ವಿಜಯಪುರ: ಸಂಸದ ರಮೇಶ ಜಿಗಜಿಣಗಿ ಎಂದಿಗೂ ಲಂಬಾಣಿ ಸಮಾಜವನ್ನು ಅವಹೇಳನ ಮಾಡಿಲ್ಲ, ಎಲ್ಲರನ್ನೂ ಪ್ರೀತಿ ವಿಶ್ವಾಸದಿಂದ ಕಾಣುತ್ತಾ ನೋಡ್ತಾ ಬಂದವರು. ಲಂಬಾಣಿ ಸಮಾಜದ ವಿರುದ್ಧ ಹೇಳಿಕೆ ನೀಡಿಲ್ಲ, ಕೆಲ ಕಾಂಗ್ರೆಸ್ ಕಿಡಿಗೇಡಿಗಳು ಅಪಪ್ರಚಾರ ಮಾಡಿದ್ದು ಅದರ ಬಗ್ಗೆ ಲಂಬಾಣಿ ಸಮಾಜದ ಮುಖಂಡರು ತಪ್ಪು ಭಾವಿಸಬೇಡಿ ಎಂದು ಬಿಜೆಪಿ ಮುಖಂಡ ಮಹೇಂದ್ರ ನಾಯಕ ಹೇಳಿದರು.
ಲೋಕಸಭಾ ಚುನಾವಣೆ ನಿಮಿತ್ಯ ರೇವತಗಾವ ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದ ಏನ್ ಡಿ ಎ ಅಭ್ಯರ್ಥಿಯ ರಮೇಶ ಜಿಗಜಿಣಗಿ ಪರ ಬಹಿರಂಗ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಸಂಜೀವ ಐಹೊಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಗೆ ರಮೇಶ ಜಿಗಜೀವಣಗಿ ಸಾಹೇಬರು ೧ ಲಕ್ಷ ಕೋಟಿ ರೂ. ಅನುದಾನ ತಂದು ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ, ಮತ್ತೊಮ್ಮೆ ರಮೇಶ ಜಿಗಜಿಣಗಿರನ್ನು ಲೋಕಸಭೆ ಗೆ ಕಳುಹಿಸಿ ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿಯನ್ನಾಗಿಸಲು ಮನವಿ ಮಾಡಿದರು.
ಚಿದಾನಂದ ಛಲವಾದಿ ಮಾತನಾಡಿ, ಅಂಬೇಡ್ಕರ್ ತೀರಿಕೊಂಡಾಗ ಅವರ ಅಂತಿಮ ಸಂಸ್ಕಾರಕ್ಕೆ ಜಾಗ ಕೊಡಲಿಲ್ಲ. ಇಂತಹ ನೀಚ ಸರಕಾರಕ್ಕೆ ಮತ ಹಾಕಿದ್ದಲ್ಲಿ ನೀವು ಸತ್ತಂತೆ. ಯಾಕಂದ್ರೆ ಅದೊಂದು ಸುಡುವ ಮನೆ ಇದ್ದಂತೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ವೇದಿಕ ಮೇಲೆ ಎನ್ ಡಿ ಏ ಅಭ್ಯರ್ಥಿ ರಮೇಶ ಜಿಗಜಿಣಗಿ, ಕಾಂತು ಗೌಡ ಪಾಟೀಲ ಭೀಮು ಸಾಹುಕಾರ ಬಿರಾದಾರ, ಶಂಕರಗೌಡ ಪಾಟೀಲ, ಶ್ರೀಶೈಲಗೌಡ ಬಿರಾದಾರ, ಮಹಾದೇವ ಅಂಕಲಗಿ, ಸುರೇಶ ಗೌಡ ಬಿರಾದಾರ, ಚಂದು ಸಾಹುಕಾರ ಹುನ್ನೂರ ಸುಭಾಸ ಬೈರಗೊಂಡ, ನಾಗು ಭೈರಗೊಂಡ, ಪೀಂಟು ಜಾಬಗೊಂಡೆ, ಶಿವಗೊಂಡ ನಡಗೇರಿ, ಮಹಾದೇವ ಅಂಕಲಗಿ ಸೇರಿದಂತೆ ಹಲವರು ಇದ್ದರು.
ಉಮರಾಜ ಗ್ರಾಮ ಪಂಚಾಯತ ಅಧ್ಯಕ್ಷರು ಕೇವಸಾನ್(ಬುಡ್ಡೆ ಸಾಬ್) ಇಬ್ರಾಹಿಂ ಸಾವಳೇ ಗ್ರಾಪಂ ಉಪಾಧ್ಯಕ್ಷ ಶಿವಾನಂದ ದಾನಪ್ಪ ಇರಮಾನಿ, ಸದಸ್ಯ ಶಿವಯ್ಯ ಚಲಾಕಾಪುರೆ ಸೇರಿದಂತೆ ಹಲವರು ಬಿಜೆಪಿ ಪಕ್ಷ ಸೇರ್ಪಡೆಗೊಂಡರು.
Subscribe to Updates
Get the latest creative news from FooBar about art, design and business.
Related Posts
Add A Comment

