ತಿಕೋಟಾ: ವಿಧ್ಯಾರ್ಥಿ ಜೀವನದಲ್ಲಿ ಅಕ್ಷರ ಜ್ಞಾನದ ಜೊತೆ ಶಿಸ್ತು ಒಳ್ಳೆಯ ಸಂಸ್ಕಾರ ಪಡೆದುಕೊಂಡು ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬಾಳಬೇಕು ಎಂದು ಮುಖ್ಯೋಪಾಧ್ಯಾಯ ಎಸ್.ಎನ್.ತಡಲಗಿ ಹೇಳಿದರು.
ತಾಲ್ಲೂಕಿನ ಬಾಬಾನಗರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಹಿರೇಕುರುಬರ ವಸ್ತಿ ಶಾಲೆಯಲ್ಲಿ ಮಂಗಳವಾರ ನಡೆದ ಐದನೇ ತರಗತಿ ವಿಧ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದಲ್ಲಿ ಅವರು ಮಾತನಾಡಿದರು.
ಯಾವುದೇ ತಂದೆ ತಾಯಿ ಹಾಗೂ ಶಿಕ್ಷಕರು ಮಕ್ಕಳು ಕೆಟ್ಟವರಾಗಲಿ ಎಂದು ಬಯಸುವದಿಲ್ಲ. ಅವರು ಮಕ್ಕಳ ಕುರಿತು ಹಲವು ಕನಸುಗಳನ್ನು ಇಟ್ಟುಕೊಂಡಿರುತ್ತಾರೆ. ಅವರ ಕನಸು ಸಾಕಾರಗೊಳಿಸಲು ನಿಮ್ಮ ಜೀವನದಲ್ಲಿ ಉತ್ತಮ ನಡವಳಿಕೆ ಅಳವಡಿಕೊಳ್ಳಬೇಕು. ಶಿಕ್ಷಕ ತಾನು ಕಲಿಸಿದ ಕಲಿಕೆಯನ್ನು ಮಕ್ಕಳಿಂದ ವಾಪಸ್ಸು ಪಡೆದಾಗ ಸಂತೃಪ್ತನಾಗುತ್ತಾನೆ ಎಂದರು.
ಈ ಸಂದರ್ಭದಲ್ಲಿ ಆನಂದ ಗಾರ್ಗಿ, ಕೆ.ಎಂ.ಗಳತಗಿ, ಎಂ.ಜಿ.ಕರ್ಜಗಿ, ಪಿ.ಎಸ್.ಗದ್ಯಾಳ, ಬಸವರಾಜ ನಾವಿ, ಯಲ್ಲಪ್ಪ ಜಂಪಾನಿ, ಸಾಬು ಹೊನವಾಡ, ಎಚ್.ಎಂ.ಕಾಲೆಬಾಗ್, ಸುನೀಲ ಕಠಾರೆ, ಎಸ್.ವೈ.ಬಾಗೆನವರ, ರಮೇಶ ಹಿರೇಕುರುಬರ, ಅಮೋಗಿ ವಿಜಾಪುರ ಇದ್ದರು.

