ವಿಜಯಪುರ: ಸಮಾಜದ ಎಲ್ಲ ವರ್ಗದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಬಡವರು,ದಲಿತರು ಮೇಲ್ವರ್ಗದವರು ಸೇರಿದಂತೆ ಎಲ್ಲರನ್ನೂ ಗೌರವ ಭಾವನೆ ಹೊಂದಿದರೆ ರಾಜಕಾರಣ ಮಾಡಲು ಸಾಧ್ಯ ಎಂಬದನ್ನು ಅರಿಯಬೇಕು ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.
ನಗರದಲ್ಲಿ ಭಾನುವಾರ ಭಾರತೀಯ ಜನತಾ ಪಾರ್ಟಿ ಆಯೋಜಿಸಿದ್ದ ಮಹಾಶಕ್ತಿ ಕೇಂದ್ರಗಳ ಪ್ರಮುಖರ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ರಾಜಕಾರಣ ಮಾಡಲು ಕಾರ್ಯಕರ್ತರು ಬೇಕು ಅವರು ಇಲ್ಲದಿದ್ದರೆ ನಾವು ಸೊನ್ನೆ ಇದ್ದಂತೆ ಅವರಿಂದ ಬಹಳಷ್ಟು ಕಲಿತಿದ್ದೇನೆ. ಬೂತ್‌ಗಳಲ್ಲಿನ ಶಕ್ತಿಯೂ ಎಲ್ಲಿಯೂ ಎಲ್ಲಿಯೂ ಇಲ್ಲ. ಎಲ್ಲಾ ಬೂತ್‌ಗಳಲ್ಲಿ ಕಾಯಕರ್ತರು ಸರಿಯಾಗಿ ಪ್ರಚಾರ ಮಾಡಿದರೆ ಎಂದಿಗೂ ಸೋಲಾಗುವದಿಲ್ಲ. ಬೂತಗಳಲ್ಲಿ ಹೆಚ್ಚಿನ ಜವಾಬ್ದಾರಿಂದ ಕಾರ್ಯನಿರ್ವಹಿಸುವಂತೆ ಕಾಯಕರ್ತರಿಗೆ ಕರೆ ನೀಡಿದರು. ಕಳೆದ ೧೫ ವರ್ಷಗಳಿಂದ ಜಿಲ್ಲೆಯ ಸಂಸದನಾಗಿ ಕೇಂದ್ರ ಸಚಿವನಾಗಿ ರೈಲ್ವೇ ಹಳಿಗಳ ವಿದ್ಯುತ್ತಿಕರಣ, ರಾಷ್ಟ್ರೀಯ ಹೆದ್ದಾರಿ, ಎನ್.ಟಿ.ಪಿಸಿ ಸೇರಿದಂತೆ ಕಳೆದ ೧೦ ವರ್ಷಗಳಲ್ಲಿ ೧ ಲಕ್ಷ ಕೋಟಿ ರೂ. ವೆಚ್ಚದ ಅಭಿವೃದ್ಧಿ ಕೆಲಸಗಳಾಗಿವೆ ಎಂದು ಸಮರ್ಥಿಸಿಕೊಂಡರು. ಲಂಬಾಣಿ ಜನರ ಅತ್ಯಂತ ವಿಶ್ವಾಸ ಪ್ರೀತಿಯಿಂದ ಇದ್ದೇನೆ. ನನ್ನ ಮತ ಸಹ ತಾಂಡಾದಲ್ಲಿಯೇ ಇದೆ. ಲಂಬಾಣಿ ಜನರ ಬಗ್ಗೆ ನನ್ನ ಹೇಳಿಕೆ ತಿರುಚಲಾಗಿದೆ. ಅವರ ಬಗ್ಗೆ ನಾನು ಕೆಟ್ಟ ಪದ ಪ್ರಯೋಗಿಸಿಲ್ಲ ಎಂದರು.
ರಾಜ್ಯದ ಕಾಂಗ್ರೆಸ್ ಸರ್ಕಾರ ದಲಿತರ ಅಭಿವೃದ್ಧಿಗೆ ಇದ್ದ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಅವರಿಗೆ ತಕ್ಕ ಪಾಠ ಕಲಿಸಬೇಕೆಂದರು. ರಾಮಕೃಷ್ಣ ಹೆಗಡೆ,ಜೆ.ಎಚ್.ಪಟೇಲ ಅವರ ಮಾರ್ಗದಲ್ಲಿ ನಡೆಯುತ್ತಿದ್ದೇನೆ. ಅವರೇ ನನಗೆ ಕೊನೆಗೆ ಕ್ಷಣದಲ್ಲಿ ಬಿಜೆಪಿ ಮುದೊಂದು ದಿನ ಹಳ್ಳಿ ಹಳ್ಳಿಗಳಲ್ಲಿ ದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತದೆ. ಆದರೆ ಅವರು ಇದೇ ಪಕ್ಷಕ್ಕೆ ಹೋಗು ಎಂದು ಎಲ್ಲಿಯೂ ಹೇಳಲಿಲ್ಲ. ಆದರೂ ಬಿಜೆಪಿ ಮೂಲಕ ಮತ್ತೆ ರಾಜಕೀಯ ಜೀವನ ಮುಂದುವರೆಸಿಕೊಂಡು ಬಂದೇ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ ಮಾತನಾಡಿ, ದೇಶದಲ್ಲಿ ೧೦ ವರ್ಷದ ಪ್ರಧಾನಿ ನರೇಂದ್ರ ಮೋದಿ ಆಡಳಿತಕ್ಕೆ ಜಗತ್ತೆ ಮೆಚ್ಚಿದೆ. ೩ನೇ ಬಾರಿ ಪ್ರದಾನಿಯಾಗಲು ದೇಶದ ಜನರೆ ತೀರ್ಮಾನಿಸಿದ್ದಾರೆ. ೨೦೧೪ಕ್ಕಿಂತ ಮೊದಲು ದೇಶದಲ್ಲಿ ಸುರಕ್ಷತೆ ಭಾವನೆ ಇರಲಿಲ್ಲ. ಕಳೆದ ೧೦ ವರ್ಷಗಳಲ್ಲಿ ರಕ್ಷಣಾ ಕ್ಷೇತ್ರದಲ್ಲಿ ಪ್ರಧಾನಿ ಮೋದಿ ಅವರ ಆಡಳಿತವನ್ನು ಜನರು ಮೆಚ್ಚಿದ್ದಾರೆ ಎಂದರು.
ಪ್ರಧಾನಿ ಮೋದಿ, ಗೃಹ ಸಚಿವ ಅಮಿತಾ ಷಾ ಅವರ ವಿರುದ್ಧ ಮುಖ್ಯಮಂತ್ರಿಗಳ ಪುತ್ರನ ಪದ ಪ್ರಯೋಗ ಯಾರೂ ಕ್ಷಮಿಸಲ್ಲ ಇವರ ಕುತಂತ್ರ ನಡೆಯುವದಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ಚುನಾವಣೆ ಗೆಲ್ಲಲು ಪ್ರತಿ ಬೂತ್ ಗೆಲ್ಲುವದು ಅನಿವಾರ್ಯ ಕೇಂದ್ರ ಸರ್ಕಾರದ ಯೋಜನೆಗಳನ್ನುಉ ಮನೆ-ಮನೆಗಳಿಗೆ ಕಾರ್ಯಕರ್ತರು ತಲುಪಿಸಬೇಕು. ಅತೀ ಹೆಚ್ಚು ಮತಗಳಿಂದ ರಾಜ್ಯದ ಎಲ್ಲ ಬಿಜೆಪಿ ಅಭ್ಯರ್ಥಿಗಳು ಗೆಲುವಿಗೆ ಶ್ರಮಿಸಬೇಕೆಂದು ಕರೆ ನೀಡಿದರು.
ವೇದಿಕೆಯ ಮೇಲೆ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ, ಮಾಜಿ ಶಾಸಕ ಜಿಲ್ಲಾ ಚುನಾವಣಾ ಪ್ರಭಾರಿ, ರಾಜಶೇಖರ ಶೀಲವಂತ, ಮಾಜಿ ಶಾಸಕ ಸೋಮನಗೌಡ ಪಾಟೀಲ, ಮುಖಂಡ ವಿಜುಗೌಡ ಪಾಟೀಲ, ಮಾಜಿ ವಿ.ಪ.ಸದಸ್ಯ ಅರುಣ ಶಹಾಪೂರ, ಸಂಘಟನಾ ಮಹಾಮಂತ್ರಿ ಪ್ರಕಾಶ ಅಕ್ಕಲಕೋಟ, ಬೆಳಗಾವಿ ಪ್ರಭಾರಿ, ಚಂದ್ರಶೇಖರ ಕವಟಗಿ, ಸಂಜೀವ ಐಹೊಳೆ,ಮಹಿಳಾ ಘಟಕ ಅಧ್ಯಕ್ಷೆ ಸ್ವಪ್ನಾ ಕಣಮುಚನಾಳ, ಸೇರಿದಂತೆ ಹಲವರು ಇದ್ದರು. ಪ್ರಧಾನ ಕಾರ್ಯದರ್ಶಿ ಈರಣ್ಣಾ ರಾವೂರ ಸ್ವಾಗತಿಸಿದರು. ಮುಳುಗೌಡ ಪಾಟೀಲ ನಿರೂಪಿಸಿದರು.
ಈ ಸಂದರ್ಭದಲ್ಲಿ ವಿವಿಧ ತಾಲೂಕುಗಳ ಮಹಾಶಕ್ತಿ ಕೇಂದ್ರಗಳ ಪ್ರಮುಖರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

