ ಹಾಗೆ ಹರಿದ ಅಂಗಿ ಹಾಕಿಕೊಳ್ಳಬೇಕೆ ಎಂದು ವ್ಯಂಗ್ಯವಾಡಿದರು.
ಈ ವೇಳೆ ಅಭ್ಯರ್ಥಿ ರಮೇಶ ಜಿಗಜಿಣಗಿ ಮಾತನಾಡಿ, ದೇಶದ ಉದ್ದಕ್ಕಲಕ್ಕೂ ಮೋದಿಯವರು ಮಾಡಿರುವ ಅಬಿವೃದ್ಧಿ ಮತ್ತು ವಿಜಯಪುರಕ್ಕೂ ಮಾಡಿರುವ ಅಭಿವೃದ್ಧಿ ಕಾರ್ಯ ನೋಡಿದ್ದೀರಿ. ಈ ದೇಶ ಉಳಿಯಬೇಕಾದರೆ ಮೋದಿ ಅನಿವಾರ್ಯ. ಮತ್ತೊಮ್ಮೆ ಮೋದಿ ಅವರನ್ನು ಪ್ರದಾನಿಯನ್ನಾಗಿ ಮಾಡಲು ನನಗೆ ಮತ ನೀಡಿ ಎಂದರು.
ಇದೇ ಸಂದರ್ಭದಲ್ಲಿ ಮಾಜಿ ಶಾಸಕ ರಮೇಶ ಭೂಸನೂರ, ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ಮಾಜಿ ವಿಪ ಸದಸ್ಯ ಅರುಣ ಶಹಾಪುರ, ಮಂಡಲ ತಾಲೂಕಾಧ್ಯಕ್ಷ ಸಂತೋಷ ಪಾಟೀಲ ಡಂಬಳ, ಜೆಡಿಎಸ್ ತಾಲೂಕಾಧ್ಯಕ್ಷ ಎಮ್.ಎನ್.ಪಾಟೀಲ, ಶಿಲ್ಪಾ ಕುದರಗೊಂಡ, ಈರಣ್ಣ ರಾವೂರ, ರವಿಕಾಂತ ನಾಯ್ಕೋಡಿ, ಸಾಯಬಣ್ಣ ದೇವರಮನಿ, ಸಿದ್ದು ತಮದೊಡ್ಡಿ, ಪ್ರಶಾಂತ ಕದ್ದರಕಿ, ನಿತ್ಯಾನಂದ ಕಟ್ಟಿಮನಿ, ಎಸ್.ಆರ್.ಪಾಟೀಲ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಪದಾಧಿಕಾರಿಗಳು ಇದ್ದರು.

