Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ವಿಶಾಲವಾಗಿ ಹಬ್ಬಿ ಬೆಳೆಯುವ ವಟವೃಕ್ಷ

ಮಧ್ಯಸ್ಥಗಾರರ 2.0 ಅಭಿಯಾನ ಸದುಪಯೋಗಕ್ಕೆ ನ್ಯಾ. ಶಶಿಧರ ಸೂಚನೆ

ದಿ.ಅಟಲ್ ಬಿಹಾರಿ ವಾಜಪೇಯಿ ಜನ್ಮದಿನೋತ್ಸವ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಚಿಂತಿಸುವುದು ಬಿಡಿ, ಖುಷಿಯಾಗಿರುವುದು ಕಲಿಯಿರಿ :ಡೇಲ್ ಕಾರ್ನೆಗಿ
ವಿಶೇಷ ಲೇಖನ

ಚಿಂತಿಸುವುದು ಬಿಡಿ, ಖುಷಿಯಾಗಿರುವುದು ಕಲಿಯಿರಿ :ಡೇಲ್ ಕಾರ್ನೆಗಿ

By Updated:No Comments6 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

“ವೀಣಾಂತರಂಗ- ವೀಣಾ ಹೇಮಂತಗೌಡ ಪಾಟೀಲ್, ಮುಂಡರಗಿ-ಗದಗ

1948ರಲ್ಲಿ ಖ್ಯಾತ ಪಾಶ್ಚಾತ್ಯ ಸಾಹಿತಿ ಡೇಲ್ ಕಾರ್ನೆಗಿ ಬರೆದ ಪುಸ್ತಕ ಹೌ ಟು ಸ್ಟಾಪ್ ವರಿಯಿಂಗ್ ಅಂಡ್ ಸ್ಟಾರ್ಟ್ ಲಿವಿಂಗ್ ಜಗತ್ತಿನ ಸುಮಾರು 30 ಭಾಷೆಗಳಿಗೆ ತರ್ಜುಮೆಗೊಂಡಿದೆ ಮತ್ತು ಸುಮಾರು ಹದಿನೈದು ಮಿಲಿಯನ್ ಪ್ರತಿಗಳು ಮಾರಾಟವಾಗಿವೆ ಎಂದರೆ ಈ ಪುಸ್ತಕದ ಜನಪ್ರಿಯತೆ ಅದೆಷ್ಟು ಎಂಬುದನ್ನು ಊಹಿಸಬಹುದು.

ಚಿಕ್ಕಂದಿನಲ್ಲಿ ಕೇವಲ ಈ ಪುಸ್ತಕದ ಹೆಡ್ಡಿಂಗ್ ಓದಿ ಅಪ್ಪ ಕೆಲವು ವಿಷಯಗಳನ್ನು ನಮಗೆ ಚಿಕ್ಕದಾಗಿ ತಿಳಿಸಿ ಹೇಳುತ್ತಿದ್ದರು. ಹಾಗೆ ಮನದಲ್ಲಿ ಉಳಿದುಕೊಂಡ ಚಿಂತೆಯ ಮತ್ತು ಜೀವನೋತ್ಸಾಹದ ಕುರಿತಾದ ಈ ಪುಸ್ತಕ ಹಲವು ವರ್ಷಗಳ ನಂತರ ಮತ್ತೆ ಸಂಕ್ಷಿಪ್ತವಾಗಿ ಓದಿಗೆ ದಕ್ಕಿದಾಗ ಆದ ಆನಂದ ಅಷ್ಟಿಷ್ಟಲ್ಲ. ಈ ಪುಸ್ತಕದ ಕೆಲ ಮಹತ್ವದ ಅಂಶಗಳ ಭಾವಾನುವಾದವನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಆಶಯ ನನ್ನದು.

ಈ ಪುಸ್ತಕದಲ್ಲಿ ಕಾರ್ನೆಗಿ ಚಿಂತೆ ಎನ್ನುವುದು ಒಂದು ಚಟದಂತೆ ಮತ್ತು ಅದನ್ನು ತೊರೆಯುವ ಮೂಲಕ ಹೇಗೆ ಸಂತೋಷ ಮತ್ತು ತೃಪ್ತಿಕರ ಜೀವನವನ್ನು ನಮ್ಮದಾಗಿಸಿಕೊಳ್ಳಬಹುದು ಎಂಬುದರ ಕುರಿತು ವಿವರಿಸಿದ್ದಾನೆ. ನಾವು ವರ್ತಮಾನದಲ್ಲಿ ಜೀವಿಸಬೇಕು ಗತಿಸಿ ಹೋದ ದಿನಗಳ ನೋವಿನ ನೆರಳಾಗಲಿ ಭವಿಷ್ಯದ ಕುರಿತಾದ ಭಯವಾಗಲಿ ನಮಗೆ ಇರಬಾರದು, ವರ್ತಮಾನದಲ್ಲಿ ನಾವು ಯಾವತ್ತೂ ನಂಬಿಕೊಂಡು ಬಂದ ಮೌಲ್ಯಗಳೊಂದಿಗೆ ರಾಜಿಯಾಗದೆ ಜೀವನ ಸಾಗಿಸಬೇಕು ಎಂದು ಡೇಲ್ ಹೇಳುತ್ತಾನೆ.

ಈ ಪುಸ್ತಕದಲ್ಲಿ ಮುಖ್ಯವಾಗಿ ಚಿಂತೆಯ ಕಾರಣಗಳು ಮತ್ತು ಅವುಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಬಗೆ, ವರ್ತಮಾನದಲ್ಲಿ ಎದುರಾಗುವ ಉದ್ಯೋಗ ಸಂಬಂಧಿ ಹೀಯಾಳಿಸುವಿಕೆ ಮತ್ತು ಹಣಕಾಸಿಗೆ ಸಂಬಂಧಪಟ್ಟಂತೆ ಎದುರಾಗುವ ಸವಾಲುಗಳನ್ನು ರಚನಾತ್ಮಕ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಹೇಗೆ ನಿವಾರಿಸಿಕೊಳ್ಳಬಹುದು ಎಂಬುದನ್ನು ಆತ ಹೇಳುತ್ತಾನೆ.

ಚಿಂತೆ ಎಂಬುದು ಸಾಮಾನ್ಯವಾದ ಮತ್ತು ಆರೋಗ್ಯ ಪೂರ್ಣವಾದ ಮಾನಸಿಕ ತೊಂದರೆ, ಆದರೆ ಅತಿಯಾದ ಚಿಂತೆ ಮತ್ತು ದುಗುಡಗಳು ಮನೋದೈಹಿಕ ಸಾಮರ್ಥ್ಯವನ್ನು ಕುಂದಿಸುತ್ತದೆ. ಹೆಚ್ಚಾದ ಚಿಂತೆಯು ಉದ್ವೇಗ, ಖಿನ್ನತೆ ಮತ್ತು ನಿದ್ರಾರಾಹಿತ್ಯಕ್ಕೆ ಎಡೆ ಮಾಡಿಕೊಡುತ್ತದೆ.
ಜೊತೆಗೆ ಇದು ನಮ್ಮ ಗಮನವನ್ನು ಅನವಶ್ಯಕ ವಿಷಯಗಳೆಡೆ ತಿರುಗಿಸಿ ಕಾರ್ಯಕ್ಷಮತೆಯನ್ನು ಕುಂದಿಸುತ್ತದೆ.

ಚಿಂತೆಯನ್ನು ನಿವಾರಿಸಿಕೊಳ್ಳುವ ಹಲವಾರು ತಂತ್ರಗಾರಿಕೆಗಳು ಮನೋವಿಜ್ಞಾನದಲ್ಲಿ ಇದ್ದು ಅವು ನಮ್ಮ ಚಿಂತೆಯನ್ನು ಅವಲೋಕಿಸುವುದರ ಮೂಲಕ ಅವುಗಳ ಋಣಾತ್ಮಕ ಪರಿಣಾಮಗಳನ್ನು ತೊಡೆದು ಹಾಕಲು ಸಹಕಾರಿಯಾಗುತ್ತವೆ.

ಚಿಂತೆಗೆ ಕಾರಣವಾಗುವ ವಿಷಯಗಳನ್ನು ಗುರುತಿಸಿ
ಸಾಮಾನ್ಯವಾಗಿ ನಿಮ್ಮನ್ನು ಚಿಂತೆಗೀಡು ಮಾಡುವ ವಿಷಯಗಳನ್ನು ಗುರುತಿಸಿಕೊಳ್ಳಿ ಒಮ್ಮೆ ಆ ವಿಷಯಗಳ ಕುರಿತು ನಿಮಗೆ ಸ್ಪಷ್ಟ ಅವಗಾಹನೆ ದೊರೆತರೆ ಅವುಗಳನ್ನು ನಿರ್ವಹಿಸುವ ಕುರಿತು ಅರಿವು ಮೂಡುತ್ತದೆ.

ಚಿಂತೆಗೆ ಸವಾಲು ಹಾಕಿ
ನಿಮಗಿರುವ ಚಿಂತೆಗಳು ದುಗುಡಗಳು ನಿಜವಾಗಿಯೂ ಇವೆಯೇ?? ನಿಮ್ಮ ಚಿಂತೆಗಳು ನಿಮ್ಮ ಮನಸ್ಸಿನ ಅನಾಹುತಕಾರಿ ಯೋಚನೆಗಳ ಫಲವೇ!! ಮತ್ತು ನಿಮಗೆ ನಿಮ್ಮ ಚಿಂತೆಗಳನ್ನು ನಿರ್ವಹಿಸಲು ಸಾಧ್ಯವಿದೆ/ಇಲ್ಲವೇ ಎಂಬ ಮೂರು ವಿಷಯಗಳ ಮೇಲೆ ನಿಮ್ಮ ಗಮನವನ್ನು ಕೇಂದ್ರೀಕರಿಸಿ.ನಿಜವಾಗಿಯೂ ನಿಮ್ಮ ಚಿಂತೆಗಳನ್ನು ಸವಾಲಾಗಿ ಸ್ವೀಕರಿಸಿ. ನಿಮ್ಮ ಚಿಂತೆಗಳನ್ನು ವಾಸ್ತವದ ಹಿನ್ನೆಲೆಯಲ್ಲಿ ಅವಲೋಕಿಸಿ ಧನಾತ್ಮಕ ಪರಿಹಾರಗಳ ಕುರಿತು ಯೋಚಿಸಿ.

ನಿಮ್ಮ ನೋವು, ದುಗುಡಗಳ ಕುರಿತು ಚಿಂತಿಸಲೆಂದೇ ದಿನದ ಕೆಲ ಸಮಯವನ್ನು ಮೀಸಲಾಗಿರಿಸಿ. ಆ ಸಮಯದಲ್ಲಿ ನಿಮ್ಮನ್ನು ಬಾಧಿಸುತ್ತಿರುವ ಚಿಂತೆಯ ವಿಷಯವನ್ನು ಪುಸ್ತಕವೊಂದರಲ್ಲಿ ಬರೆದು ಪಕ್ಕಕ್ಕೆ ಇಡಿ. ಇದು ನಿಮ್ಮ ಮನಸ್ಸನ್ನು ನಿರಾಳವಾಗಿಸುತ್ತದೆ.

ನಿಮ್ಮ ದುಗುಡ, ತೊಂದರೆ, ನೋವು, ಚಿಂತೆಗಳನ್ನು ನಿಮ್ಮ ನಂಬಿಕೆಯ ಸ್ನೇಹಿತರು ಸಂಬಂಧಿಗಳು ಮತ್ತು ಆತ್ಮೀಯರೊಂದಿಗೆ ಹಂಚಿಕೊಳ್ಳಿ. ಹಂಚಿಕೊಳ್ಳುವುದರಿಂದ ಮನದಲ್ಲಿನ ಬಹುದೊಡ್ಡ ಭಾರ ಕಡಿಮೆಯಾಗುತ್ತದೆ. ನಿಮ್ಮ ಬಾಧೆಯನ್ನು ಕೇಳುವ ಕಿವಿಗಳು, ನಿಮ್ಮ ಕಣ್ಣೀರನ್ನು ತೊಡೆಯುವ ಕೈಗಳು ನಿಮ್ಮ ನೋವಿಗೆ ಹೆಗಲಾಗುವ ಭುಜಗಳು ಇವೆ ಎಂಬ ಸಮಾಧಾನ ನಿಮಗೆ ದೊರೆಯುತ್ತದೆ.

ಈ ರೀತಿ ಚಿಂತೆಗಳ ಕುರಿತು ಪರಾಮರ್ಶೆ ಮಾಡುವುದರಿಂದ ನಿಮ್ಮ ಬಹುತೇಕ ಸಮಸ್ಯೆಗಳನ್ನು ಎದುರಿಸಲು ನಿಮಗೆ ಅನುಕೂಲವಾಗುತ್ತದೆ. ನಿಮ್ಮ ಚಿಂತೆಗಳು ಕಡಿಮೆಯಾಗಿ ನಿಮ್ಮ ಮನೋ ದೈಹಿಕ ಆರೋಗ್ಯವು ಸುಧಾರಿಸುತ್ತದೆ.

ನಿರ್ಣಯಾತ್ಮಕತೆ
ಒಂದು ಕೆಲಸದ ಕುರಿತ ಹಲವಾರು ಟ್ರಯಲ್ ಎಂಡ್ ಎರರ್ ಗಳನ್ನು ಯೋಚಿಸಿ ಯಾವುದು ಸರಿ ಯಾವುದು ತಪ್ಪು ಎಂಬುದನ್ನು ಅವಲೋಕಿಸಿ ಸರಿಯಾದ ಸಮಯಕ್ಕೆ ಸೂಕ್ತವಾದ ನಿರ್ಧಾರ ತೆಗೆದುಕೊಳ್ಳುವುದನ್ನು ನಿರ್ಣಯಾತ್ಮಕತೆ ಎಂದು ಹೇಳಬಹುದು. ಈ ಸಂಕೀರ್ಣ ಪ್ರಕ್ರಿಯೆಯಲ್ಲಿ ಮೊದಲು ವಿಷಯಗಳನ್ನು ಸಂಗ್ರಹಿಸುವುದು, ನಂತರ ಅವುಗಳಲ್ಲಿರುವ ಸಾಮರ್ಥ್ಯವನ್ನು ಪರೀಕ್ಷಿಸುವುದು ಮತ್ತು ನಾವು ರೂಡಿಸಿಕೊಂಡು ಬಂದಿರುವ ನಂಬುಗೆ ಮತ್ತು ಮೌಲ್ಯಗಳೊಂದಿಗೆ ಈ ವಿಷಯಗಳು ಹೊಂದಿಕೊಳ್ಳುತ್ತವೆಯೇ ಇಲ್ಲವೇ ಎಂಬುದನ್ನು ಅರಿಯುವುದು ಮತ್ತು ನಿರ್ಣಯವನ್ನು ಕೈಗೊಳ್ಳುವುದು. ಆದರೆ ಇಲ್ಲಿ ಮುಖ್ಯವಾಗಿ ನೆನಪಿಡಬೇಕಾದದ್ದು ಒಂದು ಬಾರಿ ಕೈಗೊಂಡ ನಿರ್ಣಯಕ್ಕೆ ಸದಾ ಬದ್ಧರಾಗಿದ್ದು,ಆ ನಿರ್ಣಯವನ್ನು ಜಾರಿಗೆ ತರಬೇಕು ಎಂದು.

ನಿರ್ಣಯಗಳಲ್ಲಿ ಕೆಲವು ವೈಶಿಷ್ಟ್ಯಪೂರ್ಣವಾದರೆ ಮತ್ತೆ ಕೆಲವು ನಿರ್ಣಯಗಳು ಅತ್ಯಂತ ಸರಳ ಮತ್ತು ನೇರವಾಗಿ ಇರುತ್ತವೆ. ಉದಾಹರಣೆಗೆ ಇಂದು ರಾತ್ರಿ ಏನನ್ನು ಊಟ ಮಾಡಬೇಕು ಎಂಬುದು ಅತ್ಯಂತ ಸರಳವಾದ ನಿರ್ಣಯ.
ಮತ್ತೆ ಕೆಲವು ನಿರ್ಣಯಗಳು ಅತ್ಯಂತ ಕ್ಲಿಷ್ಟವಾಗಿದ್ದು ಬದುಕಿನ ಗತಿಯನ್ನೇ ಬದಲಿಸುವಂಥವು, ಉದಾಹರಣೆಗೆ ಪ್ರೌಢ ಶಿಕ್ಷಣದ ನಂತರ ಯಾವ ಕೋರ್ಸ್ ತೆಗೆದುಕೊಳ್ಳಬೇಕು, ಏನನ್ನು ಓದಬೇಕು ಯಾವ ಊರಿನಲ್ಲಿ ಓದಬೇಕು ಉದ್ಯೋಗವನ್ನು ಎಲ್ಲಿ ಮಾಡಬೇಕು ಈ ರೀತಿಯ ನಿರ್ಣಯಗಳು ಜಟಿಲವಾಗಿರುತ್ತವೆ.

ಉತ್ತಮವಾದ ನಿರ್ಣಯವನ್ನು ಕೈಗೊಳ್ಳಲು ಕೆಲವು ಮುಖ್ಯ ಸಂಗತಿಗಳನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು.

  • ಯಾವ ವಿಶೇಷ ನಿರ್ಣಯವನ್ನು ನೀವು ಕೈಗೊಳ್ಳುತ್ತಿದ್ದೀರಿ ಎಂಬುದನ್ನು ಅರಿಯುವುದು.
  • ಮಾಹಿತಿಯನ್ನು ಸಂಗ್ರಹಿಸುವುದು… ನಮ್ಮ ನಿರ್ಣಯಕ್ಕೆ ಪೂರಕವಾಗುವ ವಿಷಯಗಳ ಕುರಿತು ಮಾಹಿತಿಯನ್ನು ಸಂಗ್ರಹಿಸುವುದು ಮತ್ತು ಅವುಗಳ ಸಾಮರ್ಥ್ಯವನ್ನು ಅರಿಯುವುದು.
  • ನಾವು ತೆಗೆದುಕೊಂಡ ನಿರ್ಧಾರದ ಒಳಿತು ಮತ್ತು ಕೆಡುಕುಗಳನ್ನು, ಸಾಧಕ ಬಾಧಕಗಳ ಕುರಿತು ಅರಿಯುವುದು
  • ನಿರ್ಣಯ ಕೈಗೊಳ್ಳುವ ಜೊತೆಗೆ ಬದಲಿ ವ್ಯವಸ್ಥೆಗಳ ಕುರಿತು ಯೋಚಿಸುವುದು ಕೂಡ ಅತ್ಯಂತ ಅವಶ್ಯಕ.
  • ನಿಮ್ಮ ನಿರ್ಣಯಕ್ಕೆ ಬದ್ಧರಾಗಿ ಕಾರ್ಯ ನಿರ್ವಹಿಸುವುದು
    ಈ ರೀತಿ ಒಳ್ಳೆಯ ನಿರ್ಧಾರಗಳನ್ನು ತೆಗೆದುಕೊಳ್ಳುವುದರ ಮೂಲಕ ವ್ಯಕ್ತಿಯು ತಾನು ನಂಬಿಕೊಂಡು ಬಂದಿರುವ ವೈಯುಕ್ತಿಕ ಮೌಲ್ಯಗಳನ್ನು ಮತ್ತು ಆದ್ಯತೆಗಳನ್ನು ಹೊಂದಿರುವಂತೆಯೇ ನಿರ್ಣಯವನ್ನು ಕಾರ್ಯಗತಗೊಳಿಸುವುದು.

ವರ್ತಮಾನದಲ್ಲಿ ಜೀವಿಸುವುದು
ವರ್ತಮಾನದಲ್ಲಿ ಜೀವಿಸುವುದು ಎಂದರೆ ಬದುಕಿನಲ್ಲಿ ಬಂದದ್ದನ್ನು ಬಂದಂತೆಯೇ, ಅದು ಇರುವಂತೆಯೇ ಸ್ವೀಕರಿಸುವುದು. ಇದರರ್ಥ ಗತದಲ್ಲಿ ನಡೆದು ಹೋದ ವಿಷಯಗಳನ್ನು ಚಿಂತಿಸದೇ ಭವಿಷ್ಯದ ಕುರಿತು ಭಯವಿಲ್ಲದೆ ವರ್ತಮಾನದ ಮೇಲೆ ಮಾತ್ರ ನಮ್ಮ ಗಮನವನ್ನು ಕೇಂದ್ರೀಕರಿಸುವುದು.

ವರ್ತಮಾನದಲ್ಲಿ ಜೀವಿಸುವುದರಿಂದ ಹಲವಾರು ಲಾಭಗಳಿವೆ, ಅವುಗಳೆಂದರೆ

  • ಒತ್ತಡವಿಲ್ಲದ ಬದುಕು… ವರ್ತಮಾನದೆಡೆ ನಿಮ್ಮ ಚಿತ್ತವನ್ನು ನೀವು ಕೇಂದ್ರೀಕರಿಸಿದಾಗ ನಿಮಗೆ ಭೂತದ ಕುರಿತ ಪಶ್ಚಾತಾಪವಾಗಲಿ ಭವಿಷ್ಯದ ಕುರಿತ ಭಯವಾಗಲಿ ಇಲ್ಲವಾಗುವುದರಿಂದ ಒತ್ತಡಕ್ಕೆ ಆಸ್ಪದ ಇರುವುದಿಲ್ಲ.
  • ಸಂತೋಷ ಮತ್ತು ನೆಮ್ಮದಿಯ ಜೀವನ… ವರ್ತಮಾನದಲ್ಲಿ ಜೀವಿಸುವ ಜನರು ಹೆಚ್ಚು ಸಂತುಷ್ಟರು ಮತ್ತು ನೆಮ್ಮದಿಯನ್ನು ಹೊಂದಿರುತ್ತಾರೆ ಎಂಬುದನ್ನು ಅಧ್ಯಯನಗಳು ತೋರಿಸುತ್ತವೆ
  • ಉತ್ತಮ ಬಾಂಧವ್ಯ… ವರ್ತಮಾನದಲ್ಲಿ ಜೀವಿಸುವುದರಿಂದ ನೀವು ನಿಮ್ಮ ಜೊತೆಗಿರುವವರೊಂದಿಗೆ ಹೆಚ್ಚಿನ ಪ್ರೀತಿ, ವಿಶ್ವಾಸ, ಕಾಳಜಿಯುಕ್ತ ಸಂಬಂಧವನ್ನು ಹೊಂದುತ್ತೀರಿ. ಹಿಂದಿನ ಯಾವುದೇ ಕಹಿ ಘಟನೆಗಳನ್ನು ಕೆದುಕುವುದಿಲ್ಲ.
  • ಹೆಚ್ಚಿದ ಕ್ರಿಯಾಶೀಲತೆ ಮತ್ತು ಉತ್ಪಾದಕತೆ…. ಅನ್ಯ ವಿಷಯಗಳತ್ತ ಎಳಸದೆ, ಕಣ್ಣ ಮುಂದಿರುವ ಕೆಲಸದ ಮೇಲೆ ಶ್ರದ್ಧೆಯುಳ್ಳವರಾಗಿರುವುದರಿಂದ ನಿಮ್ಮ ಕ್ರಿಯಾಶೀಲತೆ ಹೆಚ್ಚುತ್ತದೆ… ಅದರ ಪರಿಣಾಮವಾಗಿ ಉತ್ಪಾದಕತೆಯು ಹೆಚ್ಚುತ್ತದೆ.
    ಆದ್ದರಿಂದ ವರ್ತಮಾನದಲ್ಲಿ ಜೀವಿಸಿ.

ವರ್ತಮಾನದಲ್ಲಿ ಜೀವಿಸಲು ಏನು ಮಾಡಬೇಕು? ಇಲ್ಲಿವೆ ಕೆಲ ಸಲಹೆಗಳು.

  • ನಿಮ್ಮ ಉಸಿರಾಟ ಕ್ರಿಯೆಯೆಡೆ ಗಮನ ಕೊಡಿ. ದೀರ್ಘವಾಗಿ ಉಸಿರನ್ನು ತೆಗೆದುಕೊಳ್ಳುವುದು ಮತ್ತು ಹೊರಬಿಡುವುದನ್ನು ಅಭ್ಯಾಸ ಮಾಡಿ. ನಿಮ್ಮ ದೇಹದ ಒಳಹೋಗುವ ಮತ್ತು ಹೊರಬರುವ ಉಸಿರಾಟದೆಡೆ ಗಮನವನ್ನು ಕೇಂದ್ರೀಕರಿಸುವ ಮೂಲಕ ದೇಹದ ಮೇಲಾಗುವ ಪರಿಣಾಮಗಳನ್ನು ಅನುಭವಿಸಿ. ಈ ರೀತಿಯ ದೀರ್ಘ ಉಸಿರಾಟದ ಕ್ರಿಯೆ ನಿಮ್ಮನ್ನು ಸದಾ ವರ್ತಮಾನದಲ್ಲಿ ಇರಿಸಲು ಸಹಾಯಕವಾಗಿರುತ್ತದೆ.
  • ನಿಮ್ಮ ಪಂಚೇಂದ್ರಿಯಗಳ ಕಾರ್ಯನಿರ್ವಹಣೆಯನ್ನು ಗಮನಿಸಿ. ನಿಮ್ಮ ಸುತ್ತಣ ಪರಿಸರದಲ್ಲಿರುವ ವಸ್ತುಗಳನ್ನು ವಿಷಯಗಳನ್ನು ನೋಡುವ ಕೇಳುವ ಸ್ಪರ್ಶಿಸುವ ಘ್ರಾಣಿಸುವ ಮತ್ತು ಆಸ್ವಾದಿಸುವುದನ್ನು ಅಭ್ಯಸಿಸಿ. ಇದೊಂದು ರೀತಿಯ ಧ್ಯಾನಸ್ಟ ಸ್ಥಿತಿ, ಅನುಭವಿಸಿಯೇ ಅರಿಯಬೇಕು.
  • ನಿಮ್ಮ ಯೋಚನೆ ಮತ್ತು ಭಾವನೆಗಳ ಮೇಲೆ
    ಲಕ್ಷ್ಯವಿರಲಿ.. ನಿಮ್ಮ ಸುತ್ತ ನಡೆಯುತ್ತಿರುವ ಕ್ರಿಯೆಗಳ ಕುರಿತ ನಿಮ್ಮ ಭಾವನೆಗಳು ಮತ್ತು ಯೋಚನೆಗಳ ಮೇಲೆ ಯಾವುದೇ ರೀತಿಯ ನಿರ್ಣಯಾತ್ಮಕವಲ್ಲದ ನಿಗಾ ಇರಲಿ. ನಿಮ್ಮ ಭಾವನೆಗಳು ಮತ್ತು ಯೋಚನೆಗಳು ಇರುವಂತೆಯೇ ಅವುಗಳನ್ನು ಒಪ್ಪಿಕೊಳ್ಳಿ ಮತ್ತು ಬದಿಗಿರಿಸಿ.
  • ಉತ್ತಮ ಸಂವಹನ ಕ್ರಿಯೆಯಲ್ಲಿ ತೊಡಗಿಕೊಳ್ಳಿ.. ನಿಮ್ಮೆದುರಿಗಿರುವವರೊಂದಿಗೆ ಮಾತನಾಡುವಾಗ ಅವರ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಿ, ಚೆನ್ನಾಗಿ ಕೇಳಿಸಿಕೊಳ್ಳಿ ಲಕ್ಷವಿಟ್ಟು ಪ್ರತಿಕ್ರಿಯಿಸಿ.
  • ಒಂದು ಬಾರಿಗೆ ಒಂದೇ ಕೆಲಸಕ್ಕೆ ಬದ್ಧರಾಗುವುದು.. ಒಂದು ಬಾರಿ ಒಂದೇ ಕೆಲಸ ಎಂಬ ಸಿದ್ಧಾಂತವನ್ನು ಪಾಲಿಸಿ. ಒಂದೇ ಸಮಯದಲ್ಲಿ ಹಲವಾರು ಕೆಲಸಗಳಿಗೆ ಕೈಹಾಕಿ ವಿಫಲತೆ ಕಾಣುವುದಕ್ಕಿಂತ ಒಂದು ಬಾರಿಗೆ ಒಂದೇ ಕೆಲಸದಲ್ಲಿ ಹೆಚ್ಚು ಶ್ರದ್ಧೆಯಿಂದ ಕಾರ್ಯನಿರ್ವಹಿಸಿ.

ವರ್ತಮಾನದಲ್ಲಿ ಜೀವಿಸುವುದು ನಿರಂತರ ಪ್ರಕ್ರಿಯೆ. ಎಷ್ಟೋ ಬಾರಿ ನಾವು ನಮ್ಮ ಭೂತ ಮತ್ತು ಭವಿಷ್ಯಗಳನ್ನು ನಡುವೆ ಮತ್ತೆ ಮತ್ತೆ ತೂಗುಯ್ಯಾಲೆ ಆಡುತ್ತೇವೆ. ಆದರೆ ನಿರಂತರ ಶ್ರದ್ಧೆ ಮತ್ತು ಪ್ರಯತ್ನದಿಂದ ಮತ್ತೆ ವರ್ತಮಾನ ಎಂಬ ನಿಲುಗಡೆಗೆ ಬಂದೇ ಬರುತ್ತೇವೆ. ಸತತ ಪ್ರಯತ್ನದಿಂದ ವರ್ತಮಾನದಲ್ಲಿ ಜೀವಿಸುವುದು ಹೆಚ್ಚು ಸರಳವಾಗುತ್ತದೆ.

ಹಾಸ್ಯಪ್ರಜ್ಞೆಯನ್ನು ಬೆಳೆಸಿಕೊಳ್ಳಿ

ಹಾಸ್ಯಪ್ರಜ್ಞೆ ಎನ್ನುವುದು ಜೀವನದ ಹಲವಾರು ತೊಂದರೆಗಳನ್ನು ಸರಳವಾಗಿ ಬಗೆಹರಿಸುವ ಉತ್ತಮ ಸಾಧನ. ಅತ್ಯುತ್ತಮವಾದ ಹಾಸ್ಯಪ್ರಜ್ಞೆಯನ್ನು ಬೆಳೆಸಿಕೊಳ್ಳುವುದರಿಂದ ಮನುಷ್ಯ ಒತ್ತಡವನ್ನು ನಿಭಾಯಿಸಬಲ್ಲವನಾಗುತ್ತಾನೆ. ಉತ್ತಮವಾಗಿ ಸಂಬಂಧಗಳನ್ನು ನಿರ್ವಹಿಸುತ್ತಾನೆ ಮತ್ತು ಜೀವನವನ್ನು ಹೆಚ್ಚು ರಸಮಯವಾಗಿಸಿಕೊಳ್ಳುತ್ತಾನೆ.

ಹಾಸ್ಯ ಪ್ರಜ್ಞೆಯನ್ನು ಬೆಳೆಸಿಕೊಳ್ಳುವ ಬಗೆ

ಹೆಚ್ಚು ಹೆಚ್ಚು ತಮಾಷೆಯನ್ನು ಒಳಗೊಂಡಿರುವ ಪುಸ್ತಕಗಳನ್ನು ಓದಿ, ನಗೆ ಚಟಾಕಿಗಳನ್ನು ಹಾರಿಸುವ ಚಲನಚಿತ್ರಗಳನ್ನು, ಜೋಕುಗಳ ವಿಡಿಯೋಗಳನ್ನು, ಟಿವಿ ಶೋ ಗಳನ್ನು,. ಕಾಮಿಡಿ ಶೋಗಳನ್ನು ಕೂಡ ನೋಡುವ ಮೂಲಕ ಹಾಸಿಗೆ ಕಣ್ಣಾಗುವ ಕಿವಿಯಾಗುವ ಸಾಧ್ಯತೆಗಳನ್ನು ಹೆಚ್ಚಿಸಿಕೊಳ್ಳಿ.

ಗಮನಹರಿಸಿ.. ದೈನಂದಿನ ಜೀವನದ ಜಂಜಾಟದಲ್ಲಿಯೂ ಕೂಡ ನಗೆಯುಕ್ಕಿಸುವ ತಮಾಷೆಯ ಪ್ರಸಂಗಗಳನ್ನು ಗಮನಿಸಿ. ಹೆಚ್ಚು ಹೆಚ್ಚು ಇಂತಹ ವಿಷಯಗಳೆಡೆ ಗಮನಹರಿಸಿದಾಗ ನೀವು ಕೂಡ ನಿಮ್ಮಲ್ಲಿನ ಹಾಸ್ಯಪ್ರಜ್ಞೆಯನ್ನು ಹೆಚ್ಚಿಸಿಕೊಳ್ಳಬಹುದು.

ನಿಮ್ಮನ್ನೇ ನೀವು ಗೇಲಿ ಮಾಡಿಕೊಳ್ಳಲು ಹೆದರಬೇಡಿ… ಎಲ್ಲರೂ ಸಣ್ಣ ಪುಟ್ಟ ತಮ್ಮ ತಪ್ಪುಗಳನ್ನು ಮಾಡುತ್ತಾರೆ. ನಿಮ್ಮನ್ನೇ ನೀವು ಗೇಲಿ ಮಾಡಿಕೊಳ್ಳುವ ಮೂಲಕ ನಿಮ್ಮನ್ನು ನೀವು ಗಂಭೀರವಾಗಿ ಪರಿಗಣಿಸದೆ ಎಲ್ಲವನ್ನು ಸರಳವಾಗಿ ಸ್ವೀಕರಿಸುವ ಸಾಧ್ಯತೆಗಳು ಹೆಚ್ಚು. ಅಹಮಿಕೆಗಿಂತ ಸರಳತೆ ಹೆಚ್ಚು ಸೂಕ್ತ.

ಹಾಸ್ಯಪ್ರಜ್ಞೆ ಇರುವ ತಮಾಷೆ ಮಾಡುವ ಸ್ವಭಾವದವರ ಒಡನಾಟದಲ್ಲಿ ಇರಿ. ಇದು ಕೂಡ ನಿಮ್ಮಲ್ಲಿ ಉತ್ತಮ ಹಾಸ್ಯ ಪ್ರಜ್ಞೆಯನ್ನು ಬೆಳೆಸುವಲ್ಲಿ ಸಹಕಾರಿಯಾಗಿರುತ್ತದೆ. ಹಾಸ್ಯ ಪ್ರಜ್ಞೆಯನ್ನು ಬೆಳೆಸಿಕೊಳ್ಳಲು ಸದಾ ಕಾರ್ಯನಿರತರಾಗಿರಿ ಮತ್ತು ತಾಳ್ಮೆಯ ಅವಶ್ಯಕತೆಯನ್ನು ಮನಗಾಣಿರಿ.

ಈ ಪುಸ್ತಕದ ಮುಖ್ಯ ಅಂಶಗಳು ಹೀಗಿವೆ.

ಭಯ ಮತ್ತು ಚಿಂತೆಯೊಂದಿಗೆ ವ್ಯವಹರಿಸುವುದು
ಭಯ ಮತ್ತು ಆತಂಕವನ್ನು ಎದುರಿಸಲು ಮತ್ತು ಜಯಿಸಲು ಪುಸ್ತಕವು ಪ್ರಾಯೋಗಿಕ ತಂತ್ರಗಳನ್ನು ಒದಗಿಸುತ್ತದೆ, ಉದಾಹರಣೆಗೆ ಕೆಟ್ಟ ಸನ್ನಿವೇಶವನ್ನು ವಿಶ್ಲೇಷಿಸುವುದು, ಅನಿವಾರ್ಯವನ್ನು ಸ್ವೀಕರಿಸುವುದು ಮತ್ತು ಸಕಾರಾತ್ಮಕ ಮಾನಸಿಕ ಮನೋಭಾವವನ್ನು ಅಭಿವೃದ್ಧಿಪಡಿಸುವುದು.

ಚಿಂತೆಯ ಅಭ್ಯಾಸವನ್ನು ಮುರಿಯುವುದು
ಸ್ಪಷ್ಟ ಗುರಿಗಳನ್ನು ಹೊಂದುವಂತೆ ಮಾಡುವುದು, ಒಬ್ಬರ ಆಲೋಚನೆಗಳನ್ನು ಸಂಘಟಿಸುವುದು ಮತ್ತು ಸಮಸ್ಯೆಗಳನ್ನು ಪರಿಹರಿಸಲು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುವುದು ಸೇರಿದಂತೆ ಚಿಂತಿಸುವ ಅಭ್ಯಾಸವನ್ನು ಮುರಿಯುವ ವಿಧಾನಗಳನ್ನು ಕಾರ್ನೆಗಿ ವಿವರಿಸುತ್ತಾರೆ. ಅವರು ಒತ್ತಡ ನಿವಾರಕವಾಗಿ ನಗು ಮತ್ತು ಹಾಸ್ಯದ ಮೌಲ್ಯವನ್ನು ಒತ್ತಿಹೇಳುತ್ತಾರೆ.

ಒತ್ತಡವನ್ನು ನಿರ್ವಹಿಸುವುದು
ದೈಹಿಕ ವ್ಯಾಯಾಮದ ಪ್ರಾಮುಖ್ಯತೆ, ಆರೋಗ್ಯಕರ ಜೀವನಶೈಲಿಯನ್ನು ಕಾಪಾಡಿಕೊಳ್ಳುವುದು ಮತ್ತು ವ್ಯಕ್ತಿಗೆ ಕೆಲಸ ಮಾಡುವ ವಿಶ್ರಾಂತಿ ತಂತ್ರಗಳನ್ನು ಕಂಡುಹಿಡಿಯುವುದು ಸೇರಿದಂತೆ ಒತ್ತಡವನ್ನು ನಿಭಾಯಿಸಲು ಲೇಖಕರು ಸಲಹೆ ನೀಡುತ್ತಾರೆ.

ಟೀಕೆ ಮತ್ತು ಕಷ್ಟಕರ ಜನರನ್ನು ನಿಭಾಯಿಸುವುದು
ಕಾರ್ನೆಗಿ ಅವರು ಟೀಕೆ ಮತ್ತು ಸವಾಲಿನ ವ್ಯಕ್ತಿತ್ವಗಳನ್ನು ಎದುರಿಸಲು ಮಾರ್ಗದರ್ಶನ ನೀಡುತ್ತಾರೆ, ಪರಸ್ಪರ ಸಂಬಂಧಗಳಲ್ಲಿ ಸಹಾನುಭೂತಿ ಮತ್ತು ತಿಳುವಳಿಕೆಯ ಶಕ್ತಿಯನ್ನು ಒತ್ತಿ ಹೇಳುತ್ತಾರೆ.

ಜೀವನದಲ್ಲಿ ಸಂತೋಷವನ್ನು ಕಂಡುಕೊಳ್ಳುವುದು
ಓದುಗರು ತಮ್ಮ ಆಸಕ್ತಿಗಳು ಮತ್ತು ಭಾವನೆಗಳನ್ನು ಅನುಸರಿಸುವ ಮೂಲಕ, ಬೆಂಬಲಿತ ಸ್ನೇಹಿತರ ಜಾಲವನ್ನು ಅಭಿವೃದ್ಧಿಪಡಿಸುವ ಮೂಲಕ ಮತ್ತು ಅವರ ಮೌಲ್ಯಗಳು ಮತ್ತು ಗುರಿಗಳೊಂದಿಗೆ ಹೊಂದಿಕೊಳ್ಳುವ ರೀತಿಯಲ್ಲಿ ಬದುಕುವ ಮೂಲಕ ತಮ್ಮ ದೈನಂದಿನ ಜೀವನದಲ್ಲಿ ಸಂತೋಷ ಮತ್ತು ತೃಪ್ತಿಯನ್ನು ಕಂಡುಕೊಳ್ಳಲು ಪುಸ್ತಕವು ಪ್ರೋತ್ಸಾಹಿಸುತ್ತದೆ.

  • ಅಂತಿಮವಾಗಿ 1948ರಲ್ಲಿ ಡೇಲ್ ಕಾರ್ನೆಗಿ ಬರೆದಿರುವ ಈ ಪುಸ್ತಕ ಇಂದಿಗೂ ತನ್ನ ಪ್ರಸ್ತುತತೆಯನ್ನು ಕಾಯ್ದುಕೊಂಡಿದೆ. ಇಡೀ ಪುಸ್ತಕದ ಮುಖ್ಯ ಅಂಶಗಳನ್ನು ಆಧರಿಸಿ ಬರೆದ ಈ ಲೇಖನದ ಭಾವಾನುವಾದ ನಿಮಗೆ ಮೆಚ್ಚುಗೆಯಾದರೆ ನನ್ನ ಈ ಶ್ರಮ ಸಾರ್ಥಕ ಎಂದು ಭಾವಿಸುತ್ತೇನೆ.

– ವೀಣಾ ಹೇಮಂತಗೌಡ ಪಾಟೀಲ್, ಮುಂಡರಗಿ-ಗದಗ

BIJAPUR NEWS public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ವಿಶಾಲವಾಗಿ ಹಬ್ಬಿ ಬೆಳೆಯುವ ವಟವೃಕ್ಷ

ಮಧ್ಯಸ್ಥಗಾರರ 2.0 ಅಭಿಯಾನ ಸದುಪಯೋಗಕ್ಕೆ ನ್ಯಾ. ಶಶಿಧರ ಸೂಚನೆ

ದಿ.ಅಟಲ್ ಬಿಹಾರಿ ವಾಜಪೇಯಿ ಜನ್ಮದಿನೋತ್ಸವ

ಇರ್ಫಾನ್ ಬೀಳಗಿ ಗೆ ರಾಷ್ಟ್ರೀಯ ಮಾಧ್ಯಮ ಸೇವಾ ರತ್ನ ಪ್ರಶಸ್ತಿ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ವಿಶಾಲವಾಗಿ ಹಬ್ಬಿ ಬೆಳೆಯುವ ವಟವೃಕ್ಷ
    In ವಿಶೇಷ ಲೇಖನ
  • ಮಧ್ಯಸ್ಥಗಾರರ 2.0 ಅಭಿಯಾನ ಸದುಪಯೋಗಕ್ಕೆ ನ್ಯಾ. ಶಶಿಧರ ಸೂಚನೆ
    In (ರಾಜ್ಯ ) ಜಿಲ್ಲೆ
  • ದಿ.ಅಟಲ್ ಬಿಹಾರಿ ವಾಜಪೇಯಿ ಜನ್ಮದಿನೋತ್ಸವ
    In (ರಾಜ್ಯ ) ಜಿಲ್ಲೆ
  • ಇರ್ಫಾನ್ ಬೀಳಗಿ ಗೆ ರಾಷ್ಟ್ರೀಯ ಮಾಧ್ಯಮ ಸೇವಾ ರತ್ನ ಪ್ರಶಸ್ತಿ
    In (ರಾಜ್ಯ ) ಜಿಲ್ಲೆ
  • ಕಾಯಂ ವ್ಯವಸ್ಥೆಗೆ ಕೋರಿ ಮುಂದಿನ ಕ್ರಮ: ಎಂ.ಬಿ.ಪಾಟೀಲ
    In (ರಾಜ್ಯ ) ಜಿಲ್ಲೆ
  • ಮಕ್ಕಳ ಸಾಹಿತ್ಯ ಸಂಗಮದ ಅಧ್ಯಕ್ಷರಾಗಿ ಲಕ್ಷ್ಮೀಪುತ್ರ ಆಯ್ಕೆ
    In (ರಾಜ್ಯ ) ಜಿಲ್ಲೆ
  • ಪ್ರಜಾಪ್ರಭುತ್ವ ಮೌಲ್ಯಗಳ ಬಲಪಡಿಸಲು ಡಿಜಿಟಲ್ ವೇದಿಕೆಗಳು ಅಗತ್ಯ
    In (ರಾಜ್ಯ ) ಜಿಲ್ಲೆ
  • ವಿಜ್ಞಾನ-ತಂತ್ರಜ್ಞಾನವೇ ದೇಶದ ಭವಿಷ್ಯಶಕ್ತಿ :ಡಾ.ಕಾಕೋಡಕರ
    In (ರಾಜ್ಯ ) ಜಿಲ್ಲೆ
  • ದಲಿತರು-ಮುಸಲ್ಮಾನರು ಒಗ್ಗಟ್ಟಿನಿಂದ ಹೋರಾಟ ಮಾಡಿ
    In (ರಾಜ್ಯ ) ಜಿಲ್ಲೆ
  • ಆಧ್ಯಾತ್ಮ ನಮ್ಮನ್ನು ಪ್ರಸನ್ನರನ್ನಾಗಿ ಮಾಡುತ್ತದೆ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2025 udayarashminews.com. Designed by udayarashmi news .

Type above and press Enter to search. Press Esc to cancel.