ಮುದ್ದೇಬಿಹಾಳ: ಲೋಕಸಭೆ ಚುನಾವಣೆ ಕರ್ತವ್ಯಕ್ಕೆ ವಿಶೇಷ ಪ್ರಕರಣದ ಅಡಿ ವಿನಾಯ್ತಿ ನೀಡಬೇಕು ಮತ್ತು ಇನ್ನಿತರ ಕೆಲ ಬೇಡಿಕೆಗಳನ್ನು ಮುಂದಿಟ್ಟು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಇಲ್ಲಿನ ತಹಶೀಲ್ದಾರರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಈ ವೇಳೆ ಸಂಘದ ಅಧ್ಯಕ್ಷ ಬಿ.ಎಚ್.ಮುದ್ನೂರ ಮಾತನಾಡಿ, ಈ ಹಿಂದೆ ನಡೆದ ಗ್ರಾ.ಪಂ ನ ಚುನಾವಣೆ ಮತ್ತು ವಿಧಾನಸಭಾ ಚುನಾವಣೆಗಳ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ನಮ್ಮ ಸಿಬ್ಬಂದಿಯನ್ನು ಹೊತ್ತೊಯ್ಯುವ ಬಸ್ ಅಪಘಾತವಾಗಿ ಸಾಕಷ್ಟು ಶಿಕ್ಷಕರು ತೊಂದರೆ ಅನುಭವಿಸುವಂತಾಗಿತ್ತು. ಆ ಸಂದರ್ಭದಲ್ಲಿ ಹಲವು ಅಧಿಕಾರಿಗಳು ಭೇಟಿ ನೀಡಿ ಸೂಕ್ತ ಪರಿಹಾರ ಕಲ್ಪಿಸುವ ಭರವಸೆ ನೀಡಿದ್ದರು. ಆದರೆ ಈ ವರೆಗೂ ಯಾವುದೇ ಪರಿಹಾರ ಬಂದಿಲ್ಲ. ಈ ಕೂಡಲೇ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ನೀಡಲಾದ ಕರ್ತವ್ಯವನ್ನು ಸರಿಯಾಗಿ ನಿಭಾಯಿಸುವ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದರು.
ಖಜಾಂಚಿ ಎನ್.ಎಸ್.ತುರಡಗಿ ಮಾತನಾಡಿ, ಚುನಾವಣೆ ಕರ್ತವ್ಯವವನ್ನು ಸರಿಯಾಗಿ ನಿಭಾಯಿಸುವ ನಮ್ಮ ಸಮಸ್ಯೆಗಳಿಗೆ ಸ್ಪಂದಿಸಿದಲ್ಲಿ ಸ್ಮರಿಸುವದಾಗಿ ತಿಳಿಸಿದರು.
ಈ ವೇಳೆ ಬಿ.ಎಸ್.ಹೊಳಿ, ಎಸ್.ಆರ್.ಪಾಟೀಲ, ಐ.ಎ.ಹಿರೇಮಠ, ಎಂ.ಬಿ.ಗುಡಗುಂಟಿ, ಎಸ್.ಜಿ.ಪಾಟೀಲ, ಎಸ್.ಎಂ.ಕಟ್ಟಿಮನಿ, ಎಸ್.ಎಸ್.ಪಾಟೀಲ, ಎಸ್.ಎಸ್.ಕುಂಬಾರ, ಬಿ.ಎಚ್.ಭಗವತಿ, ಬಿ.ಬಿ.ನರಸಣಗಿ, ಎಚ್.ಎನ್.ನಾಗಾವಿ, ಜಿ.ಟಿ.ಪಾದಗಟ್ಟಿ ಸೇರಿದಂತೆ ಮತ್ತೀತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

