ದೇವರಹಿಪ್ಪರಗಿ: ಲೋಕಸಭೆಯ ಚುನಾವಣೆ ಅಂಗವಾಗಿ ಕೇಂದ್ರ ಮೀಸಲು ಪಡೆಯ ಯೋಧರು ಹಾಗೂ ಸ್ಥಳೀಯ ಪೊಲೀಸ್ ಸಿಬ್ಬಂದಿ ಪಥ ಸಂಚಲನ ಕೈಗೊಂಡು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
ಪಟ್ಟಣದಲ್ಲಿ ಮಂಗಳವಾರ ಸಾಯಂಕಾಲ ಲೋಕಸಭೆಯ ಚುನಾವಣೆಯ ಪೂರ್ವದಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಹಾಗೂ ಅರಿವು ಮೂಡಿಸುವ ಕಾರ್ಯದ ಅಂಗವಾಗಿ ಪಥ ಸಂಚಲನ ಕಾರ್ಯಕ್ರಮ ಆರಂಭಗೊಂಡಿತು. ಪಥ ಸಂಚಲನದಲ್ಲಿ ಕೇಂದ್ರ ಮೀಸಲು ಪಡೆಯ ೬೦ಕ್ಕೂ ಹೆಚ್ಚು ಯೋಧರು ಹಾಗೂ ಸ್ಥಳೀಯ ಪೊಲೀಸ್ ಠಾಣೆಯ ೩೦ ಸಿಬ್ಬಂದಿಗಳು ಭಾಗವಹಿಸಿದ್ದರು.
ಪಥ ಸಂಚಲನ ಪೊಲೀಸ್ ಠಾಣೆಯಿಂದ ಆರಂಭಗೊಂಡು ದಾನಮ್ಮನಕಳ್ಳಿ, ಮೊಹರೆ ಹಣಮಂತ್ರಾಯ ವೃತ್ತ, ಮೇನ್ ಬಜಾರ್ ಮಾರ್ಗ, ಪತ್ತಾರ ಕಟ್ಟೆ, ಬೇವಿನಕಟ್ಟಿ, ಕರಿದೇವರ ದೇವಸ್ಥಾನ, ಕನಕದಾಸ ವೃತ್ತ, ಭಗತಸಿಂಗ್ ವೃತ್ತ, ಅಂಬೇಡ್ಕರ್ ವೃತ್ತದ ಮೂಲಕ ತೆರಳಿ ಪುನಃ ಪೊಲೀಸ್ ಠಾಣೆ ತಲುಪಿತು.
ಪಥ ಸಂಚಲನದಲ್ಲಿ ಫಸ್ಟ್ ಬಿಎನ್ ಸಿಆರ್‌ಪಿಎಫ್ ಆಫೀಸರ್ ಕಮಾಂಡೆಂಟ್ ಜಹಾಯ್ ಫಾನ್ಸಾ, ಪಿಎಸ್‌ಆಯ್ ಬಸವರಾಜ ತಿಪರಡ್ಡಿ, ಬಿ.ಬಿ.ಕೊಳ್ಳಿ, ಸಿಬ್ಬಂದಿ ಗುರು ಸಿಂಗೇ, ಸಂಜು ತಳವಾರ, ಬಿ.ಎಸ್.ಮೆಡೆದಾರ, ರಾಮನಗೌಡ ಬಿರಾದಾರ ಸೇರಿದಂತೆ ಸಿಬ್ಬಂದಿ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

