ಬಸವನಬಾಗೇವಾಡಿ: ಪಟ್ಟಣದ ಸಮೀಪವಿರುವ ನಾಗೂರ ಗ್ರಾಮದ ಆರಾಧ್ಯದೈವ ಯಮನೂರೇಶ್ವರ ಜಾತ್ರೆಯಂಗವಾಗಿ ಭಾನುವಾರ ವಿವಿಧ ಕಸರತ್ತಿನ ಸ್ಪರ್ಧೆ, ಜಂಗೀ ಕುಸ್ತಿ ಸ್ಪರ್ಧೆಗಳು ಗಮನ ಸೆಳೆದವು.
ಬೆಳಗ್ಗೆ ಜರುಗಿದ ಕಸರತ್ತಿನ ಸ್ಪರ್ಧೆಯಲ್ಲಿ ವಿವಿಧೆಡೆಗಳಿಂದ ಆಗಮಿಸಿದ್ದ ಫೈಲ್ವಾನರು ಭಾಗವಹಿಸಿದ್ದರು. ಸಾಗ ಕಲ್ಲೆತ್ತುವ ಸ್ಪರ್ಧೆಯಲ್ಲಿ ಮಹಾರಾಷ್ಟ್ರದ ಜತ್ತ ತಾಲೂಕಿನ ಆಸಂಗಿ ಗ್ರಾಮದ ಅಫ್ಜಲಖಾನ ಮುಜಾವರ ಪ್ರಥಮ ಸ್ಥಾನ, ದ್ವಿತೀಯ ಸ್ಥಾನವನ್ನು ರಿಯಾಜ ಜಮದಾರ,ತೃತೀಯ ಸ್ಥಾನವನ್ನು ರಾಜು ತಾಳಿಕೋಟಿ ಪಡೆದುಕೊಂಡರು. ಒತ್ತುಗಲ್ಲು ಸ್ಪರ್ಧೆಯಲ್ಲಿ ಶಿವಾನಂದ ಗೋಕಾಕ ಪ್ರಥಮ ಸ್ಥಾನ, ವಿಠ್ಠಲ ಮನ್ನಿಕೇರಿ ದ್ವಿತೀಯ ಸ್ಥಾನ, ಮುತ್ತಪ್ಪ ಮತ್ತು ಸಂತೋಷ ತೃತೀಯ ಸ್ಥಾನ ಪಡೆದುಕೊಂಡರು.
ಸಂಜೆ ಜರುಗಿದ ಜಂಗೀ ಕುಸ್ತಿ ಸ್ಪರ್ಧೆಯಲ್ಲಿ ದ್ಯಾಬೇರಿ, ಮಾಲ, ಸೋಲಾಪೂರ, ನಿಪ್ಪಾಣಿ, ಲಚ್ಯಾಣ, ನಿಂಬಾಳ, ಹೊರ್ತಿ, ಚಾಂದಕೋಟೆ, ವಿಜಯಪುರ, ಮಸ್ಕಿ, ಇಂಡಿ, ಸೇರಿದಂತೆ ವಿವಿಧೆಡೆಗಳಿಂದ ಆಗಮಿಸಿದ್ದ ಜಟ್ಟಿಗಳು ಭಾಗವಹಿಸಿದ್ದರು. ಜಂಗೀ ಕುಸ್ತಿ ಸ್ಪರ್ಧೆ ಜನರನ್ನು ರೋಮಾಂಚನಗೊಳಿಸಿತು. ಕಡೆ ಕುಸ್ತಿಯು ದ್ಯಾಬೇರಿಯ ಗೋಪಾಲ ಹಾಗೂ ಉಮದಿಯ ಅಶೋಕ ನಡುವೆ ಜರುಗಿ ದ್ಯಾಬೇರಿಯ ಗೋಪಾಲ ಜಯಶಾಲಿಯಾಗಿ ನಗದು ಐದು ಸಾವಿರ ರೂಪಾಯಿ ಹಾಗೂ ಬೆಳ್ಳಿ ಕಡಗವನ್ನು ತಮ್ಮದಾಗಿಸಿಕೊಂಡರು.
ಎರಡು ಸ್ಪರ್ಧೆಯ ನಡೆಯುವ ಸಂದರ್ಭದಲ್ಲಿ ಸತ್ಯಪ್ಪ ಬಂಡಿವಡ್ಡರ, ಅಂಬರೀಶ ಬೆಲ್ಲದ, ಪ್ರಭು ಚವ್ಹಾಣ, ಚಂದ್ರಶೇಖರ ಮುಳವಾಡ, ಚಂದ್ರಶೇಖರ ಮರೋಳ, ಮಹೇಶ ಮುಳವಾಡ, ಶರಣು ಮರೋಳ, ಹೈದರ ಸುತಾರ, ಯಮನೂರಿ, ಪೂಜಾರಿ, ಮಹಾಂತೇಶ ಗೌರಾ, ಬಾಬು ಚಪ್ಪರಬಂದ, ಬಂದೇನವಾಜ ವಾಲೀಕಾರ, ಬಸನಗೌಡ ಬಿರಾದಾರ, ಬಸಯ್ಯ ಶೀಕಳವಾಡಿ, ಶಂಕ್ರೆಪ್ಪ ಪೂಜಾರಿ, ಧರ್ಮಣ್ಣ ಪೂಜಾರಿ, ಗಿರಿಯಪ್ಪ ಹೆಬ್ಬಾಳ, ಶಿವಾನಂದ ಬೆಣ್ಣೂರ, ಖಾಜೇಸಾಬ ವಾಲೀಕಾರ, ಶಿವಾನಂದ ಬೆಲ್ಲದ, ಮಂಜುನಾಥ ಮುಳವಾಡ, ಶಿವಪ್ಪ ನಂದಿಹಾಳ, ಮಹಿಬೂಬ ಲೋದಿ, ಮಲ್ಲಪ್ಪ ಬೊಮ್ಮಣಗಿ, ಚಾಂದು ಚಪ್ಪರಬಂದ, ರಫೀಕ ವಾಲೀಕಾರ, ಅಪ್ಪು ಲಮಾಣಿ, ನೇಮು ಲಮಾಣಿ, ಲಕ್ಷ್ಮಣ ಬಂಡಿವಡ್ಡರ, ರಮೇಶ ನಿಡಗುಂದಿ, ರಿಯಾಜ ಅವಟಿ ಸೇರಿದಂತೆ ಇತರರು ಭಾಗವಹಿಸಿದ್ದರು. ರಾತ್ರಿ ನವಲಗುಂದ ತಾಲೂಕಿನ ನಗನೂರಿನ ಇಮಾಮಸಾಬ ಒಲೆಪ್ಪನವರ ಅವರಿಂದ ಭಾವೈಕ್ಯ ಜಾನಪದ ಗೀತೆಗಳು ಜರುಗಿದವು. ಜಾತ್ರೆಯಂಗವಾಗಿ ಸೋಮವಾರ ಬೆಳಗ್ಗೆ ೯ ಗಂಟೆಗೆ ೫೫ ಎಚ್ಪಿ ಟ್ಯಾಕ್ಟರ್ ಜಗ್ಗುವ ಸ್ಪರ್ಧೆ, ರಾತ್ರಿ ೧೦.೩೦ ಗಂಟೆಗೆ ಸಿಡಿದೆದ್ದ ಸೂರ್ಯಚಂದ್ರ ನಾಟಕ ಪ್ರದರ್ಶನವಿದೆ ಎಂದು ಜಾತ್ರಾ ಕಮೀಟಿಯ ಸದಸ್ಯರು ತಿಳಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

