ವಿಜಯಪುರ: ಇದೇ ಏ.೮ ರಿಂದ ೧೨ ರವರೆಗೆ ಕತಕನಹಳ್ಳಿ ಶ್ರೀ ಗುರುಚಕ್ರವರ್ತಿ ಸದಾಶಿವ ಜಾತ್ರಾ ಮಹೋತ್ಸವ ನಡೆಯಲಿದ್ದು, ದೇಶ ವಿದೇಶದಲ್ಲಿರುವ ಹಾಗೂ ಜಿಲ್ಲೆಯ ಸಮಸ್ತ ಭಕ್ತಾದಿಗಳು ಬಂದು ಯಾತ್ರೆಯಲ್ಲಿ ಸೇವೆ ಸಲ್ಲಿಸಿ ಸದಾಶಿವ ಆರ್ಶೀವಾದಕ್ಕೆ ಪಾತ್ರರಾಗಬೇಕು ಎಂದು ಕತಕನಹಳ್ಳಿ ಸದಾಶಿವ ಮಠದ ಪೀಠಾಧಿಪತಿ ಶಿವಯ್ಯ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ಕತಕನಹಳ್ಳಿ ಗ್ರಾಮದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶ್ರೀ ಸದಾಶಿವನ ಭಕ್ತರು ಪ್ರತಿ ವರ್ಷ ಜಾತ್ರೆ ಮಾಡಿಕೊಂಡು ಬಂದಿದ್ದಾರೆ. ಆದರೆ ಈ ವರ್ಷ ದಿ.ಮಠದ ಪರಂಪರೆಯನ್ನು ಸಾರುವ `ಶ್ರೀ ಗುರುಚಕ್ರವರ್ತಿ ಸದಾಶಿವ ಶಿವಯೋಗಿ ಸಿದ್ಧರಾಮೇಶ್ವರ ಲೀಲಾಮೃತ’ ಗ್ರಂಥ ಲೋಕಾರ್ಪಣೆಯಾಗಲಿದೆ. ಹಾಗಾಗಿ ಇದೊಂದು ಅತ್ಯಂತ ವಿಶೇಷವಾದ ಜಾತ್ರೆಯಾಗಿ ಭಕ್ತರ ಮನದಲ್ಲಿ ಉಳಿಯಲಿದೆ ಎಂದು ಹೇಳಿದರು.
ಬಬಲಾದಿ ಪರಂಪರೆಯಲ್ಲಿ ಹಿಂದಿನ ಮಠಾದೀಶರು ಯಾರೂ ಹಸಿರು ಪಟಕಾ ಸುತ್ತಿರಲಿಲ್ಲ. ಅದನ್ನು ಸುತ್ತಿದ ಮೊದಲ ವ್ಯಕ್ತಿಯೇ ನಾನು. ಎಲ್ಲ ಬಣ್ಣದ ಪಟಕಾ ಸುತ್ತುತ್ತೇನೆ, ವಿಷಯ ಅದಲ್ಲ, ಕೇವಲ ಪಟಕಾ ಸುತ್ತಿ ಮಠಾದೀಶನಾಗುವುದಕ್ಕಿಂತ ಸತ್ಯ ಹಾಗೂ ಶುದ್ಧ ನಡೆಯಿಂದ ಮಠಾದೀಶನಾಗಬೇಕು. ಸಮಾಜಕ್ಕೆ ಎರಡು ಕೈಗಳಿಂದ ಯಾರು ಸೇವೆ ಮಾಡುತ್ತಾರೋ ಅಂಥವರಿಗೆ ಬಬಲಾದಿ ಅಪ್ಪಾವರು ಸಾವಿರ ಕೈಗಳಿಂದ ಸಿರಿ ಸಂಪತ್ತನ್ನು ನೀಡುತ್ತಾರೆ. ಹಾಗಾಗಿ ಸೇವೆಯನ್ನು ನಮ್ಮ ಜೀವನದ ಭಾಗವಾಗಿಸಿಕೊಳ್ಳಬೇಕು ಎಂದರು.
ಯಾತ್ರಾ ಅಂಗವಾಗಿ ಸಾಮೂಹಿಕ ವಿವಾಹ, ಪುರಾಣ ಪ್ರವಚನ, ಕುಸ್ತಿ, ಭಾರ ಎತ್ತುವುದು ಸೇರಿದಂತೆ ಅನೇಕ ಕಾರ್ಯಕ್ರಮಗಳು ೫ ದಿನಗಳ ಕಾಲ ವಿಜೃಂಭಣೆಯಿಂದ ಜರುಗಲಿವೆ. ಪ್ರತಿ ವರ್ಷದಂತೆ ಮಠದ ಯಾತ್ರೆಯಲ್ಲಿ ಅಖಂಡ ದಾಸೋಹ ಇರಲಿದ್ದು, ಭಕ್ತರು ತಾವೇ ಮಾಡಿ, ಇತರರಿಗೂ ಉಣಬಡಿಸಬೇಕು ಎಂದು ಹೇಳಿದರು.
ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, ದಿ.೮ ರಂದು ಬೆಳಿಗ್ಗೆ ಜಾನುವಾರು ಜಾತ್ರೆಯನ್ನು ಪೂಜ್ಯ ಶಿವಯ್ಯ ಮಹಾಸ್ವಾಮಿಗಳು ಉದ್ಘಾಟನೆ ಮಾಡಲಿದ್ದಾರೆ. ೧೦.೩೦ ಗಂಟೆಗೆ ಕೃಷಿ ಮೇಳ, ಮಧ್ಯಾಹ್ನ ೪ ಗಂಟೆಗೆ ಕೆಸರಿನಲ್ಲಿ ಮನುಷ್ಯರ ಓಟ, ಸಂಜೆ ೭ ಗಂಟೆಗೆ ಜ್ಞಾನ ದೀಪೋತ್ಸವ ನಡೆಯಲಿದೆ. ದಿ.೯ ರಂದು ಬೆಳಿಗ್ಗೆ ಕತೃ ಗದ್ದುಗೆಗೆ ರುದ್ರಾಭೀಷೇಲ ಹಾಗೂ ಸಕಲ ವಾಧ್ಯಗಳೊಂದಿಗೆ ಕುಂಭಾಭೀಷೇಕ, ೧೦.೩೦ಕ್ಕೆ ರಸಪ್ರಶ್ನೆ ಸಂಜೆ ೭ ಗಂಟೆಗೆ ಶ್ರೀ ಶ್ರೀಶೈಲ ಹಿರೇಮಠ ಅವರಿಂದ ಬಬಲಾದಿ ಮಹಾತ್ಮರ ಪುರಾಣ ಪ್ರವಚನ ಮಂಗಲ ಕಾರ್ಯಕ್ರಮ ಜರುಗಲಿದೆ ವಿಶೇಷವಾಗಿ ಗ್ರಂಥ ಮೆರವಣಿಗೆ ವೇಳೆಯಲ್ಲಿ ಹೆಲಿಕ್ಯಾಪ್ಟರ್ ಮೂಲಕ ಪುಷ್ಪಾರ್ಚನೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಮಧುವನ ಮಾಲಿಕ ಬಾಬುಗೌಡ ಬಿರಾದಾರ ಮಾತನಾಡಿದರು.
ವಿಜಯಪುರದ ಉದ್ಯಮಿ ರಾಜು ಗುಡ್ಡೊಡಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಗ್ರಂಥ ಕತೃ ವೇಧ ಮೂರ್ತಿ ಶ್ರೀಶೈಲ ಸ್ವಾಮಿಜಿ, ವಿಜಯ ಜೋಶಿ ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment
