ಅಫಜಲಪುರ ಸರಕಾರಿ ಮಹಾವಿದ್ಯಾಲಯದಲ್ಲಿ ಎನ್‌ಎಸ್‌ಎಸ್ ಶಿಬಿರಕ್ಕೆ ಚಾಲನೆ
ಅಫಜಲಪುರ: ವಿದ್ಯಾರ್ಥಿಗಳಲ್ಲಿ ಪಠ್ಯೇದ ಜೊತೆಗೆ ಪಠ್ಯೇತರ ಚುಟುವಟಿಕೆಗಳಲ್ಲಿ ತೊಡಗಿಸುವುದರಿಂದ ವಿದ್ಯಾರ್ಥಿಗಳಲ್ಲಿ ಸಮಾಜಿಕ ಕಳಕಳಿ ನೆಲೆಯೂರುತ್ತದೆ ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಸಮಾಜಿಕ ಜವಾಬ್ದಾರಿಯನ್ನು ಹೆಚ್ಚಿಸಿಕ್ಕೊಳ್ಳಬೇಕು ಎಂದು ಮಳೇಂದ್ರ ಮಠದ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು ಹೇಳಿದರು.
ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ೨೦೨೩-೨೪ ನೇ ಸಾಲಿನ ಎನ್‌ಎಸ್‌ಎಸ್ ಶಿಬಿರದ ಸಾನಿಧ್ಯವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮಾಡಿದಷ್ಟೇ ಅವರಲ್ಲಿ ಉತ್ತಮ ಸಂಸ್ಕಾರ, ಪರಸ್ಪರ ಗೌರವ ಮನೋಬಾವನೆಯೂ ಕೂಡಾ ಬೆಳೆಸಿಕೊಳ್ಳಬೇಕು. ಎಲ್ಲ ಕ್ಷೇತ್ರದಲ್ಲಿ ಜನ ಮೆಚ್ಚುವಂತೆ ಇರಬೇಕಾದರೆ ಸೇವಾ ಮನೋಭಾವ ಹಿನ್ನಲೆಯ ಕಾರ್ಯಕ್ರಮಗಳು ನಡೆಯುತ್ತಿರಬೇಕು ಇಂದು ನಡೆಯುತ್ತಿರುವ ಶಿಬಿರವು ಎಲ್ಲರಿಗೂ ಸಹಕಾರಿಯಾಗಲಿ ಎಂದು ಹೇಳಿದರು.
ಸಿಬ್ಬಂದಿ ಕಾರ್ಯಧರ್ಶಿ ಎಂ.ಎಸ್. ರಾಜೇಶ್ವರಿ ಮಾತನಾಡಿ, ಪ್ರಸ್ತುತ ದಿನಮಾನಗಳಲ್ಲಿ ವಿದ್ಯಾರ್ಥಿಗಳು ಎಲ್ಲ ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿರಬೇಕು. ಈ ನಿಟ್ಟಿನಲ್ಲಿ ಓದಿನೊಂದಿಗೆ ಸಾಮಾಜಿಕ ನೆಲಗಟ್ಟು ಅರಿತುಕ್ಕೊಳ್ಳಬೇಕು ಎಂದರು.
ಪ್ರಾಚಾರ್ಯ ಮಾಣಿಕರಾವ್ ಕುಲಕರ್ಣಿ ಅಧ್ಯಕ್ಷತೆ ವಹಿಸಿ ಮಾತನಾಡಿ ಪ್ರತಿ ವರ್ಷ ಕಾಲೇಜಿನ ವತಿಯಿಂದ ಎನ್‌ಎಸ್‌ಎಸ್
ಶಿಬಿರಗಳು ನಡೆಯುತ್ತಿರುತ್ತವೆ. ಶಿಬಿರದಲ್ಲಿ ಭಾಗವಹಿಸಿದ ಎಲ್ಲರೂ ಪರಸ್ಪರ ಒಂದಾಗಿ ಶಿಬರವನ್ನು ಯಶಸ್ವಿಗೊಳಿಸಬೇಕು ಎಂದರು.
ಎನ್‌ಎಸ್‌ಎಸ್ ಅಧಿಕಾರಿ ಡಾ.ದತ್ತಾತ್ರೇಯ ಸಿ.ಹೆಚ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಡಾ.ಸೂಗುರೇಶ್ವರ ಆರ್.ಎಂ, ಎ.ಸಿ, ಡಾ.ಸಾವಿತ್ರಿ ಕೃಷ್ಣ, ಭಾರಿ, ಡಾ.ಮಹ್ಮದ್‌ಯುನುಸ್, ಶ್ರೀದೇವಿ ರಾಠೋಡ, ಡಾ.ವಿನಾಯಕ ಕುಲಕರ್ಣಿ, ಡಾ.ಶಾಂತಲಾ ಸುರೇಶ ಮುಗಳಿ, ಹೀರೂ ರಾಠೋಡ, ಡಾ.ಸಂಗಣ್ಣ ಸಿಂಗೆ, ಡಾ.ಕವಿತಾ ರಾಠೋಡ, ಶರಣಬಸವೇಶ್ವರ, ಅಶ್ವಿನಿ ಅಪ್ಪಾರಾವ, ಗೌರಿಶಂಕರ ಭೂರೆ, ಸಂತೋಷ ಬಡಿಗೇರ ಇದ್ದರು.
ಕಾರ್ಯಕ್ರಮವನ್ನು ಶರಣಮ್ಮ ನಿರೂಪಿಸಿದರು. ಸಂಜೀವಕುಮಾರ ವಂದಿಸಿದರು.

