ವಿಜಯಪುರ: ವಿಜಯಪುರ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾ ಬೀದಿಬದಿ ವ್ಯಾಪಾರಿಗಳ ವಿಭಾಗದ ಸಭೆಯನ್ನು ಆಯೋಜಿಸಲಾಗಿತ್ತು.
ಸಭೆಯ ಅಧ್ಯಕ್ಷತೆಯನ್ನು ಕೆಪಿಸಿಸಿ ಬೀದಿಬದಿ ವ್ಯಾಪಾರಿಗಳ ವಿಭಾಗದ ಅಧ್ಯಕ್ಷ ಡಾ.ಸಿ.ಇ. ರಂಗಸ್ವಾಮಿ ವಹಿಸಿ ಮಾತನಾಡಿ, ಕೇಂದ್ರದಲ್ಲಿ ಡಾ.ಮನಮೋಹನ ಸಿಂಗ್‌ರವರು ಪ್ರಧಾನಿಯಾಗಿದ್ದಾಗ ಬೀದಿಬದಿ ವ್ಯಾಪಾರಿಗಳ ಭದ್ರತೆಗೆ ಕಾನೂನನ್ನು ರೂಪಿಸಿರುವರು. ಅದರಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬೀದಿಬದಿ ವ್ಯಾಪಾರಿಗಳಿಗೆ ಅವರು ವ್ಯಾಪಾರ ಮಾಡುವ ಸ್ಥಳದಲ್ಲಿ ಚಿಕ್ಕಮಳಿಗೆಗಳನ್ನು, ತಳ್ಳು ಗಾಡಿಗಳನ್ನು ನೀಡಲು ರೂ.೨೦ ಕೋಟಿ ಅನುದಾನವನ್ನು ಕಾಯ್ದಿರಿಸಿದ್ದಾರೆ. ಅದರಂತೆ ವಿಜಯಪುರ ಮಹಾನಗರಪಾಲಿಕೆಯಲ್ಲಿ ರೂ.೧.೦೦ ಕೋಟಿ ಅನುದಾನ ಮೀಸಲಿಡಲಾಗಿದೆ. ಇದರ ಸದುಪಯೋಗವನ್ನು ಬೀದಿಬದಿ ವ್ಯಾಪಾರಿಗಳು ಪಡೆದುಕೊಳ್ಳಬೇಕು. ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿಯಾದ ರಾಜು ಆಲಗೂರರವರ ಗೆಲುವಿಗೆ ತಮ್ಮ ಬಳಿ ಬರುವ ಗ್ರಾಹಕರ ಮನವೊಲಿಸಿ ಪ್ರಯತ್ನಿಸಬೇಕೆಂದು ಕರೆ ನೀಡಿದರು.
ರಾಜ್ಯ ಉಪಾಧ್ಯಕ್ಷ ಮಣಿಗೌಡ, ಜಿಲ್ಲಾ ಅಧ್ಯಕ್ಷ ಲಾಲಸಾಬ ಕೊರಬು, ಓಬಿಸಿ ಅಧ್ಯಕ್ಷ ಸಾಹೇಬಗೌಡ ಬಿರಾದಾರ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಸುಬಾಷ ಕಾಲೇಬಾಗ ಸಭೆಯಲ್ಲಿ ಮಾತನಾಡಿದರು.
ಸಭೆಯಲ್ಲಿ ಅಬ್ದುಲ್ ಸತ್ತಾರ ಬಾಗವಾನ, ಮೈಬೂಬ ವಾಟಿ, ರಮಜಾನ ಶೇಖ, ಅನೀಲ ಚವ್ಹಾಣ, ಮೈಬೂಬ ಜಾಗಿರದಾರ, ಜುಮ್ಮಣ್ಣ ತಾಳಿಕೋಟಿ, ಚಾಂದಸಾಬ ದೇಸಾಯಿ, ಶರಣಮ್ಮ ನಾಯಕ, ಸಿದ್ದು ಹಡಪದ, ವಿದ್ಯಾಶ್ರೀ, ಭಾಗ್ಯಶ್ರೀ, ಜಯರಾಬಿ ಚೌದರಿ, ಎಂ.ಎA. ಮುಲ್ಲಾ, ಫಿರೋಜ ಶೇಖ, ಸೋಮಣ್ಣ ತಳವಾರ, ಕೃಷ್ಣಾ ಲಮಾಣಿ, ಸಂತೋಷ ಬಾಲಗಾಂವಿ, ಮಹಾದೇವ ಜಾಧವ, ಎ.ಆರ್. ಕಂಬಾಗಿ, ಜಯಪ್ರಭು ಕೊಳಮಲಿ, ಭೀಮರಾಯ ಸೀತಿಮನಿ, ಮಹಾಲಿಂಗ ಕೆಂಗಲಗುತ್ತಿ, ರಮೇಶ ಪೂಜಾರಿ, ಶಾಂತವ್ವ ಹೊಸಮನಿ, ಅಬ್ದುಲ್‌ಪೀರಾ ಜಮಖಂಡಿ, ಬಸಪ್ಪ ಕೋಲಕಾರ ಮುಂತಾದವರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

