ಕಲಕೇರಿ: ಶ್ರೀ ಗುರು ಮರುಳಾರಾಧ್ಯಸಂಸ್ಥಾನ ಹಿರೇಮಠ ಮೂಲ ಪುರುಷರಾದ ಲಿಂಗೈಕ್ಯ ಗುರು ಮರುಳಾರಾಧ್ಯರ ಅಮೃತ ಶೀಲಾಮೂರ್ತಿ ಮೆರವಣಿಗೆಯು ಗ್ರಾಮದ ಯಲ್ಲಾಲಿಂಗ ಮಹಾರಾಜರ ಮಠದಿಂದ ಪ್ರಮುಖ ಬೀದಿಗಳಲ್ಲಿ ಹಾದು ಗುರುಮರುಳಾರಾಧ್ಯ ಸಂಸ್ಥಾನ ಹಿರೇಮಠದವರೆಗೆ, ವಿವಿಧ ವಾಧ್ಯಗಳೊಂದಿಗೆ ನೂರಾರು ಮಹಿಳೆಯರ ಕುಂಭಮೇಳವನ್ನು ಹೊತ್ತುಕೊಂಡು ಅತ್ಯಂತ ಸಡಗರ ಸಂಭ್ರಮದಿಂದ ಅದ್ದೂರಿ ಮೆರವಣಿಗೆ ಮೂಲಕ ಶ್ರೀಮಠಕ್ಕೆ ಮೂರ್ತಿಯನ್ನು ಬರಮಾಡಿಕೊಳ್ಳಲಾಯಿತು.
ಬರಲಿರುವ ಎಪ್ರಿಲ್ ೫ ರಂದು ನೂತನ ಮೂರ್ತಿಯ ಪ್ರಾಣ ಪ್ರತಿಷ್ಠಾನವನ್ನು ಅತ್ಯಂತ ಭಕ್ತಿಭಾವದಿಂದ ಉಜೈನಿ ಜಗದ್ಗುರುಗಳು ಹಾಗೂ ನಾಡಿನ ಮಠಾಧೀಶರು ಹಾಗೂ ಮುಖಂಡರ ನೇತೃತ್ವದಲ್ಲಿ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ ಆ ಕಾರ್ಯಕ್ರಮದಲ್ಲಿ ಕಲಕೇರಿ ಹಾಗೂ ಸತ್ತಮುತ್ತಲಿನ ಗ್ರಾಮಸ್ಥರು ಹಾಗೂ ಶ್ರೀಮಠದ ಶಿಷ್ಯರು ಹಾಗೂ ಭಕ್ತಾಧಿಗಳು ಭಾಗವಹಿಸಲಿದ್ದಾರೆ ಎಂದು ಗ್ರಾಮ ಪಂಚಾಯಿತಿ ಸದಸ್ಯರಾದ ಸುಧಾಕರ ಅಡಕಿ ಅವರು ಮಾತನಾಡಿದರು.
ಈ ವೇಳೆ ಗುರು ಮರುಳಾರಾದ್ಯ ಸಂಸ್ಥಾನ ಹಿರೇಮಠ ಪೀಠಾಧಿಪತಿ ಸಿದ್ದರಾಮ ಶಿವಾಚಾರ್ಯರು, ಪಂಚರಂಗ ಸಂಸ್ಥಾನ ಗದ್ದುಗೆಮಠದ ಪೀಠಾಧಿಪತಿಗಳಾದ ಗುರು ಮಡಿವಾಳೇಶ್ವರ ಶಿವಾಚಾರ್ಯರು, ಹಲಕರ್ಟಿ ಕಟ್ಟಿಮನಿ ಹಿರೇಮಠದ ಪೀಠಾಧಿಪತಿಗಳಾದ ಅಭಿನವ ಮುನೀಂದ್ರ ಶಿವಾಚಾರ್ಯರು, ಮುಖಂಡರಾದ ಸಿದ್ದು ಬುಳ್ಳಾ, ಪ್ರಭುಗೌಡ ಬಿರಾದಾರ, ಪ್ರಕಾಶ ಯರನಾಳ, ವಿಶ್ವನಾಥ ಸಬರದ, ಶಾಂತಪ್ಪ ಪಡಶೆಟ್ಟಿ, ಎಸ್.ಬಿ.ಪಾಟೀಲ, ಮಲಕಾಜಪ್ಪಗೌಡ ಬಿರಾದಾರ, ಮಡಿವಾಳಪ್ಪ ಗುಮಶೆಟ್ಟಿ, ಶಿವಾನಂದ ಪಟಣಶೆಟ್ಟಿ, ಆರ್.ಜಿ.ಗುಮಶೆಟ್ಟಿ, ಸಂಗಪ್ಪ ಬೈಚಬಾಳ, ರಮೇಶ ಅಡಕಿ, ಮುರಗೇಶ ಕಡಕೋಳ, ನಿಂಗಣ್ಣ ಗುಮಶೆಟ್ಟಿ, ಶಾಂತಯ್ಯ ಗಣಾಚಾರಿ, ಮುದಕಣ್ಣ ದೊರೆಗೋಳ, ಸಚೀನ ಝಳಕಿ, ರಾಹುಲ ದೇಸಾಯಿ, ಸುರೇಶರಡ್ಡಿ ಪಾಟೀಲ, ಗಿರೀಶ ಹೆಗ್ಗಣದೊಡ್ಡಿ, ಪರಮಾತ್ಮ ಗಣೇಶಮಠ, ಪ್ರಕಾಶ ಪಡಶೆಟ್ಟಿ, ಸೇರಿದಂತೆ ಶ್ರೀಮಠದ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

